ಬೆಂಗಳೂರು: ಬೆಂಗಳೂರಿನ ಬೆಳ್ಳಂದೂರು ಕೆರೆ ಸಮಸ್ಯೆ ಇನ್ನೂ ಬಗೆ ಹರಿದಿಲ್ಲ. ಈ ಮಧ್ಯೆ ಬೆಳ್ಳಂದೂರು ಕೆರೆಯಿಂದಾಗಿ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಆದರೆ, ಈ ಎಲ್ಲಾ ಕ್ರಮಗಳನ್ನು ಕೈಗೊಂಡ ನಂತರವೂ ಬೆಳ್ಳಂದೂರು ಕೆರೆಯ ಸಮಸ್ಯೆಯು ಯಾವುದೇ ರೀತಿ ಪರಿಹಾರಗೊಂಡಿಲ್ಲ. ಅಲ್ಲದೆ, ಸ್ಥಳೀಯ ನಿವಾಸಿಗಳಿಗೆ ಇದರಿಂದ ತೀವ್ರತರವಾದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಮಾಧ್ಯಮದ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.



 


ಬೆಳ್ಳಂದೂರು ಕೆರೆಯಿಂದಾಗಿ ಉದ್ಭವಿಸುತ್ತಿರುವ ಸಮಸ್ಯೆಗಳ ನಿವಾರಣೆಗಾಗಿ ಈ ಹಿಂದೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಹಲವು ಕ್ರಮ ಕೈಗೊಳ್ಳಲು ಸೂಚನೆಗಳನ್ನು ನೀಡಿದೆ. ಈ ಹಿಂದೆ ಫೆಬ್ರವರಿ 23ರಂದು ಬೆಳ್ಳಂದೂರು ಕೆರೆಯಲ್ಲಿ ಉಂಟಾಗಿದ್ದ ನೊರೆಯನ್ನು ಕಡಿಮೆಗೊಳಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಿತ್ತು. ನಂತರ ಏಪ್ರಿಲ್ 19 ರಂದು ಬೆಳ್ಳಂದೂರಿನಲ್ಲಿರುವ ಎಲ್ಲಾ ಕೈಗಾರಿಕೆಗಳನ್ನು ಮುಚ್ಚುವಂತೆ ಆಗ್ರಹಿಸಿತ್ತು. ಅಲ್ಲದೆ ಬೆಳ್ಳಂದೂರು ಕೆರೆಯ ಸುತ್ತ-ಮುತ್ತಲಿನ ಕಾರ್ಖಾನೆಗಳಾಗಲಿ, ಅಪಾರ್ಟ್ಮೆಂಟ್ ಗಳಾಗಲಿ ಕೆರೆಗೆ ಚರಂಡಿ ನೀರು ಬಿಡದಂತೆಯೂ ಸೂಚನೆ ನೀಡಿತ್ತು.