Sir M Visvesvaraya : ಭಾರತರತ್ನ -ಸರ್.ಎಂ. ವಿಶ್ವೇಶ್ವರಯ್ಯ ದೇಶ ಕಂಡ ಸರ್ವಶ್ರೇಷ್ಠ ತಂತ್ರಜ್ಞರಲ್ಲಿ ಮೊದಲಿಗರು. ತಮ್ಮಲ್ಲಿದ್ದ ಬುದ್ಧಿಶಕ್ತಿ, ಮೇಧಾವಿಶಕ್ತಿಯನ್ನು ಈ ನಾಡಿನ ಒಳಿತಿಗಾಗಿ ಧಾರೆಯೆರದರು. ಇಂಗ್ಲೀಷ್ ತಂತ್ರಜ್ಞರನ್ನು ಮೀರಿಸಿದ ಬುದ್ಧಿಶಕ್ತಿ ಇವರಲ್ಲಿತ್ತು. ಇವರು ಮೂಲತಃ ಇಂಜಿನಿಯರ್ ಆದರೂ ಇವರಲ್ಲಿದ್ದ ಕಾರ್ಯತತ್ಪರತೆ ಪ್ರಾಮಾಣಿಕತೆ ಬುದ್ದಿಶಕ್ತಿಯನ್ನು ಕಂಡ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಬೇಡವೆಂದರೂ ಬಿಡದೇ ಇವರನ್ನು ಮೈಸೂರಿನ ದಿವಾನರನ್ನಾಗಿ ನೇಮಿಸಿದರು. 


COMMERCIAL BREAK
SCROLL TO CONTINUE READING

28 ವರ್ಷಗಳ ಕಾಲ ಅಭಿಯಂತರರಾಗಿ, 06 ವರ್ಷಗಳ ಕಾಲ ಮೈಸೂರಿನ ದಿವಾನರಾಗಿ ಸೇವೆ ಸಲ್ಲಿಸಿದುದೇ ಅಲ್ಲದೇ ದಿವಾನ್ ಪದವಿಯಿಂದ ನಿವೃತ್ತರಾದ ನಂತರವೂ ಸಾಕಷ್ಟು ಶ್ರಮಿಸಿದರು. ರಾಷ್ಟ್ರ ಹಾಗೂ ಹೊರರಾಷ್ಟ್ರಗಳು ಸರ್ ಎಂ.ವಿ.ರವರ ಸೇವೆಯನ್ನು ಸಮರ್ಥವಾಗಿ ಬಳಸಿಕೊಂಡವು. ಪ್ರಾಮಾಣಿಕರಲ್ಲಿ ಅತಿ ಪ್ರಾಮಾಣಿಕರಾಗಿ, ಸ್ವಾಮಿನಿಷ್ಠರಾಗಿ ದೇಶ ಹಾಗೂ ರಾಜ್ಯವನ್ನು ಪ್ರಗತಿಪಥದತ್ತ ಕೊಂಡೊಯ್ಯಲು ಶ್ರಮಿಸಿದ. ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇಧಾವಿ ಅಮರವಾಸ್ತು ಶಿಲ್ಪಿ, ತಂತ್ರಜ್ಞ ಭಾರತದ ಭಾಗ್ಯ ಸರ್ ಎಂ.ವಿ.ರವರು ಭಾರತಕ್ಕೆ ರತ್ನ ಪ್ರಾಯರಾಗಿದ್ದಾರೆ. 


ಇದನ್ನೂ ಓದಿ: ಹಾಸನ ಕಾಂಗ್ರೆಸ್‌ ಸಮಾವೇಶ: ಸಿಎಂ ಸಿದ್ದರಾಮಯ್ಯ ಫೋಟೋ ಹಿಡಿದು ಅಭಿಮಾನಿಗಳ ಸಂಭ್ರಮ!


