Prajwal Revanna case : ಹಾಸನ ಸಂಸದ ಪಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ನಾಡಿನಾದ್ಯಂತ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದ್ದಾರೆ. ಸಂತ್ರಸ್ತರ ಹೇಳಿಕೆ ಹಾಗೂ ದೂರು ಪಡೆಯಲಿಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಮತ್ತೊಂದು ಕಡೆ ರೇವಣ್ಣ ಹಾಗೂ ಪ್ರಜ್ವಲ್ ಗೆ ನೋಟಿಸ್  ನೀಡಿದ್ರು ಹಾಜರಾಗಿಲ್ಲ. ಸದ್ಯ ಎಸ್ಐಟಿ ಅಧಿಕಾರಿಗಳ ಮುಂದಿನ ನಡೆ ಏನು ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.


COMMERCIAL BREAK
SCROLL TO CONTINUE READING

ಯೆಸ್... ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್ ಸಂಬಂಧ ಇಗಾಗ್ಲೆ ಎಸ್‌ಐಟಿ ತನಿಖೆ ಚುರುಕುಗೊಳಿಸಿದೆ. ಸೋಮವಾರ ಸಿಐಡಿ ಕಚೇರಿಗೆ ಐವರು ಸಂತ್ರಸ್ತ ಮಹಿಳೆಯರು ಹಾಜರಾಗಿದ್ದು, ಎಸ್‌ಐಟಿ ತಂಡದ ಮಹಿಳಾ ಐಪಿಎಸ್ ಅಧಿಕಾರಿ ಸೀಮಾ ಲಾಟ್ಕರ್ ಮುಂದೆ ಸಂತ್ರಸ್ತ ಮಹಿಳೆಯರು ಹಾಜರಾಗಿ ಹೇಳಿಕೆ ದಾಖಲಿಸಿದ್ದರು.  


ಇದನ್ನೂ ಓದಿ:ಅನ್ನ, ನೀರಿಗೂ ಗತಿ ಇಲ್ಲದ ಸರ್ಕಾರ: ಬಸವರಾಜ ಬೊಮ್ಮಾಯಿ


ನಿನ್ನೆ ಕೂಡ ಐವರು ಮಹಿಳೆಯರು ಎಸ್ಪಿ ಸೀಮಾ ಲಾಟ್ಕರ್, ಹಾಗೂ ಡಿವೈಎಸ್ಪಿ ಪ್ರಭಾವತಿ ಮುಂದೆ ಹಾಜರಾಗಿದ್ದಾರೆ. ಇಗಾಗ್ಲೆ ಒಟ್ಟು ಹತ್ತು ಸಂತ್ರಸ್ತ ಮಹಿಳೆಯರು ಎಸ್‌ಐಟಿ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಇನ್ನೂ ಎಲ್ಲಾ ಸಂತ್ರಸ್ತೆಯ ವಿಚಾರಣೆಯನ್ನ ಗೌಪ್ಯವಾಗಿ ಎಸ್ಐಟಿ ಅಧಿಕಾರಿಗಳು ನಡೆಸುತ್ತಿದ್ದಾರೆ.


ಇನ್ನು ಆಶ್ಲೀಲ ವಿಡಿಯೋ ಸಂಬಂಧ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಸಂಸದ ಪ್ರಜ್ವಲ್ ರೇವಣ್ಣಗೆ ವಿಶೇಷ ತನಿಖಾ ತಂಡವು ಲುಕ್ ಔಟ್ ನೊಟೀಸ್ ನೀಡಿದೆ. ಜರ್ಮನಿಯಲ್ಲಿರುವ ಪ್ರಜ್ವಲ್ ರೇವಣ್ಣ  ವಿದೇಶದಲ್ಲಿರುವುದರಿಂದ ವಿಚಾರಣೆಗೆ ಹಾಜರಾಗಲು ಏಳು ದಿನಗಳ ಕಾಲಾವಕಾಶ ನೀಡುವಂತೆ ತಮ್ಮ ವಕೀಲರ ಮೂಲಕ ಎಸ್ಐಟಿಗೆ ಮನವಿ ಮಾಡಿದ್ದರು. ಈ ಮನವಿಯನ್ನ ತಿರಸ್ಕರಿಸಿದ ತಂಡವು ಲುಕ್ ಔಟ್ ನೊಟೀಸ್ ಜಾರಿ ಮಾಡಿದೆ.


