ಹರಿಹರ: ಹಾವಿನ ದ್ವೇಷ ಹನ್ನೆರಡು ವರುಷ ಎಂದು ಹೇಳೋದನ್ನು ಕೇಳಿದ್ದೇವೆ. ಅಷ್ಟೇ ಏಕೆ? ಈ ಬಗ್ಗೆ ಸಾಕಷ್ಟು ಕಥೆಗಳೂ ಇವೆ. ಅದಕ್ಕೆ ನಿದರ್ಶನವೆಂಬಂತೆ ಇಲ್ಲೊಬ್ಬ ಮಹಿಳೆ ಒಂದು ವಾರದಲ್ಲಿ ಮೂರು ಬಾರಿ ಹಾವಿನಿಂದ ಕಡಿತಕ್ಕೆ ಒಳಗಾಗಿದ್ದಾಳೆ. ವಿಚಿತ್ರ ಅನಿಸುತ್ತಿದೆಯೇ? ಆದರೂ ಇದು ಸತ್ಯ!


COMMERCIAL BREAK
SCROLL TO CONTINUE READING

ಹರಿಹರ ಪಟ್ಟಣದ ಜೆ.ಸಿ.ಬಡಾವಣೆ ನಿವಾಸಿ ಖಮರೀನ್ ತಾಜ್(32) ಎಂಬಾಕೆಯೇ ಆರು ದಿನಗಳಲ್ಲಿ ಮೂರು ಬಾರಿ ಹಾವಿನ ಕಡತಕ್ಕೆ ಒಳಗಾದ ಮಹಿಳೆ. ಜೂನ್ 22ರಂದು ಬೆಳಿಗ್ಗೆ ಮನೆಯಂಗಳದಲ್ಲಿ ಕೆಲಸ ಮಾಡುತ್ತಿದ್ದಾಗ ಖಮರೀನ್ ತಾಜ್ ಅವರನ್ನು ಹಾವೊಂದು ಕಚ್ಚಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾದ ಎರಡು ದಿನಗಳ ನಂತರ ಮತ್ತೆ ಅದೇ ಮನೆಯಂಗಳದಲ್ಲಿ ತಾಜ್ ಅವರಿಗೆ ಹಾವು ಕಚ್ಚಿದೆ ಎಂದು ಮತ್ತದೇ ಆಸ್ಪತ್ರೆಗೆ ದಾಖಲಾಗಿದ್ದರು. ಅದಾದ ಮರುದಿನ ಅಂದರೆ ಜೂ.30ರಂದು ಶನಿವಾರ ಆಸ್ಪತ್ರೆ ಕ್ಯಾಂಟೀನ್'ನಲ್ಲಿ ತಿಂಡಿ ತಿನ್ನಲು ಹೋದಾಗ ಮತ್ತೆ ಹಾವು ಕಚ್ಚಿದೆ. 


ಸದ್ಯ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೇನು ಶಾಪವೋ, ಹಾವಿನ ದ್ವೇಷವೂ ತಿಳಿಯದಂತಾಗಿದೆ. ಈ ಘಟನೆ ಮಹಿಳೆಯ ಮನೆಯವರಲ್ಲಿ ಆತಂಕ ಮೂಡಿಸಿದೆ.