ವಿಶ್ವೇಶ್ವರಯ್ಯನವರ ತಂದೆ ಶ್ರೀನಿವಾಸಶಾಸ್ತ್ರಿ ತಾಯಿ ವೆಂಕಟಲಕ್ಷ್ಮಮ್ಮ ವಿಶ್ವೇಶ್ವರಯ್ಯನವರ ತಂದೆ ಸಂಸ್ಕೃತ ವಿದ್ವಾಂಸರು, ಧರ್ಮಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರಲ್ಲದೆ ಆಯುರ್ವೇದ ತಜ್ಞರು ಆಗಿದ್ದರು. ಇವರೀರ್ವರ ಸುಪುತ್ರರಾಗಿ 15 ಸೆಪ್ಟೆಂಬರ್ 1860ರಲ್ಲಿ ವಿಶ್ವೇಶ್ವರಯ್ಯನವರು ಜನಿಸಿದ್ದು. ಬೆಂಗಳೂರಿನಿಂದ 45 ಕಿ.ಮೀ ದೂರದಲ್ಲಿರುವ, ಚಿಕ್ಕಬಳ್ಳಾಪುರದಿಂದ 5 ಕಿ.ಮೀ ಅಂತರದಲ್ಲಿರುವ ಮುದ್ದೇನಹಳ್ಳಿಯಲ್ಲಿ. ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು.


1881ರಲ್ಲಿ ಬಿ.ಎ ಪದವಿಯನ್ನು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪಡೆದರು. ನಂತರ ಪುಣೆಯ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದರು. ವಿಶ್ವೇಶ್ವರಯ್ಯನವರು 1884ರಲ್ಲಿ ಮುಂಬಯಿ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ವೃತ್ತಿ ಜೀವನ ಆರಂಭವಾಯಿತು. ಇದಾದ ನಂತರ ಭಾರತೀಯ ನೀರಾವರಿ ಕಮಿಷನ್‌ನಿಂದ ಅವರಿಗೆ ಆಮಂತ್ರಣ ಬಂದಿತು. ಈ ಕಮಿಷನ್ನನ್ನು ಸೇರಿದ ನಂತರ ದಖನ್ ಪ್ರಸ್ಥ ಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯನವರು ಪರಿಚಯಿಸಿದರು. ಸರ್ ಎಂ.ವಿಶ್ವೇಶ್ವರಯ್ಯನವರು ಅರ್ಥರ್ ಕಾಟನ್‌ರವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು.


ಕಾವೇರಿ ನದಿಗೆ ಆಣೆಕಟ್ಟು ಕಟ್ಟುವಲ್ಲಿ ಅವರು ತಿರುಚಿರಾಪಳ್ಳಿಯಲ್ಲಿ ಚೋಳರಾಜರಿಂದ ನಿರ್ಮಿಸಲ್ಪಟ್ಟ ಹಾಗೂ 18ನೇ ಶತಮಾನದ ಅರ್ಧದಲ್ಲಿ ಅರ್ಥರ್ ಕಾಟನ್‌ರವರಿಂದ ಸಂಪೂರ್ಣವಾಗಿ ನವೀಕರಿಸಲ್ಪಟ್ಟ ಬೃಹತ್ ಗ್ರಾಂಡ್ ಆಣೆಕಟ್ಟನ್ನು ನೋಡಿ ಪ್ರಭಾವಿತರಾಗಿದ್ದರು. ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ "ಸ್ವಯಂ ಚಾಲಿತ ಫ್ಲಡ್‌ ಗೇಟ್ ವಿನ್ಯಾಸ"ವೊಂದನ್ನು ಕಂಡು ಹಿಡಿದು ಅದಕ್ಕಾಗಿ "ಪೇಟೆಂಟ್" ಪಡೆದರು. ಮೊದಲ ಬಾರಿಗೆ 1903ರಲ್ಲಿ ಪುಣೆಯ ಬಳಿ 'ಖಡಕ್ ವಾಸ್ತ್ರ' ಜಲಾಶಯದಲ್ಲಿ ಈ ವಿಶಿಷ್ಟ ತಂತ್ರಜ್ಞಾನದ ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಿ, ಜಲಾಶಯದ ಈ ತಂತ್ರಜ್ಞಾನ ವಿಶ್ವದಲ್ಲಿಯೇ ಪ್ರಥಮ ಬಾರಿಗೆ ತೋರಿಸಿಕೊಟ್ಟ ಏಕೈಕ ತಂತ್ರಜ್ಞಾನಿ ಐತಿಹಾಸಿಕ ಸಾಕ್ಷಿಯಾಗಿದ್ದಾರೆ. 


