ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಟ್ರಕ್ ಚಾಲಕನ ಮಗನಿಗೆ ಒಲಿದ ಬೆಳ್ಳಿ ಗರಿ
ನವದೆಹಲಿ: ಆಷ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ 56 ಕೆಜಿಯ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕರ್ನಾಟಕದವರಾದ ಪಿ.ಗುರುರಾಜ್ ಬೆಳ್ಳಿಯ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.ಆ ಮೂಲಕ ಈ ಸ್ಪರ್ಧೆಯಲ್ಲಿ ಭಾರತದ ಪದಕ ಖಾತೆಯನ್ನು ತೆರೆದಿದ್ದಾರೆ.
ಗುರುರಾಜ್ ಭಾರತೀಯ ವಾಯು ಸೇನೆಯಲ್ಲಿ ನೌಕರರಾಗಿದ್ದಾರೆ,ಇವರ ತಂದೆ ಮೂಲತ ಟ್ರಕ್ ಚಾಲಕರಾಗಿದ್ದಾರೆ. ಮೊದಲಿನಿಂದಲೂ ವೇಟ್ ಲಿಫ್ಟಿಂಗ್ ನಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಇವರು ಬೆಳ್ಳಿಯ ಪದಕದ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
25 ವರ್ಷದ ಗುರುರಾಜ ಒಟ್ಟು 249 ಕೆಜಿ ಭಾರವನ್ನು ಎತ್ತುವ ಮೂಲಕ ಎರಡನೇ ಸ್ಥಾನವನ್ನು ಪಡೆದುಕೊಂಡರು.ಇವರ ಪ್ರತಿಸ್ಪರ್ಧಿ ಮೊಹಮ್ಮದ್ ಅಜರ್ ಅಹ್ಮದ್ ಮೊದಲ ಸ್ಥಾನ ಪಡೆದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಮೂರನೇ ಸ್ಥಾನವನ್ನು ಶ್ರೀಲಂಕಾದ ಲಕ್ಮಾಲ್ ಚತುರಂಗಾ ಪಡೆದುಕೊಂಡರು.