ತುಮಕೂರು : ಹಾವಿನ ಹೆಸರನ್ನು ಕೇಳಿದರೆ ಹೆದರುವ ಅದೆಷ್ಟೋ ಜನರಿದ್ದಾರೆ. ಕಾಡಿನ ನಾಶದಿಂದ ಮಾನವನ ವಾಸಸ್ಥಾನದಲ್ಲಿ ಇತ್ತೀಚೆಗೆ ಹಾವುಗಳನ್ನು ಹೆಚ್ಚಾಗಿ ಕಾಣುತ್ತಿದ್ದೇವೆ. ಕೋಳಿಗೂಡಿನಲ್ಲಿ ಸೇರಿಕೊಂಡಿದ್ದ ಆರು ಅಡಿ ಉದ್ದದ ನಾಗರಹಾವನ್ನು ತುಮಕೂರಿನಲ್ಲಿ ರಕ್ಷಣೆ ಮಾಡಲಾಗಿದೆ. ತುಮಕೂರು ತಾಲೂಕಿನ ಕೋರಾದಲ್ಲಿ ಈ ಘಟನೆ ನಡೆದಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ :


ತುಮಕೂರು ತಾಲೂಕಿನ ಕೋರಾದ ನಿವಾಸಿ ಕೃಷ್ಣಮೂರ್ತಿ ಅವರಿಗೆ ಸೇರಿದ ಮನೆಯ ಕೋಳಿ ಗುಡ್ನಲ್ಲಿ ಸುಮಾರು ಆರು ಅಡಿ ಉದ್ದದ ನಾಗರಹಾವು ಸೇರಿಕೊಂಡಿತ್ತು. ಹಾವಿನ ಚಲನವಲನ ಕಂಡ ಮನೆಯವರು ಆತಂಕಗೊಂಡಿದ್ದರು. ಅಲ್ಲದೆ ವಾರಂಗಳ ಫೌಂಡೇಶನ್ ವನ್ಯಜೀವಿ ಜಾಗೃತ ಹಾಗೂ ಉರಗ ರಕ್ಷಣಾ ಸಂಸ್ಥೆಯ ದಿಲೀಪ್ ಮತ್ತು ಗುರುಕಿರಣ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. 


ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಕೋಳಿ ಗೂಡಿನಲ್ಲಿ ಅವಿತು ಕುಳಿತಿದ್ದ ಭಾರೀ ಗಾತ್ರದ ನಾಗರಹಾವು ಕಣ್ಣಿಗೆ ಬಿದಿದೆ. ತಕ್ಷಣ ನಾಗರಹಾವನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ. ಸಾರ್ವಜನಿಕರು ಎಲ್ಲಿಯಾದರೂ ಹಾಗೂ ಇತರ ವನ್ಯಜೀವಿಗಳು ತೊಂದರೆಯಲ್ಲಿದ್ದರೆ ಈ ಸಂಸ್ಥೆಗೆ ಕರೆ ಮಾಡುವಂತೆ ಉರಗ ತಜ್ಞ ದಿಲೀಪ್ ಮನವಿ ಮಾಡಿದ್ದಾರೆ.


ಇದನ್ನೂ ಓದಿ :


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.