ಬೆಂಗಳೂರು: ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನಚರಣೆ ಅಂಗವಾಗಿ ಪ್ರತಿವರ್ಷ ನೀಡಲಾಗುವ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು ಈ ಬಾರಿ ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಹಾಗೂ ಸಾಲಮರದ ತಿಮ್ಮಕ್ಕ ಅವರಿಗೆ ನೀಡಿ ಗೌರವಿಸಲಾಯಿತು.


COMMERCIAL BREAK
SCROLL TO CONTINUE READING

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗಾಂಧಿ ಸೇವಾ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಆರ್. ಅಶೋಕ್, ಮಹಾತ್ಮಾ ಗಾಂಧಿ ಸೇವಾ ಟ್ರಸ್ಟ್‌ ನ ವಿನಯ್ ಗುರೂಜಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. 


ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರು, ನನ್ನ ಪೂರ್ವ ಜನ್ಮದ ಪುಣ್ಯವೋ ಏನೋ ಗೊತ್ತಿಲ್ಲ. ಗಾಂಧೀಜಿ ಅವರನ್ನು ಎರಡು ಬಾರಿ ನೋಡಿದ್ದೇನೆ. ಮಾರ್ಟಿನ್ ಲೂಥರ್ ಕಿಂಗ್ ಗಾಂಧೀಜಿಯವರ ತತ್ವದಿಂದ ಸ್ಪೂರ್ತಿ ಪಡೆದು ದೊಡ್ಡ ಕ್ರಾಂತಿ ಮಾಡಿದರು. ವರ್ಣಭೇಧ ನೀತಿ ವಿರುದ್ದ ಲೂಥರ್ ಕಿಂಗ್ ತೀವ್ರ ಹೊರಾಟ ಮಾಡಿದರು. ಗಾಂಧೀಜಿಯವರು ಯುಗಪುರುಷನಿದ್ದಂತೆ. ಈ ಸತ್ಯ ಇಡೀ ಜಗತ್ತಿಗೇ ತಿಳಿದಿದೆ ಎಂದು ಹೇಳಿದರು. 


ಇದೇ ವೇಳೆ, ಪ್ರಶಸ್ತಿ ವಿತರಿಸುವ ವೇಳೆ ಗಾಂಧಿ ರೈತ ನಿಧಿಯಿಂದ ಸಂಗ್ರಹವಾದ ಹಣವನ್ನು ಸಾಲುಮರದ ತಿಮ್ಮಕ್ಕ ಅವರಿಗೆ ನೀಡಿ ಗೌರವಿಸಲಾಯಿತು.