ಬಾಗಲಕೋಟೆ: ಪಂಜಾಬಿನಲ್ಲಿ ಕಾಂಗ್ರೆಸ್ ಪಕ್ಷವನ್ನು ನವಜೋತ್ ಸಿಂಗ್ ಸಿಧು ಹಾಳು ಮಾಡಿದಂತೆ ಕರ್ನಾಟಕದಲ್ಲಿನ ಕಾಂಗ್ರೆಸ್ ಪಕ್ಷವನ್ನು ಸಿದ್ಧರಾಮಯ್ಯನವರು ಹಾಳು ಮಾಡುತ್ತಾರೆ ಎಂದು ಸಚಿವ ಸಿ.ಸಿ.ಪಾಟೀಲ್ (CC Patil) ವ್ಯಂಗ್ಯವಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ-ಸಿಎಂ ಬೊಮ್ಮಾಯಿ ವಿಶ್ವಾಸ


ಬಾಗಲಕೋಟೆ ತಾಲೂಕಿನ ಹೊನ್ನಾಕಟ್ಟಿ ಗ್ರಾಮದಲ್ಲಿ ಮಾಧ್ಯಮದವರು ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಪ್ರೈಸ್ ಆಫರ್ ನೀಡಿರುವ ವಿಚಾರವಾಗಿ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಸಚಿವ ಸಿಸಿ ಪಾಟೀಲ್ "ಸಿದ್ದರಾಮಯ್ಯ (Siddaramaiah) ಒಬ್ಬ ಹಿಂದುಳಿದ ವರ್ಗದಿಂದ ಬಂದ ನಾಯಕ..ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ, ಯಾವುದೇ ಪ್ರಕೃತಿ ವಿಕೋಪ ಇಲ್ಲದೆ ಆಡಳಿತ ನಡೆಸಿದ ಸುಧೈವಿಯಾಗಿದ್ದಾರೆ.ಇವರು ವಿಧಾನಸಭೆಯಲ್ಲಿ ಏನು ಭಾಷಣ ಮಾಡ್ತಾರೆ..ಬಿಜೆಪಿಯವರು ಹಂಗೆ ಮಾಡ್ತೀರಿ, ಹಿಂಗೆ ಮಾಡ್ತೀರಿ, ಅಷ್ಟು ಖರ್ಚು ಮಾಡ್ತೀರಿ ಇಷ್ಟು ಖರ್ಚು ಮಾಡ್ತೀರಿ, ಪ್ರಜಾಪ್ರಭುತ್ವದ ವಿರೋಧ ಅಂತ..ಹಾಗಾದ್ರೆ ಇದು ಯಾವುದು.? ಕಾಂಗ್ರೆಸ್ ಅಭಿಯಾನ ಮಾಡಿದವರಿಗೆ ಫ್ರಿಡ್ಜ್, ಟಿವಿ ಅಂದ್ರೆ ಬಡ ನಾಗರಿಕರ ಬಾಳೆ ಏನು?' ಎಂದು ಅವರು ಪ್ರಶ್ನಿಸಿದರು.


ಇದನ್ನೂ ಓದಿ: ವಿಜ್ಞಾನಿಗಳ ಅವಿಷ್ಕಾರಗಳು ಸಾಮಾನ್ಯ ಜನರಿಗೆ ತಲುಪುವಂತಾಗಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


'ಒಂದು ವೇಳೆ ಆಫರ್ ಕೊಟ್ಟಿದ್ದು ನಿಜವೇ ಆಗಿದ್ದರೆ ಅದು ಖಂಡನೀಯ..ಇದು ಸಿದ್ದರಾಮಯ್ಯ ಘನತೆ ಗೌರವ ಹೆಚ್ಚಿಸೋದಿಲ್ಲ..ಪಕ್ಷ ಸಿದ್ಧಾಂತ, ತತ್ವ ಒಂದು ಕಡೆ..ಎಲ್ಲ ನಾಟಕ ಮಾಡಿ ಮಾಡಿ ಒಂದು ರಾಜ್ಯದಲ್ಲೂ ಕಾಂಗ್ರೆಸ್ ಬಾರದ ಪರಿಸ್ಥಿತಿ ಆಯ್ತು.ಕರ್ನಾಟಕದಲ್ಲೂ ಅದೇ ಪರಿಸ್ಥಿತಿ..ಯಾರೋ ಹೇಳ್ತಿದ್ರು, ಪಂಜಾಬ್ ಕಾಂಗ್ರೆಸ್ ಸಿಧು ಹಾಳ ಮಾಡಿದ, ಹಂಗೆ ಕರ್ನಾಟಕ ಕಾಂಗ್ರೆಸ್ ಸಿದ್ದು ಹಾಳ ಮಾಡ್ತಾರೆ"ಎಂದು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.