ಇದನ್ನೂ ಓದಿ:ಸಾಲದ ಕಾರಣಕ್ಕೆ ಸೀಜ್‌ ಆದ ಶ್ರೀರಂಗಪಟ್ಟಣದ ಕೇಂಬ್ರಿಡ್ಜ್‌ ಶಾಲೆ!


ಗ್ವಾಲಿಯ‌ರ್ನನ 'ಟಿಗ್ರಾ' ಆಣೆಕಟ್ಟು ಮತ್ತು ಕರ್ನಾಟಕದ 'ಕೃಷ್ಣರಾಜ ಸಾಗರ' ಅಣೆಕಟ್ಟುಗಳಿಗೂ ಸಹ ಉಪಯೋಗಿತವಾದವು. ಈ ಗೇಟ್ಗಳ ಉದ್ದೇಶ ಅಣೆಕಟ್ಟಿಗೆ ಹಾನಿ ಮಾಡದೆ ಗರಿಷ್ಠ ಮಟ್ಟದ ನೀರನ್ನು ಶೇಖರಿಸಿಡುವುದೇ ಆಗಿತ್ತು. ಕೃಷ್ಣರಾಜಸಾಗರ ಅಣೆಕಟ್ಟು ಕಟ್ಟಿದ್ದಾಗ ಅಂದಿನ ಕಾಲಘಟ್ಟದಲ್ಲಿ ಭಾರತದಲ್ಲೇ ಅತ್ಯಂತ ದೊಡ್ಡ ಆಣೆಕಟ್ಟು, ಜಗತ್ತೇ ಆಶ್ಚರ್ಯದಿಂದ ನೋಡುವಂತಾಗಿದ್ದು ಕನ್ನಂಬಾಡಿ ಜೀವನದಿ ಕಾವೇರಿ ನದಿಗೆ ಕಟ್ಟಲಾದ ಆಣೆಕಟ್ಟನ್ನು ಪ್ರಾರಂಭಿಸಿ 4 ವರ್ಷಗಳಲ್ಲಿ ಮುಗಿಸಿ ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಿ ಜಗತ್ತಿನಲ್ಲಿ ಯಾರೋಬ್ಬರು ಮಾಡಿರದಂತಹ ಸಾಧನೆ ಮಾಡಿದರು. ಬೇರೆ ಆಣೆಕಟ್ಟುಗಳು ಸಿಮೆಂಟ್, ಕಾಂಕ್ರೀಟ್ ನಿಂದ ನಿರ್ಮಾಣವಾಗಿದ್ದರೆ, ಕೆ.ಆರ್.ಎಸ್.ಆಣೆಕಟ್ಟು ಸರ್.ಎಂ.ವಿಶ್ವೇಶ್ವರಯ್ಯನವರ ಜಾಣೆಯ ತಂತ್ರಜ್ಞಾನದಿಂದ ಸುಣ್ಣ ಮತ್ತು ಬೆಲ್ಲದ ಮಿಶ್ರಣದಿಂದ ಕಟ್ಟಿದ ಗಟ್ಟಿ, ಮಾನವ ನಿರ್ಮಿತವಾಗಿದ್ದು ದಾಖಲೆಯೊಂದಿಗೆ ಶತಮಾನದಿಂದ ಮೈಸೂರು, ಮಂಡ್ಯ, ಬೆಂಗಳೂರು, ತಮಿಳುನಾಡಿಗೆ ಜೀವಜಲವನ್ನು ನೀಡುತ್ತಿರುವ ವಾಸ್ತು ಶಿಲ್ಪವಾಗಿದೆ. 


