ಬೆಂಗಳೂರು: ರಾಜೀನಾಮೆ ನೀಡಿದ್ದ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಭಾನುವಾರ ತಮ್ಮ ತೀರ್ಪು ಪ್ರಕಟಿಸಿದರು. ಇದರ ಬೆನ್ನಲ್ಲೇ ಸ್ಪೀಕರ್ ವಿರುದ್ಧ ವಾಗ್ಧಾಳಿ ನಡೆಸಿರುವ ಬಿಜೆಪಿ ನಾಯಕರು ಸ್ಪೀಕರ್ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ, ನಮ್ಮ ಪಕ್ಷದ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದರೆ; ಬಿಜೆಪಿ ನಾಯಕರು ಹೊಟ್ಟೆ ಉರ್ಕೊಳ್ಳೋದು ಯಾಕೆ? ಎಂದು ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ಶಾಸಕರ ಅನರ್ಹತೆ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪಕ್ಷಾಂತರಿ ಶಾಸಕರನ್ನು ವಿಧಾನಸಭಾ ಅಧ್ಯಕ್ಷರು ಅನರ್ಹಗೊಳಿಸಿದರೆ ಬಿಜೆಪಿ ನಾಯಕರು ಹೊಟ್ಟೆ ಉರ್ಕೊಳ್ಳೋದು ಯಾಕೆ? ಅವರ ಮೇಲೆ ಈ ಪರಿಯ ಕಾಳಜಿ ಯಾಕೆ? ಅವರೇನು ಇವರ ಪಕ್ಷದ ಶಾಸಕರೇ? ಎಂದು ಪ್ರಶ್ನಿಸಿದ್ದಾರೆ.



ಇದರ ಬೆನ್ನಲ್ಲೇ ಇನ್ನೊಂದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಅಧಿಕಾರ ನಷ್ಟ ಅನುಭವಿಸಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು. ಅನರ್ಹಗೊಂಡು ನಷ್ಟ ಅನುಭವಿಸಿದ್ದು ಪಕ್ಷಾಂತರಿ ಶಾಸಕರು. ಇವೆಲ್ಲದರ ಲಾಭ ಪಡೆದದ್ದು  ಬಿಜೆಪಿ.  ಏನಿದರ ಅರ್ಥ? ಇವೆಲ್ಲವೂ ಬಿಜೆಪಿ ನಾಯಕರ ಪೂರ್ವ ನಿಯೋಜಿತ ಷಡ್ಯಂತರವಾಗಿರಬಹುದೇ?  ಅನರ್ಹ ಶಾಸಕರು ಎಚ್ಚೆತ್ತುಕೊಳ್ಳಲು ಸಕಾಲ ಎಂದು ಅನರ್ಹ ಶಾಸಕರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.