ಬೆಂಗಳೂರು: ಕನ್ನಡಾಭಿಮಾನ ಕನ್ನಡ ರಾಜ್ಯೋತ್ಸವಕ್ಕೆ ಸೀಮಿತವಾಗಬಾರದು. ಅದು ಸದಾ ನಮ್ಮೆದೆಯೊಳಗೆ ಜೀವಂತವಾಗಿರಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಸಿದ್ದರಾಮಯ್ಯ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಸಂಭ್ರಮದ 63ನೇ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ನಾಡಿನ ಜನತೆಗೆ ಟ್ವೀಟ್ ಮೂಲಕ ಶುಭಾಷಯ ಕೋರಿರುವ ಸಿದ್ದರಾಮಯ್ಯ ಕನ್ನಡ ರಾಜ್ಯೋತ್ಸವ ಕೇವಲ ಉತ್ಸವ ಅಲ್ಲ, ವಿವಿಧ ಪ್ರಾಂತ್ಯಗಳಲ್ಲಿ‌ ಹಂಚಿಹೋಗಿರುವ ಕನ್ನಡಿಗರು ಕನ್ನಡದ ಕರುಳಬಳ್ಳಿ ಹಿಡಿದು ಒಗ್ಗೂಡಿದ ಪವಿತ್ರ ದಿನ. ಈ ಕನ್ನಡದ ಕನಸು ಸಾಕಾರಗೊಳ್ಳಲು ಲಕ್ಷಾಂತರ ಕನ್ನಡಾಭಿಮಾನಿಗಳ ಶ್ರಮ, ತ್ಯಾಗ, ಬಲಿದಾನಗಳನ್ನು ಕೃತಜ್ಞತೆಯಿಂದ ಸ್ಮರಿಸೋಣ ಎಂದಿದ್ದಾರೆ. 



ಕನ್ನಡ ಎಂದರೆ ಬರೀ ಭಾಷೆ ಅಲ್ಲ, ಅದು ಬದುಕು, ಅದು ಸಂಸ್ಕೃತಿ, ಅದು ಪರಂಪರೆ. ಹಾಗಾಗಿ ಭಾಷೆಯ ಜತೆ ನಾಡು ಸರ್ವಾಂಗೀಣವಾಗಿ ಬೆಳೆಯಬೇಕು. ಕನ್ನಡಿಗರು ಸಮರ್ಥರಾದರೆ ಕನ್ನಡ ಸಾಮರ್ಥ್ಯ ಪಡೆಯುತ್ತದೆ. ಈಗಿನ ಕರ್ನಾಟಕವನ್ನು ನಿಜವಾದ ಕ‌ನ್ನಡನಾಡಾಗಿ ಕಟ್ಟುವ ಸಂಕಲ್ಪ ಮಾಡೋಣ. ಕನ್ನಡವನ್ನು ಪ್ರೀತಿಸೋಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.