ಶಿವಮೊಗ್ಗ : ಬಿಜೆಪಿ ಸರ್ಕಾರ ಬಂದ ಮೇಲೆ ದ್ವೇಷ ಹೆಚ್ಚಾಗಿದೆ. ಆರ್‌ಎಸ್‌ಎಸ್‌ ಕಾರ್ಯಕರ್ತರು ಕಾನೂನು ಕೈಗೆತ್ತಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತ್‌ ಜೋಡೋ ಪಾದಯಾತ್ರೆ ಮೂಲಕ ರಾಹುಲ್‌ ಗಾಂಧಿ ವ್ಯಕ್ತಿತ್ವ ಅನಾವರಣಗೊಂಡಿದೆ. 3500 ಕಿಮೀ ಪಾದಯಾತ್ರೆ ಮಾಡುವುದು ಸುಲಭದ ವಿಷಯವಲ್ಲ. ಬಿಜೆಪಿ ಸರ್ಕಾರದ ಬಂದ ಮೇಲೆ ದ್ವೇಷ ಹೆಚ್ಚಾಗಿದೆ. ಆರ್‌ಎಸ್‌ಎಸ್ ಕಾರ್ಯಕರ್ತರು ಕಾನೂನು ಕೈಗೆತ್ತಿಕೊಂಡಿದ್ದಾರೆ. ಸಹಜ ಸಾವು.. ಹೆಣದ ಮೇಲೆ ರಾಜಕೀಯ ಮಾಡಿದ್ದಾರೆ. ಪರೇಶ್ ಮೇಸ್ತಾರಂತಹ ಅಲ್ಪಸಂಖ್ಯಾತರ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು.


ಇದನ್ನೂ ಓದಿ: ಬಿಜೆಪಿ ಸರ್ಕಾರವು ಕರ್ನಾಟಕ ಪೊಲೀಸ್ ವ್ಯವಸ್ಥೆಯ ನೈತಿಕ ಸ್ಥೈರ್ಯ ಕುಗ್ಗಿಸಿದೆ: ಎಚ್‌ಡಿಕೆ ಆಕ್ರೋಶ


ಅಲ್ಲದೆ, ನಾನೂ ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಟ್ಟಿದೆ. ಅದು ಕೊಲೆ ಅಲ್ಲ ಎನ್ನುವ ವರದಿ ಬಂತು. 2008 ರಿಂದ ಬಿಜೆಪಿ ಸರ್ಕಾರವು ಸಿಬಿಐಗೆ ಯಾವುದೇ  ಪ್ರಕರಣ ವಹಿಸಲಿಲ್ಲ. ಬಿಜೆಪಿ ಯೋಗ್ಯತೆ ಇಲ್ಲ. ಒಂದೇ ಒಂದು ಕೇಸ್ ಸಿಬಿಐ ಕೊಟ್ಟಿಲ್ಲ. ಶಿವಮೊಗ್ಗದಲ್ಲಿ ಈಶ್ವರಪ್ಪ ಅವರೇ ಗಲಾಟೆ ಮಾಡಿಸಿದ್ದಾರೆ. ಈಶ್ವರಪ್ಪ  ಸಚಿವರಾದ ಸಂದರ್ಭದಲ್ಲಿ ಹೆಣದ ಮೇಲೆ ರಾಜಕಾರಣ ಮಾಡಿದ್ದರು. 144 ಸೆಕ್ಷನ್ ನಡುವೆ ಹರ್ಷ ಶವಯಾತ್ರೆ ಈಶ್ವರಪ್ಪ ಮಾಡಿದ್ದರು ಎಂದು ದೂರಿದರು.


ಸಚಿವ ಶ್ರೀರಾಮುಲುಗೆ ಸಂವಿಧಾನ ಗೊತ್ತಿಲ್ಲ. ಆತ ಒಬ್ಬ  ಪೆದ್ದ. ಯಾರೋ ಬರೆದುಕೊಟ್ಟಿದ್ದು ಓದುತ್ತಾನೆ. ಬಿಜೆಪಿಯನ್ನು ತೊಲಗಿಸಲು ಈಗ ಬಿಜೆಪಿ ಸಂಕಲ್ಪ ಸಮಾವೇಶ ನಡೆಯುತ್ತಿದೆ ಎಂದು ಸಿದ್ದರಾಮಯ್ಯ ಅವರು ಲೇವಡಿ ಮಾಡಿದರು. ಅಲ್ಲದೆ, 70 ರಿಂದ 80 ಲಕ್ಷ ರೂ. ಕೊಟ್ಟು ಪೊಲೀಸ್‌ ಇಲಾಖೆಗೆ ಬರ್ತಾರೆ. ಅವರು ಹೇಗೆ ಪ್ರಮಾಣಿಕವಾಗಿ ಕೆಲಸ ಮಾಡುತ್ತಾರೆ. ಬಿಜೆಪಿ ನಾಯಕರು ಡೋಂಗಿಗಳು. ಬರು ಸುಳ್ಳೇ ಹೇಳ್ತಾರೆ ಎಂದರು.


ಇದನ್ನೂ ಓದಿ: ಬಿಜೆಪಿ ಸರಕಾರದಲ್ಲಿ ಕಾಸಿಗಾಗಿ ಪೋಸ್ಟಿಂಗ್ ನಡೆಯುತ್ತಿದೆ- ಎಚ್.ಡಿ.ಕುಮಾರಸ್ವಾಮಿ ಆರೋಪ
 
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್‌ ಒಬ್ಬ ಜೋಕರ್. ಆತನ ಹೇಳಿಕೆಗೆ ನಾನು ಪ್ರತಿಕ್ರಿಯೆ  ನೀಡುವುದಿಲ್ಲ. ನಾನು ಯಾವ ಕ್ಷೇತ್ರ ದಿಂದ ಸ್ಪರ್ಧೆ ಮಾಡಬೇಕು ಎಂಬುವುದನ್ನು ಒಂದು ತಿಂಗಳಲ್ಲಿ ಫೈನಲ್ ಮಾಡುತ್ತೇನೆ. ಬಾದಾಮಿ, ವರುಣಾ, ಚಾಮರಾಜನಗರ, ಕೋಲಾರ ಸೇರಿದಂತೆ ಆರೇಳು ಕ್ಷೇತ್ರ ದಿಂದ ಒತ್ತಡ ಇದೆ. 
ವರುಣಾ ಕ್ಷೇತ್ರದಲ್ಲಿ ಮಗ ಶಾಸಕನಾಗಿದ್ದಾನೆ. ಮೋದಿ ವಾರಾಣಾಸಿಯಿಂದ ಸ್ಪರ್ಧೇ ಮಾಡಿದರೆ. ಬೇರೆ ರೀತಿಯಲ್ಲಿ ಬಿಂಬಿಸುತ್ತಿರಿ. ನಾನು ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಕ್ಕೆ ವಿಭಿನ್ನ ವ್ಯಾಖ್ಯಾನ ನೀಡುತ್ತಿರಾ ಎಂದು ಕಟೀಲ್‌ ವಿರುದ್ಧ ಹರಿಹಾಯ್ದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