ಬೆಂಗಳೂರು: ನೀರಿನ ಕೊರತೆ ಎಲ್ಲರಿಗೂ ಕಳವಳದ ಸಂಗತಿಯಾಗಿದೆ. ಇದರ ಜತೆಗೆ ಹೆಚ್ಚುತ್ತಿರುವ ಯುಟಿಲಿಟಿ ಬಿಲ್​ಗಳು ಬೆಂಗಳೂರಿನ ಅಪಾರ್ಟ್​ಮೆಂಟ್​ಗಳ ನಿವಾಸಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ನೀರು ಪೋಲಾಗುವುದನ್ನು ತಡೆಯುವ ಮೂಲಕ ಯುಟಿಲಿಟಿ ಬಿಲ್​ಗಳು ಕಡಿಮೆಯಾಗುವಂತೆ ನೋಡಿಕೊಳ್ಳುವುದು ವಸತಿ ಸಮುಚ್ಛಯಗಳಿಗೆ ಅನಿವಾರ್ಯವಾಗಿದೆ. ಈ ನಿರ್ಧಾರಕ್ಕೆ ಉತ್ತಮ ಪರಿಹಾರವೇ ಸ್ಮಾರ್ಟ್​​ ಮೀಟರ್​ ಅಳವಡಿಕೆ.
 
ಅದರಂತೆ ಬೆಂಗಳೂರಿನ ಹಲವಾರು ಅಪಾರ್ಟ್​ಮೆಂಟ್​​ ಸಂಕೀರ್ಣಗಳು ಹಾಗೂ ವಸತಿ ಸಮುದಾಯಗಳಲ್ಲಿ ನೀರು ಪೋಲಾಗುವುದನ್ನ ತಡೆಯಲು ಸ್ಮಾರ್ಟ್ ವಾಟರ್ ಮೀಟರ್​ಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಈ ವಸತಿ ಸಮುಚ್ಛಯಗಳೆಲ್ಲವೂ, ಸ್ಮಾರ್ಟ್ ವಾಟರ್  ಮೀಟರ್ ತಯಾರಿಕೆಯಲ್ಲಿ ಪರಿಣತಿ ಹೊಂದಿರುವ ಬೆಂಗಳೂರು ಮೂಲದ ಪ್ರಮುಖ ಕಂಪನಿಯಾದ ಸ್ಮಾರ್ಟರ್​ಹೋಮ್ಸ್​ನ ಐಒಟಿ (Internet of Things) ಆಧಾರಿತ ಸ್ಮಾರ್ಟ್ ವಾಟರ್ ಮೀಟರ್​ಗಳಾದ 'ವಾಟರ್​ಆನ್​ (WaterOn) ಅಳವಡಿಸಿಕೊಳ್ಳುತ್ತಿದೆ.  ಇದರಿಂದ ನೀರಿನ ಬಳಕೆಯಲ್ಲಿ ಸರಾಸರಿ ಶೇಕಡಾ 30ಷ್ಟು ಕಡಿಮೆಯಾಗಿದ್ದು ಬಿಲ್​ನಲ್ಲಿ ಗಣನೀಯ ಇಳಿಕೆ ಕಂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಇದು ಎನ್‌ಡಿಎ ಕೊನೆಯ ಚುನಾವಣೆ, ಮೋದಿ ಸರ್ಕಾರ ಅಂತ್ಯವಾಗುತ್ತೆ ಎಂದು ಭವಿಷ್ಯ ನುಡಿದ ಶಾಸಕ ಅಬ್ಬಯ್ಯಾ ಪ್ರಸಾದ್ 
 
ಸ್ಮಾರ್ಟ್ ವಾಟರ್ ಮೀಟರ್ ಗಳ ಅಳವಡಿಕೆಯು ಜಲ ಸಂಪನ್ಮೂಲಗಳನ್ನು ಸಮರ್ಥವಾಗಿ ನಿರ್ವಹಿಸುವ ನಗರದ ಅಪಾರ್ಟ್​​ಮೆಂಟ್​ಗಳ ಪಾಲಿಗೆ ಮಹತ್ವದ ಹೆಜ್ಜೆಯಾಗುತ್ತದೆ. ಇದರಿಂದಾಗಿ ವೈಯಕ್ತಿಕ (ಒಂದು ಮನೆಯಲ್ಲಿ ಎಷ್ಟು ನೀರು ಬಳಕೆಯಾಗಿದೆಯೊ ಅಷ್ಟು) ಬಳಕೆಯ  ಆಧಾರದ ಮೇಲೆ ಬಿಲ್​ ನೀಡಬಹುದಾಗಿದೆ. ಪ್ರಸ್ತುತ ಪಾಲನೆ ಮಾಡುತ್ತಿರುವ ಎಲ್ಲ ಫ್ಲ್ಯಾಟ್​ಗಳಿಗೆ ಸಮಾನ ದರವನ್ನು ನಿಗದಿ ಮಾಡುವ ಅಭ್ಯಾಸಕ್ಕಿಂತ ಸ್ಮಾರ್ಟ್​ ಮೀಟರ್ ಮೂಲಕ ಬಳಸಿದಷ್ಟು ನೀರಿಗೆ ಬಿಲ್​ ಕೊಡುವುದು ಉತ್ತಮ ನಿರ್ಧಾರ . ಇದರಿಂದ  ನೀರಿನ ಲಭ್ಯತೆ ಮತ್ತು ನಿವಾಸಿಗಳ ನಡುವಿನ ಭಾವನಾತ್ಮಕ ಸಂಬಂಧಕ್ಕೆ ಪೂರಕವಾಗಿದೆ.  
 