ಎಲ್ಲಿಯಾದರು ದುರಂತ ಸಂಭವಿಸಿದರೆ ಸ್ವಯಂ ಚಾಲಿತ ಗೇಟ್‌ಗಳು ತನ್ನಷ್ಟಕ್ಕೆ ತಾನೇ ತೆರೆದುಕೊಂಡು ಮುನ್ನುಗ್ಗುವ ಅಪಾರ ಪ್ರಮಾಣದ ನೀರು ಯಾರಿಗೂ ತೊಂದರೆಯಾಗದಂತೆ ಹರಿದು ಮುಂದೆ ಸಾಗಲು ಮುಂದಾಲೋಚನೆಯಿಂದ ಆಣೆಕಟ್ಟು ನಿರ್ಮಿಸುವಾಗಲು ಆಳವಾದ ನಾಲೆ ವ್ಯವಸ್ಥೆ ಮಾಡಲಾಗಿದೆ. ಜಗತ್ತಿನ ಅದ್ಭುತಗಳ ಸಾಲಿನಲ್ಲಿ ಬರುವ ಕೆ.ಆರ್. ಸಾಗರ ಆಣೆಕಟ್ಟು ಒಂದು ಲಕ್ಷ ಇಪ್ಪತ್ತು ಸಾವಿರ ಎಕರೆ ಕೃಷಿ ಭೂಮಿಗೆ ನೀರುಣಿಸಿ ದಕ್ಷಿಣ ಭಾರತದ ಕೋಟ್ಯಾಂತರ ಜೀವಿಗಳಿಗೆ ಜೀವ ಜಲವನ್ನು ನೀಡಿ ಬೃಂದಾವನ ಉದ್ಯಾನ ವನದಲ್ಲಿ ವೈವಿದ್ಯಮಯ. ನರ್ತಿಸುವ ಕುಣಿದು ಕುಪ್ಪಳಿಸುವ ನೀರಿನ ಕಾರಂಜಿಗಳು ಪುಷ್ಪಕಾಶಿಯೊಂದಿಗೆ ಜಗತ್ತಿನ ನಾನಾ ದೇಶದ ಪ್ರವಾಸಿಗರನ್ನು ತನ್ನಡೆಗೆ ಆಕರ್ಷಿಸುವಂತೆ ಮಾಡಿದ ಭಾರತದ ಭಾಗ್ಯವಿದಾತ ಸರ್ ಎಂ.ವಿಶ್ವೇಶ್ವರಯ್ಯನವರನ್ನು ದಕ್ಷಿಣ ಭಾರತದ ಜನತೆ ಎಂದಿಗೂ ಮರೆಯುವಂತಿಲ್ಲ.


ಇದನ್ನೂ ಓದಿ:ಹಾಸನದ ಕಾಂಗ್ರೆಸ್‌ ಸಮಾವೇಶಕ್ಕೆ JDLP ನಾಯಕ ಸುರೇಶ್‌ ಬಾಬು ಆಕ್ರೋಶ!


ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿ ಸಾಧಿಸಿದ ಸಾಧನೆಗಳು ಅವರೊಬ್ಬ ಉತ್ತಮ ಆಡಳಿತಗಾರ ಎಂಬುದನ್ನು ಸಾಬೀತು ಪಡಿಸಿವೆ. ಅವರ ಪ್ರತಿಭೆಗೆ, ಸೇವಾ ತತ್ಪರತೆಗೆ ಬ್ರಿಟಿಷ್ ಸರಕಾರವೇ ತಲೆದೂಗಿತ್ತು. ಅವರು ದಿವಾನರಾದಾಗ ಆಗಿನ ಬ್ರಿಟಿಷ್ ವೈಸ್‌ರಾಯ್ ಹಾರ್ಡಿಂಜ್ ರಾಜ್ಯದ ಆಂತರಿಕ ವಿಷಯಗಳಲ್ಲಿ ನಿರ್ಧಾರಗಳನ್ನು ಕೈಗೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಇದು ಅವರ ಘನತೆ-ಗೌರವಗಳಿಗೆ ಇನ್ನೊಂದು ಗರಿ ಮೂಡಿಸಿತು. ಅವರು ಬೆಂಗಳೂರು, ಮೈಸೂರು, ಮಾರುಕಟ್ಟೆ, ಬೀದಿ, ಉದ್ಯಾನವನ, ನಗರ ನೈರ್ಮಲ್ಯ-ಸೌಂದರ್ಯ, ಪೌರಸೌಲಭ್ಯ ಹಾಗೂ ಜನರ ಆರೋಗ್ಯದತ್ತ ಗಮಹಹರಿಸಿ ಆಶ್ಚರ್ಯಕಾರಕ ಸಾಧನೆಗಳನ್ನು ಮಾಡಿದರು. ಗ್ರಾಮಗಳ ಸುಧಾರಣೆಗಾಗಿಯೂ ಶ್ರಮಿಸಿದರು. ಆಡಳಿತದಲ್ಲೂ ಚುರುಕು ಮೂಡಿಸಿದರು. 


