ಬೆಂಗಳೂರು : ನಾಳೆಯಿಂದ ಒಂದು ಸಾವಿರ ಪೆಟಿಷನ್ ದೂರು ದಾಖಲು ಮಾಡುತ್ತೇವೆ. ಮಸೀದಿಗಳ ಮೇಲೆ ಅನಧಿಕೃತ ಲೌಡ್ ಸ್ಪೀಕರ್ ವಿರುದ್ಧ ಹೋರಾಟ ಮಾಡುತ್ತವೆ. ಹಲಾಲ್ ವಿರುದ್ಧ ನಮ್ಮ ಹೋರಾಟ ದೊಡ್ಡದಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ರಾಜಾಜಿನಗರ ಕೆಂಪೇಗೌಡ ಸಮುದಾಯಭವನದಲ್ಲಿ ಜನ ಜಾಗೃತಿ ಸಮಿತಿಯಿಂದ ಆಯೋಜನೆ ಮಾಡಿರುವ ಹಿಂದೂ ರಾಷ್ಟ್ರ ಅಧಿವೇಶನ ಸಭೆಯಲ್ಲಿ ಪ್ರಶಾಂತ್ ಸಂಬರಗಿ ಸೇರಿದಂತೆ ಹಿಂದೂ ಮುಖಂಡರು ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮವನ್ನು ಧರ್ಮ ಹಾಗೂ ರಾಷ್ಟ್ರದ ರಕ್ಷಣೆಗಾಗಿ ಸಂಘಟಿಸಲು, ಹಿಂದೂ ಧರ್ಮದ ಮೇಲಾಗ್ತಿರುವ ದೌರ್ಜನ್ಯಗಳ ವಿರುದ್ಧ ಹೋರಾಟ, ಭಾರತದ ದೇಶ ಹಿಂದೂ ರಾಷ್ಟ್ರ ಮಾಡಲು ಇಂದು ಚಿಂತನ-ಮಂಥನ ಕುರಿತು ಆಯೋಜನೆ ಮಾಡಲಾಗಿದೆ. 


[[{"fid":"238731","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಇದನ್ನೂ ಓದಿ : ಸಿದ್ದರಾಮಯ್ಯ ಭ್ರಷ್ಟಾಚಾರವನ್ನು ಸಾಂಸ್ಥೀಕರಿಸಿದ ಮಜಾವಾದಿ ರಾಜಕಾರಣಿ: ಬಿಜೆಪಿ


ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಶಾಂತ್ ಸಂಬರಗಿ, ನಮ್ಮ ಒಗ್ಗಟ್ಟಿನಿಂದ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಯ್ತು. ಇದ್ರಿಂದ ಜನರಿಗೆ, ಸರ್ಕಾರಕ್ಕೆ ಅರಿವು ಮೂಡಿದೆ. ಧರ್ಮದ ಹೆಸರಲ್ಲಿ ಸ್ಟಾಂಪಿಂಗ್ ಹಾಕ್ತಿರಲ್ಲ ನಿಮ್ಮ ನಿಲುವು ಏನು..? ಕಾನೂನು ಬಾಹಿರ ಹಲಾಲ್ ಬಗ್ಗೆ ನಮ್ಮ ಹೋರಾಟ. ಅದನ್ನ ಸರ್ಕಾರ ಕೂಡಲೇ ನಿರ್ಬಂಧ ಮಾಡಬೇಕು ಎಂದು ಗುಡುಗಿದ್ದಾರೆ.


ಇದನ್ನೂ ಓದಿ : ಕರ್ನಾಟಕಕ್ಕೆ ʼಅಸಾನಿʼ ಭೀತಿ: ರಾಜ್ಯದ ವಿವಿಧೆಡೆ ಇಂದಿನಿಂದ ಭಾರೀ ಮಳೆ ಸಾಧ್ಯತೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.