ವಾಟರ್​ಆನ್​ (WaterOn) ಸ್ಮಾರ್ಟ್ ವಾಟರ್ ಮೀಟರ್  ಮೊಬೈಲ್ ಅಪ್ಲಿಕೇಶನ್ ಜತೆ ನಿರಂತರ ಸಂಪರ್ಕದಲ್ಲಿರುತ್ತವೆ. ಮನೆ ಮಾಲೀಕರಿಗೆ ಅವರ ಬಳಕೆಯ ಬಗ್ಗೆ ಮಾಹಿತಿ, ಅನುಗುಣವಾದ ಬಿಲ್ ಗಳು ಮತ್ತು ನೀರು ಪೋಲಾಗುತ್ತಿರುವ ಬಗ್ಗೆ ಎಚ್ಚರಿಕೆಗಳನ್ನು ನೀಡುತ್ತದೆ. ಈ ತಂತ್ರಜ್ಞಾನವನ್ನು ಬೆಳ್ಳಂದೂರಿನ ಮಾತೃ ಶ್ರೀ ಆರ್ಕಿಡ್ಸ್ ಹೋಮ್ಸ್ ಮತ್ತು ಹೂಡಿಯಲ್ಲಿರುವ ಸ್ಪೆಂಡಿಡ್​​ ಎಟರ್ನಿಟಿ ಅಪಾರ್ಟ್​ಮೆಂಟ್​ಗಳು ಅಳವಡಿಸಿಕೊಂಡಿವೆ. ಈ ಉದಾಹರಣೆಗೆ, ಮಾತೃ ಶ್ರೀ ಆರ್ಕಿಡ್ಸ್ ಹೋಮ್ಸ್​ನಲ್ಲಿ ಸ್ಮಾರ್ಟ್​ಮೀಟರ್​ ಅಳವಡಿಸಿಕೊಂಡ ಬಳಿಕ ನೀರಿನ ಬಳಕೆಯಲ್ಲಿ 20% ನಷ್ಟು ಕಡಿಮೆಯಾಗಿದೆ.  ದಿನಕ್ಕೆಬಳಕೆಯಾಗುತ್ತಿದ್ದ  50,000 ಲೀಟರ್ ನಿಂದ 40,000 ಲೀಟರ್ ಗೆ ಇಳಿದಿದೆ. ಅಂತೆಯೇ, ಸ್ಪ್ಲೆಂಡಿಡ್ ಎಟರ್ನಿಟಿ ಸಮುಚ್ಛಯದ ನೀರಿನ ಬಳಕೆಯಲ್ಲಿ 40% ನಷ್ಟು ಕಡಿತವಾಗಿದೆ. ದೈನಂದಿನ ಆಧಾರದ ಮೇಲೆ 45,000 ಲೀಟರ್ ಗಳಿಂದ 27,000 ಲೀಟರ್ ಗಳಿಗೆ ಇಳಿದಿದೆ.


ಇದನ್ನೂ ಓದಿ: ಬಿಜೆಪಿ ವಿಷದ ಹೊಗೆ ಬಿಡುತ್ತದೆ ಎಂದು ಜನ ಪಕ್ಕಕ್ಕೆ ತಳ್ಳಿದರು: ಸಿಎಂ ಸಿದ್ದರಾಮಯ್ಯ
 
ವಾಟರ್ ಆನ್ ಅನ್ನು ನಿರ್ದಿಷ್ಟವಾಗಿ ಅತಿ ಹೆಚ್ಚು ಮನೆಗಳನ್ನು ಹೊಂದಿರುವ ಅಪಾರ್ಟ್​ಮೆಂಟ್ ಸಂಕೀರ್ಣಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಎರಡು ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತದೆ. ಮೊದಲನೆಯದಾಗಿ ಮೀಟರ್ ಅಳವಡಿಸಿಕೊಂಡಲ್ಲಿ ಕುಟುಂಬವೊಂದಕ್ಕೆ ತಮ್ಮ ನೀರಿನ ಬಳಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಈ ವಿಚಾರದಲ್ಲಿ ಸುಧಾರಿಸಿಕೊಳ್ಳುವುದಕ್ಕೆ ಅನುವು ಮಾಡಿಕೊಡುತ್ತದೆ. ಆ ಮೂಲಕ ಪೋಲು ತಡೆಯಲು ಸಾಧ್ಯವಿದೆ.  ಎರಡನೆಯದಾಗಿ, ಬಳಕೆ ಆಧಾರಿತ ಬಿಲ್ಲಿಂಗ್ ಅನ್ನು ಅಳವಡಿಸಿಕೊಳ್ಳುವುದರಿಂದ ಮಿತಿಮೀರಿದ  ಬಳಕೆಯನ್ನು ಕಡಿಮೆ ಮಾಡಬಹುದು ಹಾಗೂ  ಜಲ ಸಂಪನ್ಮೂಲ ಬಳಕೆಯನ್ನು ಉತ್ತಮಗೊಳಿಸುವ ಅವಕಾಶ  ನೀಡುತ್ತದೆ. ಜಾಗೃತಿ ಮತ್ತು ಜವಾಬ್ದಾರಿಯನ್ನು ಈ  ಮೀಟರ್​ಗಳು  ಮಾಡುತ್ತವೆ ಹಾಗೂ ನಡವಳಿಕೆಯ ಬದಲಾವಣೆ ಮೂಲಕ  ನೀರಿನ ಬಳಕೆಯನ್ನು ಕಡಿಮೆ ಮಾಡುತ್ತದೆ.  
 