ವರ್ಷಕ್ಕೊಮ್ಮೆ ಸಮಾವೇಶಗೊಳ್ಳುತ್ತಿದ್ದ ಪ್ರಜಾಪ್ರತಿನಿಧಿ ಸಭೆ ವರ್ಷದಲ್ಲಿ ಎರಡು ಬಾರಿ ಸಮಾವೇಶಗೊಳ್ಳುವಂತೆ ಮಾಡಿದರು. ಸರ್ ಎಂ. ವಿಶ್ವೇಶ್ವರಯ್ಯನವರು ಮಾಡಿದ ಇನ್ನೊಂದು ಗಮನಾರ್ಹ ಸಾಧನೆ ಎಂದರೆ ಆಯ-ವ್ಯಯ ಸಂಗ್ರಹ ಪಟ್ಟಿಯನ್ನು ಕನ್ನಡದಲ್ಲಿ ಪ್ರಕಟಿಸಲು ಆರಂಭಿಸಿದರು. ಲೆಜಿಸ್ಲಿಟಿವ್ ಕೌನ್ಸಿಲ್ ಸಭೆಗೆ ಹೆಚ್ಚಿನ ಅಧಿಕಾರವನ್ನು ನೀಡಿ ಪ್ರಜಾಪ್ರಭುತ್ವದ ಉಚ್ಚ ಪರಂಪರೆಗೆ ಚಾಲನೆ ನೀಡಿದರು. ಪ್ರಜಾ ಪ್ರತಿನಿಧಿ ಸಭೆ-ಲೆಜಿಸ್ಲಿಟಿವ್ ಕೌನ್ಸಿಲ್‌ಗಳು ಇಂದಿನ ವಿಧಾನಸಭೆ ವಿಧಾನ ಪರಿಷತ್ತುಗಳಂತೆಯೇ ಕಾರ್ಯ ನಿರ್ವಹಿಸುತ್ತಿದ್ದವು. ಅವರ ನೇತೃತ್ವದಲ್ಲಿ ಮೈಸೂರು ರಾಜ್ಯ ಪ್ರಗತಿಯ ಪಥವನ್ನೇರಿ ಮಾದರಿಯ ರಾಜ್ಯವಾಗಿ ಮಾರ್ಪಟ್ಟಿತು. ಶಿಕ್ಷಣದಿಂದಲೇ ದೇಶೋದ್ಧಾರ ಎಂಬುದನ್ನು ಮನಗಂಡಿದ್ದ ಸರ್.ಎಂ.ವಿಶ್ವೇಶ್ವರಯ್ಯನವರು ಮಕ್ಕಳ ಶಿಕ್ಷಣಕ್ಕೆ ತುಂಬ ಮಹತ್ವ ನೀಡಿದರು. ಅವರು ಅಲ್ಪ ಸಂಖ್ಯಾತರ, ಪರಿಶಿಷ್ಟ ಪಂಗಡಗಳ ಹಾಗೂ ಹಿಂದುಳಿದ ವರ್ಗಗಳಿಗೆ ಶಿಕ್ಷಣದ ಮಹತ್ವವನ್ನು ಮನನ ಮಾಡಿ ಅವರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಪ್ರೋತ್ಸಾಹಿಸಿದರು. 


