ಬಿಸಿಲ ಧಗೆ ಏರುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಸರ್ಪಗಳ ಕಾಟ! ನೆಲದೊಳಗಿನಿಂದ ಎದ್ದು ಬರುತ್ತಿವೆ ವಿಷಕಾರಿ ಸರ್ಪಗಳು
ಬಿಸಿಲ ತಾಪ ಏರುತ್ತಿರುವ ಕಾರಣ ನೆಲದೊಳಗಿನಿಂದ ಹಾವುಗಳು ಎದ್ದು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅಲ್ಲಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿವೆ.
ಬೆಂಗಳೂರು : ಬೆಂಗಳೂರಿನಲ್ಲಿ ಫೆಬ್ರವರಿಯಲ್ಲಿಯೇ ಬಿಸಿಲ ತಾಪ ಏರುತ್ತಿದೆ. ದಿನೇ ದಿನೇ ತಾಪಮಾನ ಏರುತ್ತಲೇ ಇದೆ. ಬಿಸಿಲ ಝಳ ಏರುತ್ತಿದ್ದಂತೆಯೇ ಸಿಲಿಕಾನ್ ಸಿಟಿಯಲ್ಲಿ ಸರ್ಪಗಳ ಕಾಟ ಕೂಡಾ ಆರಂಭವಾಗಿದೆ. ಎಲ್ಲಿ ನೋಡಿದರೂ ಸರ್ಪಗಳು ಕಾಣಿಸಿಕೊಳ್ಳಲು ಆರಂಭಿಸಿದೆ. ಈ ಬಗ್ಗೆ ಪ್ರತಿ ನಿತ್ಯ ಬಿಬಿಎಂಪಿ ಕಂಟ್ರೋಲ್ ರೂಂ ಗೆ ನೂರಕ್ಕೂ ಹೆಚ್ಚು ಕರೆಗಳು ಬರುತ್ತಿವೆ.
ಪ್ರತ್ಯಕ್ಷ ಆಗ್ತಿವೆ ನೆಲದೊಳಗಿದ್ದ ವಿಷಕಾರಿ ಸರ್ಪಗಳು :
ಬಿಸಿಲ ತಾಪ ಏರುತ್ತಿರುವ ಕಾರಣ ನೆಲದೊಳಗಿನಿಂದ ಹಾವುಗಳು ಎದ್ದು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅಲ್ಲಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿವೆ. ಬಿಸಿಲ ಬೇಗೆ ತಡೆಯದೆ ತಂಪು ವಾತಾವರಣ ಹುಡುಕಿಕೊಂಡು ಹಾವುಗಳು ಮನೆಗಳ ಒಳಗೆ ಪ್ರವೇಶಿಸುತ್ತಿದೆ. ಅಲ್ಲಲ್ಲಿ ಸರ್ಪಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಇದೀಗ ನಿತ್ಯ ಬಿಬಿಎಂಪಿ ಕಂಟ್ರೋಲ್ ರೂಂಗೆ ದೂರುಗಳು ಬರುತ್ತಿವೆ.
ಇದನ್ನೂ ಓದಿ : ಪ್ರಶ್ನಾವಳಿ ಮೂಲಕ ಸಂವಿಧಾನ ಜಾಗೃತಿಗೆ ಮುಂದಾದ ಈ ಜಿಲ್ಲಾ ಪಂಚಾಯತಿ..!
ಪಾಲಿಕೆ ಅರಣ್ಯ ಇಲಾಖೆಗೆ ದಾಖಲಾಗುತ್ತಿವೆ ದೂರು :
ಸರ್ಪಗಳು ಮನೆಯೊಳಗೇ, ಹೊರಗೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಪ್ರತಿ ನಿತ್ಯ ಬಿಬಿಎಂಪಿ ಕಂಟ್ರೋಲ್ ರೂಂಗೆ ನೂರಕ್ಕೂ ಹೆಚ್ಚು ಕರೆಗಳು ಬರುತ್ತಿವೆ ಎನ್ನಲಾಗಿದೆ. ಮನೆಯೊಳಗೆ, ಕಾಂಪೌಂಡ್ ಒಳಗೆ, ಕಚೇರಿಯೊಳಗೆ ಸೇರಿ ಮೆಡಿಕಲ್ ಶಾಪ್ ಗಳಲ್ಲಿ ಸರ್ಪಗಳ ಕಾಟ ಎಂದು ದೂರು ದಾಖಲಿಸಲಾಗುತ್ತಿದೆ.
ಬಿಸಿಲು ಹೆಚ್ಚಾಗುತ್ತಿದ್ದ ಹಾಗೆ ಮನೆಗಳಿಗೆ ಈ ವಿಷಕಾರಿ ಸರ್ಪಗಳು ನುಗ್ಗುತ್ತಿವೆ. ಮನೆಯ ಕಾಂಪೌಂಡ್, ಅಡುಗೆ ಮನೆ, ಶೂ ಗಳ ಒಳಗೆ ಹೊಕ್ಕಿ ಕುಳಿತುಕೊಳ್ಳುತ್ತಿದೆ.
ಶಿವಾಜಿನಗರ, ಅಶೋಕನಗರ, HRBR ಲೇಔಟ್, ಕಾಕ್ಸ್ ಟೌನ್, ಬಾಣಸವಾಡಿ, ಹೆಬ್ಬಾಳ, ಎಂಜಿ ರಸ್ತೆ, ಯಲಹಂಕ, ಎಲೆಕ್ಟ್ರಾನಿಕ್ ಸಿಟಿ, ಹಲಸೂರು, ಶಾಂತಿನಗರ ಸೇರಿದಂತೆ ಸಿಟಿಯ ಬಹುತೇಕ ಎಲ್ಲಾ ಕಡೆ ಹಾವುಗಳು ಕಂಡುಬರುತ್ತಿವೆ ಎಂದು ಉರಗ ತಜ್ಞ ಮೋಹನ್ ತಿಳಿಸಿದ್ದಾರೆ.
ಇದನ್ನೂ ಓದಿ : ಲಂಚ ಸ್ವೀಕರಿಸುವ ವೇಳೆ ಹೆಡ್ ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.