ಬಾಗಲಕೋಟೆ: ಮುಖ್ಯಮಂತ್ರಿ ಆಗ್ತೀನಿ ಅಂತ ಸಿದ್ದರಾಮಯ್ಯ ಹಗಲು ಕನಸು ಕಾಣುತ್ತಿದ್ದಾರೆ. ಆದರೆ,  ಬ್ರಹ್ಮ ಬಂದರೂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲ್ಲ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಶನಿ, ಸಚಿವ ಹೆಚ್​.ಡಿ.ರೇವಣ್ಣ ಕೇತು ಇದ್ದಂತೆ. ಅಂತವರನ್ನ ಕಟ್ಟಿಕೊಂಡು ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣೆ ಎದುರಿಸುತ್ತಿದ್ದಾರೆ. ದೇವೇಗೌಡರ ಬೆನ್ನಿಗೆ ಸಿದ್ದರಾಮಯ್ಯ ಚಾಕು ಹಿಡಿದರೆ, ಸಿದ್ದರಾಮಯ್ಯ ಬೆನ್ನಿಗೆ ಕುಮಾರಸ್ವಾಮಿ ಚಾಕು ಹಿಡಿದುಕೊಂಡಿದ್ದಾರೆ. ಯಾವಾಗ ಇವರು ಸಾಯುತ್ತಾರೊ ಗೊತ್ತಿಲ್ಲ. ಆದರೂ ಒಬ್ಬರನ್ನೊಬ್ಬರು ತಬ್ಬಿಕೊಂಡು ಆಪ್ತರಂತೆ ತೋರಿಸಿಕೊಳುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಮುಳುಗಿ ಹೋಗುವ ಹಡಗಿದ್ದಂತೆ. ಲೋಕಸಬಾ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ ಎಂದರು. 


ಸಿದ್ದರಾಮಯ್ಯ ಅವರಿಗೆ ದೇವೇಗೌಡರೇ ಶನಿ, ಪರಮೇಶ್ವರ್ ರಾಹು, ರೇವಣ್ಣ ಕೇತುವಾಗಿ ಕಾಡುತ್ತಿದ್ದಾರೆ. ಹಾಗಾಗಿ ಅವರು ಮುಖ್ಯಮಂತ್ರಿ ಆಗೋದು ಅಸಾಧ್ಯ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.