ಅದಕ್ಕಾಗಿ ಅವರಿಗೆ ಶಾಲೆಗಳಲ್ಲಿ ಮುಕ್ತ ಪ್ರವೇಶ ದೊರೆಕಿಸಿಕೊಟ್ಟರು. ವ್ಯಾಸಂಗ ಮುಂದುವರೆಸಲು ಅಗತ್ಯ ಸೌಕರ್ಯಗಳನ್ನು ಒದಗಿಸಿದರು. ಉದ್ಯೋಗದಲ್ಲೂ ಅವರಿಗೆ ಪಾಲು ನೀಡಿ ಅವರು ಸಾಮಾಜಿಕವಾಗಿ ತಲೆಯೆತ್ತಿ ಬದುಕಲು ಅವಕಾಶ ಕಲ್ಪಿಸಿದರು. ವಿದ್ಯಾರ್ಥಿಗಳೆಂದರೆ ಅವರಿಗೆ ತುಂಬಾ ಅಚ್ಚುಮೆಚ್ಚು. ಅವರು ದಿವಾನರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಮೈಸೂರು ರಾಜ್ಯದಲ್ಲಿ 4568 ಶಾಲೆಗಳಿದ್ದರೆ, ಅವರು ದಿವಾನಗಿರಿಯಿಂದ ನಿವೃತ್ತರಾಗುವಾಗ ಅಂದರೆ 1918ರಲ್ಲಿ ಅವುಗಳ ಸಂಖ್ಯೆ 11294ಕ್ಕೇರಿತು. ಸರ್ ಎಂ.ವಿಶ್ವೇಶ್ವರಯ್ಯನವರು ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜನ್ನು ಅಭಿವೃದ್ಧಿ ಪಡಿಸಿದರು. ವಿಶೇಷ ತಾಂತ್ರಿಕ ಶಿಕ್ಷಣ ಹಾಗೂ ತರಬೇತಿಗಾಗಿ ವಿದೇಶಗಳಿಗೆ ಹೋಗಲಿಚ್ಛಿಸುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಸೌಕರ್ಯ ನೀಡಿದರು. ಕೃಷಿಕರಿಗಾಗಿ ಅವರು ಅಂದು ಆರಂಭಿಸಿದ ಕೃಷಿಶಾಲೆ ಇಂದು ಕೃಷಿ ವಿಶ್ವವಿದ್ಯಾಲಯವಾಗಿ ಬೆಳೆದು ನಿಂತಿದೆ. ಬೆಂಗಳೂರಿನ ಇಂದಿನ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ಮತ್ತು ಮೈಸೂರಿನ ಚಾಮರಾಜೇಂದ್ರ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಅವರ ಶೈಕ್ಷಣಿಕ ಸಾಧನೆ ಅನುಪಮ ಕೊಡುಗೆಗಳಾಗಿವೆ.


ಇದನ್ನೂ ಓದಿ:ರಾಜ್ಯದಲ್ಲಿ ಫೆಂಗಲ್‌ ಚಂಡಮಾರುತದ ಎಫೆಕ್ಟ್;‌ ತರಕಾರಿಗಳ ಬೆಲೆ ಏರಿಕೆ!!


ಸಾಮಾಜಿಕವಾಗಿ ಶೋಷಣೆಗೊಳಗಾಗುತ್ತಿದ್ದ ಮಹಿಳೆಯರನ್ನು ಪ್ರಜ್ಞಾವಂತರನ್ನಾಗಿಸಲು ಮಹಿಳಾ ಶಿಕ್ಷಣಕ್ಕೆ ಪ್ರೇರಣೆ ನೀಡಿದರು. ರಾಜ್ಯಾದ್ಯಂತ ಹೆಣ್ಣು ಮಕ್ಕಳ ಶಾಲೆಗಳನ್ನು ಆರಂಭಿಸಿ ದಾಖಲೆ ಬರೆದರು. ಸರ್ ಎಂ.ವಿರವರ ಬುದ್ಧಿಶಕ್ತಿಗೆ ತಲೆದೂಗಿದ ಬ್ರಿಟೀಷರು 1915ರಲ್ಲಿ ಸರ್ ಪ್ರಶಸ್ತಿಯನ್ನು ನೀಡಿದರೆ, ಸ್ವತಂತ್ರ ಭಾರತವು 1955ರಲ್ಲಿ ಅಂದಿನ ರಾಷ್ಟ್ರಪತಿಗಳಾಗಿದ್ದ ಡಾ.ರಾಜೇಂದ್ರಬಾಬುರವರು 'ಭಾರತರತ್ನ' ಪ್ರಶಸ್ತಿ ನೀಡಿ ಗೌರವಿಸಿದರು. ಸ್ವತಂತ್ರ ಭಾರತ ಸರ್ಕಾರವು ಸರ್ ಎಂ.ವಿ.ರವರ ಭಾವಚಿತ್ರವಿರುವ ಅಂಚೆಚೀಟಿಯನ್ನು ಹೊರತಂದಿತು. ದೇಶದ ನಾನಾ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದವು. ಕನ್ನಡಾಂಬೆಯ ವರಪುತ್ರರಾದ ಸರ್.ಎಂ.ವಿಶ್ವೇಶ್ವರಯ್ಯರವರು ನಮ್ಮವರು ನಮ್ಮ ಕನ್ನಡಿಗರು ಎಂದು ಹೇಳಲು ಹೆಮ್ಮೆ ಅನಿಸುತ್ತದೆ. 