"ಬೆಂಗಳೂರು ಮಹಾನಗರವು ನೀರಿನ ಕೊರತೆಯಿಂದ ಮತ್ತು ನಾಗರಿಕರು ಹೆಚ್ಚುತ್ತಿರುವ ಯುಟಿಲಿಟಿ ಬಿಲ್​​ಗಳೊಂದಿಗೆ ಒದ್ದಾಡುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ನಿವಾಸಿಗಳಲ್ಲಿ ನೀರಿನ ಮೀಟರಿಂಗ್ ಪರಿಹಾರಗಳ ಬಗ್ಗೆ ಆಸಕ್ತಿ ಹೆಚ್ಚುತ್ತಿರುವುದನ್ನು ನಾವು ಗಮನಿಸಿದ್ದೇವೆ. ಜಲ  ಪ್ರಜ್ಞೆಯ ಕಡೆಗೆ ಬದಲಾವಣೆ ಹೆಚ್ಚುತ್ತಿದೆ.  ಹೆಚ್ಚಿನ ನಿವಾಸಿಗಳು ತಮ್ಮ ನೀರಿನ ಬಳಕೆಯನ್ನು ಮೇಲ್ವಿಚಾರಣೆ ಮಾಡುವ ಮತ್ತು ನಿರ್ವಹಿಸುವ ಅಗತ್ಯವನ್ನು ಮನಗಂಡಿದ್ದಾರೆ. ಸ್ಮಾರ್ಟ್​ಹೋಮ್ ಮೀಟರ್​  ಮೂಲಕ ಈ ಸುಧಾರಣಾ ಆಂದೋಲನದ ಮುಂಚೂಣಿಯಲ್ಲಿರಲು ನಾವು ಹೆಮ್ಮೆಪಡುತ್ತೇವೆ, ಅದೇ ರೀತಿ ಸ್ಮಾರ್ಟ್ ವಾಟರ್ ಮೀಟರಿಂಗ್ ಪರಿಹಾರಗಳನ್ನು ಒದಗಿಸುತ್ತೇವೆ, ಇದು ಜನ ಸಮುದಾಯಕ್ಕೆ ಅರಿವಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಹೆಚ್ಚು ಸುಸ್ಥಿರ ಭವಿಷ್ಯಕ್ಕೆ ಕೊಡುಗೆ ನೀಡಲು ಪ್ರೇರೇಪಿಸುತ್ತದೆ "ಎಂದು ಸ್ಮಾರ್ಟ್​​ಹೋಮ್ಸ್​  ಸಿಒಒ ಶ್ರೀ ಜಿತೇಂದರ್ ತಿರ್ವಾನಿ ಹೇಳಿದ್ದಾರೆ.
 
SmartHomes ಬಗ್ಗೆ


ಸ್ಮಾರ್ಟ್ ಹೋಮ್ಸ್ ಬೆಂಗಳೂರು ಮೂಲದ ಕಂಪನಿಯಾಗಿದ್ದು, ಹೊಸ ಮಾದರಿಯ  ಸ್ಮಾರ್ಟ್ ವಾಟರ್ ಮೀಟರಿಂಗ್ ಪರಿಹಾರಗಳಲ್ಲಿ ಪರಿಣತಿ ಹೊಂದಿದೆ. ಸುಸ್ಥಿರ ನೀರಿನ ನಿರ್ವಹಣಾ ಅಭ್ಯಾಸಗಳನ್ನು ಉತ್ತೇಜಿಸಲು ಬದ್ಧವಾಗಿರುವ ಸ್ಮಾರ್ಟ್ ಹೋಮ್ಸ್ ವಸತಿ ಸಂಕೀರ್ಣಗಳ ವಿಶಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಒದಗಿಸುತ್ತದೆ, ಸಮುದಾಯಗಳು ತಮ್ಮ ನೀರಿನ ಬಳಕೆಯನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಮತ್ತು ಉತ್ತಮಗೊಳಿಸಲು ಸಶಕ್ತಗೊಳಿಸುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.