`ಮೊದಲು ಈ ಆರ್ಥಿಕ ಬಿಕ್ಕಟ್ಟನ್ನು ಸರಿಪಡಿಸಿ, ಆ ಮೇಲೆ ನಮ್ಮ ಸರ್ಕಾರದ ತಪ್ಪು ಹುಡುಕಲು ಹೊರಡಿ`
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಬರೋಬ್ಬರಿ 125 ಕೋಟಿ ಸಾಲ ಇತ್ತು ಎನ್ನುವ ವಿಚಾರವಾಗಿ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ನಮ್ಮ ಸರ್ಕಾರದ ಕಾಲದಲ್ಲಿ ಸಾಲ ಹೆಚ್ಚಾಗಿತ್ತು ಎಂಬ ಹಳೆ ಸುಳ್ಳನ್ನು ಬಿಜೆಪಿ ಹೊಸರಾಗದಲ್ಲಿ ಹೇಳುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಬರೋಬ್ಬರಿ 125 ಕೋಟಿ ಸಾಲ ಇತ್ತು ಎನ್ನುವ ವಿಚಾರವಾಗಿ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ನಮ್ಮ ಸರ್ಕಾರದ ಕಾಲದಲ್ಲಿ ಸಾಲ ಹೆಚ್ಚಾಗಿತ್ತು ಎಂಬ ಹಳೆ ಸುಳ್ಳನ್ನು ಬಿಜೆಪಿ ಹೊಸರಾಗದಲ್ಲಿ ಹೇಳುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ: Siddaramaiah: 'ದಾರಿಯಲ್ಲಿ ನಿಂತ ಡಕೋಟಾ ಎಕ್ಸ್ ಪ್ರೆಸ್ ಸರ್ಕಾರ'
ಈ ರೀತಿ ಸುಳ್ಳು ಹೇಳಿ ಜನರೆದುರು ಬೆತ್ತಲೆ ಆಗೋದನ್ನು ತಪ್ಪಿಸಲು ಬಿಜೆಪಿ ತನ್ನ ಸೋಷಿಯಲ್ ಮೀಡಿಯಾ ಉಸ್ತುವಾರಿಗಳಿಗೆ ಸಾರ್ವಜನಿಕ ಹಣಕಾಸು ನಿರ್ವಹಣೆಯ ಬಗ್ಗೆ ತರಬೇತಿ ಕೊಡುವುದು ಒಳ್ಳೆಯದು.
"ರಾಜ್ಯಕ್ಕೆ ಅನ್ಯಾಯ ಆಗ್ತಿದ್ರು ಮುಖ್ಯಮಂತ್ರಿಗಳು ಪ್ರಧಾನಿಗಳ ಎದುರು ಒಂದೂ ಮಾತನಾಡಲ್ಲ"
'ಆರ್ಥಿಕ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆ' (FRBM)ಗೆ ಬದ್ದವಾಗಿಯೇ ನಾನು ಆರು ಬಜೆಟ್ ಮಂಡಿಸಿದ್ದೆ. ಈ ಎಲ್ಲ ಬಜೆಟ್ ಗಳಲ್ಲಿ ಹಣಕಾಸು ಕೊರತೆ ಜಿಎಸ್ ಡಿಪಿಯ ಶೇಕಡಾ ಮೂರರ ಮಿತಿಯಲ್ಲಿತ್ತು. ಒಟ್ಟು ಸಾಲ ಎಫ್ ಆರ್ ಬಿ ಎಂ ಕಾಯ್ದೆಗೆ ಅನುಗುಣವಾಗಿ ಜಿ.ಎಸ್.ಡಿ.ಪಿ ಯ ಶೇಕಡಾ 25ರ ಮಿತಿಯಲ್ಲಿತ್ತು.
ಬಿಜೆಪಿ ಆಡಳಿತದಲ್ಲಿ ಒಟ್ಟು ಸಾಲ ಜಿಎಸ್ ಡಿಪಿಯ ಶೇಕಡಾ 33ರಷ್ಟಾಗಿದೆ. ಇದು FRBM ಕಾಯ್ದೆಯ ಉಲ್ಲಂಘಣೆ. ಇದರ ಜೊತೆಗೆ ಹಣಕಾಸು ಕೊರತೆ ಶೇಕಡಾ ಮೂರರಿಂದ ಐದಕ್ಕೇರಿದೆ. ಇದು ಆತಂಕಕಾರಿ ಬೆಳವಣಿಗೆ.ಮೊದಲು ಈ ಆರ್ಥಿಕ ಬಿಕ್ಕಟ್ಟನ್ನು ಸರಿಪಡಿಸಿ, ಆ ಮೇಲೆ ನಮ್ಮ ಸರ್ಕಾರದ ತಪ್ಪು ಹುಡುಕಲು ಹೊರಡಿ ಎಂದು ಸಿದ್ಧರಾಮಯ್ಯ ಮನವಿ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.