ಕನ್ನಡದ ಹಿರಿಮೆಯನ್ನು ಹಿಮಾಲಯದೆತ್ತರಕ್ಕೆ ಹಾರಿಸಿದ ಸಾಧಕರು ಇವರು. ಒಬ್ಬ ಮನುಷ್ಯ ಮನಸ್ಸು ಮಾಡಿದರೆ ತನ್ನ ಜೀವನದಲ್ಲಿ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಕನ್ನಡಾಂಬೆಯ ಈ ವರ ಪುತ್ರನ ಆದರ್ಶಗಳೇ ಸಾರ್ವಕಾಲಿಕ ಸಾಕ್ಷಿಯಾಗಿ ನಿಲ್ಲುತ್ತವೆ. ಇಂತಹ ಮಹಾನ್ ಪುರುಷನ ಆದರ್ಶಗಳನ್ನು ಇಂದಿನ ಯುವ ಜನತೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ನೀಡುವ ಹೀಗೆ ಸರ್ ಎಂ.ವಿ.ರವರು ಕರ್ನಾಟಕದಲ್ಲಿ ಹುಟ್ಟಿ ಬೆಳೆದು ವಿದ್ಯಾಭ್ಯಾಸ ಪಡೆದು ತಮ್ಮ ವೃತ್ತಿ ಜೀವನವನ್ನು ಮಹಾರಾಷ್ಟ್ರದಲ್ಲಿ ಪ್ರಾರಂಭಿಸಿದರು. 


1909ರಿಂದ 1912ರ ತನಕ ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಆಗಿ 1912ರಿಂದ 1918ರ ತನಕ ಮೈಸೂರಿನ ದಿವಾನರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದರು. ಇವರು ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್ ಸೇರಿದಂತೆ ಭಾರತದ ನಾನಾ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದರು. ಸ್ವಾತಂತ್ರ್ಯಪೂರ್ವದಲ್ಲಿ, ಸ್ವಾತಂತ್ರ್ಯ ನಂತರದಲ್ಲಿ ದೇಶವು ವ್ಯಾಪಾರ, ವಾಣಿಜ್ಯ, ಕೃಷಿ, ನಿರಾವರಿ ಹಾಗೂ ಕೈಗಾರಿಕಾ ಕ್ಷೇತ್ರ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಕಾರಣಕರ್ತರಾದರು. ಕರ್ನಾಟಕದಲ್ಲಿ ಕೈಗಾರಿಕಾ ಕ್ರಾಂತಿಯನ್ನು ಮಾಡಿದ ಮಹಾನ್ ವ್ಯಕ್ತಿ, ಬರಡು ಭೂಮಿಯಾಗಿದ್ದ ಮಂಡ್ಯ ಜಿಲ್ಲೆಯ ಲಕ್ಷಾಂತರ ಎಕರೆ ಭೂಮಿಗೆ ಕಾವೇರಿ ನೀರುಣಿಸುವ ಮೂಲಕ ಮಂಡ್ಯ ಜಿಲ್ಲೆಯ ರೈತರ ಪಾಲಿಗೆ ಪ್ರಾತಃಸ್ಮರಣೀಯರಾಗಿದ್ದಾರೆ. 


ಡಿ.ಸಿ.ರಾಮಚಂದ್ರ ಎಂ.ಎ
(ಕನ್ನಡ, ರಾಜ್ಯಶಾಸ್ತ್ರ) ಉಪನ್ಯಾಸಕರು 
derchandru74@gmail.com 
Mobile: 9845565696


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.