ಬೆಂಗಳೂರು: ಕನ್ನಡ ಸಾಹಿತ್ಯಲೋಕದ ಪ್ರಖ್ಯಾತ ವಿಮರ್ಶಕ ಹಾಗೂ ಜನಪರ ಹೋರಾಟಗಾರರಾದ ಜಿ.ರಾಜಶೇಖರ್ ಅವರು ಅನಾರೋಗ್ಯದಿಂದಾಗಿ ಬುಧುವಾರದಂದು ರಾತ್ರಿ ಉಡುಪಿಯಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.


COMMERCIAL BREAK
SCROLL TO CONTINUE READING

ಕಳೆದ ಮೂರು ವರ್ಷಗಳಿಂದ ಅವರು ಅನಾರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದರು ಎನ್ನಲಾಗಿದೆ.ಇತ್ತೀಚಿಗೆ ಅವರಿಗೆ ಶ್ವಾಸಕೋಶದ ಸಮಸ್ಯೆಯಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.


ಇದನ್ನೂ ಓದಿ: ಮಾರ್ಕೊಪೋಲೋ-ಟಾಟಾ ಮೋಟಾರ್ ಬಿಕ್ಕಟ್ಟು ಬಹುತೇಕ ಇತ್ಯರ್ಥ


1946ರಲ್ಲಿ ಜನಿಸಿದ ಜಿ. ರಾಜಶೇಖರ ಅವರು ಉಡುಪಿಯಲ್ಲಿ ಪದವಿವರೆಗಿನ ವಿದ್ಯಾಭ್ಯಾಸ ನಡೆಸಿ ಕೆಲಕಾಲ ಶಿಕ್ಷಕರಾಗಿ ದುಡಿದು ನಂತರ ಎಲ್ಐಸಿಯಲ್ಲಿ ಕಾರ್ಯನಿರ್ವಹಿಸಿದ್ದರು.ಸಾಹಿತ್ಯ-ಸಮಾಜ ಹಾಗೂ ಸಾಂಸ್ಕೃತಿಕ ರಾಜಕಾರಣಕ್ಕೆ ಸಂಬಂಧಿಸಿದಂತೆ ಅವರು ನಿರಂತರವಾಗಿ ಬರೆಯುತ್ತಿದ್ದರು, ಅಷ್ಟೇ ಅಲ್ಲದೆ ಸಮಕಾಲೀನ ತುರ್ತಿನ ವಿದ್ಯಮಾನಗಳ ಬಗ್ಗೆಯೂ ಕೂಡ ಸ್ಪಂದಿಸುತ್ತಿದ್ದರು.


ಕಾಗೋಡು ಸತ್ಯಾಗ್ರಹ, ಪರಿಸರ ಮತ್ತು ಸಮಾಜವಾದ, ಬರ್ಟೊಲ್ಟ್ ಬ್ರೆಕ್ಟ್ ಪರಿಚಯ, ದಾರು ಪ್ರತಿಮ ನ ಪೂಜಿವೇ (ಅನುವಾದ), ಕೋಮುವಾದದ ಕರಾಳ ಮುಖಗಳು, ಹರ್ಷಮಂದರ್‍ ಬರಹಗಳು (ಸಹಲೇಖಕ: ಕೆ. ಫಣಿರಾಜ್), ಬಹುವಚನ ಭಾರತದಂತಹ ಮಹತ್ವದ ಕೃತಿಗಳನ್ನು ಅವರು ರಚಿಸುವ ಮೂಲಕ ರಾಜ್ಯದ ಸಾಹಿತ್ಯಿಕ ವಲಯದಲ್ಲಿ ಸಂವೇದನಾಶೀಲ ಬರಹಗಾರರು ಎಂದು ಗುರುತಿಸಿಕೊಂಡಿದ್ದರು.


ಜಿ.ರಾಜಶೇಖರ ಅವರ ಬಹುವಚನ ಭಾರತ ಕೃತಿಗೆ 2015ರ ಸಾಲಿನ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಕೂಡ ಲಭಿಸಿತ್ತು, ಆದರೆ ಅದನ್ನು ಅವರು ಸ್ವೀಕರಿಸಲು ನಿರಾಕರಿಸಿದ್ದರು.ಈಗ ಅವರ ನಿಧನಕ್ಕೆ ಹಲವು ಗಣ್ಯ ವ್ಯಕ್ತಿಗಳು ತೀವ್ರ ಸಂತಾಪಗಳನ್ನು ಸೂಚಿಸಿದ್ದಾರೆ.


ಇದನ್ನೂ ಓದಿ: ಜೈ ಭೀಮ್ʼ ಮತ್ತು ‘ಜನ ಗಣ ಮನ’ ಸಿನಿಮಾಗಳು ನನ್ನ ಮನ ಕಲಕಿವೆ: ಎಚ್‌ಡಿಕೆ


ಹಿರಿಯ ಪತ್ರಕರ್ತರಾದ ಸನತ್ ಕುಮಾರ್ ಬೆಳಗಲಿ ಅವರು ಸಂತಾಪ ಸೂಚಿಸುತ್ತಾ " ಬಹುತ್ವ ಭಾರತದ ಉಳಿವಿಗಾಗಿ ನಿರಂತರ ಜನಜಾಗ್ರತಿ ಯಲ್ಲಿ ತೊಡಗಿದ್ದ ಉಡುಪಿಯ ಚಿಂತಕ,ವಿಚಾರವಾದಿ ಲೇಖಕ ಜಿ.ರಾಜಶೇಖರ ಇನ್ನಿಲ್ಲ" ಎಂದು ಕಂಬನಿ ಮಿಡಿದಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.