ಇದನ್ನೂ ಓದಿ:ಈ ದಿನ ಪ್ರಕಟವಾಗಲಿದೆ ಎಸ್.ಎಸ್.ಎಲ್.ಸಿ ಫಲಿತಾಂಶ : ಈ ವೆಬ್‌ಸೈಟ್‌ಗಳ ಮೂಲಕ ರಿಸಲ್ಟ್ ಚೆಕ್ ಮಾಡಿಕೊಳ್ಳಿ


ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಗೂ ಲುಕ್ ಔಟ್ ನೊಟೀಸ್ ರವಾನಿಸಲಾಗಿದ್ದು, ದೇಶಕ್ಕೆ ಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣನನ್ನ ವಶ‌ಪಡೆಯಲು ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಎಸ್ಐಟಿ ಮುಂದೆ ಹಾಜರಾಗದಿದ್ದರೆ ಪ್ರಜ್ವಲ್ ರೇವಣ್ಣ ಬಂಧನ ಸಾಧ್ಯತೆ ಇದೆ. 


ಇನ್ನು ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ‌ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ಹಾಗೂ ಎಚ್.ಡಿ.ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಾಗಿತ್ತು‌. ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸ್ಐಟಿ ವಿಚಾರಣೆ ಹಾಜರಾಗಬೇಕೆಂದು ನಿನ್ನೆ ಐಪಿಸಿ ಸೆಕ್ಷನ್ 41ರ ಅಡಿಯಲ್ಲಿ ನೊಟೀಸ್ ಜಾರಿ ಮಾಡಿತ್ತು‌. ಈ ಬಗ್ಗೆ ರೇವಣ್ಣವರು ವಿಚಾರಣೆ ಹಾಜರಾಗುವುದಾಗಿ ತಿಳಿಸಿದ್ದರು. ಒಂದು ವೇಳೆ ಇಂದು ವಿಚಾರಣೆಗೆ ಗೈರು ಹಾಜರಾದರೆ ಅವರನ್ನು ಬಂಧಿಸುವ ಕೆಲಸವನ್ನ ಎಸ್ಐಟಿ ಮಾಡಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.‌ 


ಇದನ್ನೂ ಓದಿ: ಕೋವಿಶೀಲ್ಡ್ ಲಸಿಕೆಯಿಂದ ಅಡ್ಡಪರಿಣಾಮ ಉಂಟಾಗುತ್ತದೆಂದು ಗೊತ್ತಿದ್ದರೂ ಮೋದಿ ಸರ್ಕಾರ ಲಸಿಕೆಗೆ ಒಪ್ಪಿಗೆ ನೀಡಿದ್ದೇಕೆ?: ಮೋಹನ್ ದಾಸರಿ ಪ್ರಶ್ನೆ


ಎಸೈಟಿ ಮಟ್ಟಕ್ಕೆ ಸದ್ಯ ತಂದೆ ಮಗ ಇಬ್ಬರೂ ಪರಾರಿಯಾಗಿದ್ದಾರೆ. ಅವರ ಇರುವಿಕೆ ಬಗ್ಗೆ ಇನ್ನೂ ಕೂಡ ಅಧಿಕೃತವಾಗಿ ಎಸೈಟಿಗೆ ಸ್ಪಷ್ಟವಾಗಿಲ್ಲ. ಸದ್ಯಕ್ಕೆ ಅವರ ಪ್ರೆಸೆನ್ಸ್ ಎಸೈಟಿಗೆ ಅಗತ್ಯವಿದೆ. ನೊಟೀಸ್ ನೀಡಿದರೂ ಹಾಜರಾಗದೆ ಹೋದಲ್ಲಿ ಎಸೈಟಿ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.