Nitin Gadkari : ಮೈಸೂರು ಹೆದ್ದಾರಿ-ಪೀಣ್ಯ ಮೇಲ್ಸೇತುವೆ ದೋಷ : ತಪ್ಪು ಒಪ್ಪಿಕೊಂಡ ಗಡ್ಕರಿ
ಪೀಣ್ಯ ಮೇಲ್ಸೇತುವೆ ಕಾಮಗಾರಿ ಕಳಪೆ; ಹೊಸ ಗುತ್ತಿಗೆ ನೀಡಲಾಗುವುದು
ಬೆಂಗಳೂರು : ಬೆಂಗಳೂರು-ಮೈಸೂರು ಹೆದ್ದಾರಿ, ಪೀಣ್ಯ ಮೇಲ್ಸೇತುವೆ ಕಾಮಗಾರಿಯಲ್ಲಿ ದೋಷ ಆಗಿದೆ ಎನ್ನುವ ಮೂಲಕ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಪ್ಪನ್ನ ಒಪ್ಪಿಕೊಂಡಿದ್ದಾರೆ.
ಪೀಣ್ಯ ಮೇಲ್ಸೇತುವೆ ಕಾಮಗಾರಿ ಕಳಪೆ; ಹೊಸ ಗುತ್ತಿಗೆ ನೀಡಲಾಗುವುದು
2021 ರ ಡಿಸಂಬರ್ ತಿಂಗಳಿಂದ ಗೊರಗುಂಟೆ ಪಾಳ್ಯ ನಂತರ ಇರುವ ರಾಷ್ಟ್ರೀಯ ಹೆದ್ದಾರಿಯ "ಡಾ ಶಿವಕುಮಾರ ಸ್ವಾಮೀಜಿ ಮೆಲ್ಸೇತುವೆ" (ಪೀಣ್ಯ ಮೇಲ್ಸೇತುವೆ) ಕಂಬಗಳಲ್ಲಿ ಲೋಪ ಇರುವ ಹಿನ್ನಲೆ ಪೂರ್ಣ ಪ್ರಮಾಣದಲ್ಲಿ ಈ ಮೆಲ್ಸೇತುವೆ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ : Kodi Shree : ದೇಶಾದ್ಯಂತ ಜಲಪ್ರಳಯ ಎದುರಾಗಲಿದೆ : ಕೋಡಿ ಶ್ರೀಗಳ ಭವಿಷ್ಯ
ಈ ವಿಷಯದ ಬಗ್ಗೆ ಇಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಪ್ರತಿಕ್ರಿಯೆ ನೀಡಿ, ಪೀಣ್ಯ ಮೇಲ್ಸೇತುವೆ ಕಾಮಗಾರಿ ಕಳಪೆ ಆಗಿದೆ. ಈ ಕಾರಣದಿಂದ ದುರಸ್ತಿ ಕಾರ್ಯವನ್ನ ಹೊಸ ಗುತ್ತಿಗೆಗಾರರಿಗೆ ನೀಡಲಾಗುವುದು ಎಂದು ನವಯುಗ ಸಂಸ್ಥೆ ನಿರ್ಮಿಸಿರುವ ಮೆಲ್ಸೇತುವೆ ಕಾಮಗಾರಿಯ ಕಳಪೆತನವನ್ನ ಬೆಟ್ಟುಮಾಡಿದರು.
ಇದೆ ಸಂದರ್ಭದಲ್ಲಿ ಮಾತಾನ್ನಾಡಿದ ಇವರು, ಎನ್. ಎಚ್ 4 ಅಧಿಕಾರಗಳ ಜೊತೆ ಚರ್ಚೆ ಆಗಿದೆ.ಅದರ ಗುತ್ತಿಗೆದಾರರನ್ನು ಬದಲಿಸಿ,ಬೇರೆಯುವರಿಗೆ ಕೊಡಬೇಕು. ಸದ್ಯ ನವಯುಗ ಸಂಸ್ಥೆ ಮೇಲು ಸೇತುವೆ ಮಾಡಿದೆ,ಅದರಲ್ಲಿ ಹಲವು ಲೋಪಗಳು ಕಂಡು ಬಂದಿವೆ.ಆದ್ದರಿಂದ ಹೊಸ ಗುತ್ತಿಗೆದಾರಿಗೆ ದುರಸ್ತಿ ಕಾಮಗಾರಿಯನ್ನು ನೀಡಲಾಗುವುದು. ಶೀಘ್ರದಲ್ಲೇ ಮೇಲು ಸೇತುವೆ ಪೂರ್ಣ ಪ್ರಮಾಣದ ಸಂಚಾರಕ್ಕೆ ಸಿದ್ದವಾಗಲಿದೆ ಎಂದು ಭರವಸೆ ನೀಡಿದರು.
ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯ ವಿನ್ಯಾಸದಲ್ಲಿ ಲೋಪ
ನಿರ್ಮಾನವಾಗುತ್ತಿರುವ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತಿರುವ ಬಗ್ಗೆ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿದ್ದವು, ಈ ಕುರಿತು ಸಚಿವ ಗಡ್ಕರಿ ಭ್ರಷ್ಟಾಚಾರ ಆಗಿಲ್ಲ ಆದರೆ ಹೆದ್ದಾರಿ ವಿನ್ಯಾಸದಲ್ಲಿ ಲೋಪಗಳು ಆಗಿವೆ ಈ ಕಾರಣದಿಂದ ನೀರು ನಿಂತಿದೆ ಎಂದು ತಿಳಿಸಿದರು.
ಮೈಸೂರು ರಸ್ತೆ ಬಗ್ಗೆ ಈಗಾಗಲೇ ನನ್ನ ಗಮನಕ್ಕೆ ಬಂದಿದೆ, ಮಳೆ ಬಂದು ಸ್ವಲ್ಪ ಸಮಸ್ಯೆ ಆಗಿದೆ.ಡ್ರೈನೇಜ್ ಸಿಸ್ಟಮ್ ಸಮಸ್ಯೆ ಆಗಿದೆ.ಅದನ್ನ ಮುಂದಿನ ನಿರ್ಧಿಷ್ಟ ದಿನಗಳಲ್ಲಿ ಸರಿಪಡಿಸಲಾಗುವುದು.ಇದರಲ್ಲಿ ಯಾವುದೇ ಕರೆಪ್ಷನ್ ಆಗಿಲ್ಲ. ಕ್ವಾಲಿಟಿ ಕಾಮಗಾರಿ ಮಾಡುವ ಗುರಿ ಇದೆ.ಇದರಲ್ಲಿ ಯಾವುದೇ ರಾಜಿ ಇಲ್ಲ.ಕಾಮಗಾರಿ ಬಗ್ಗೆ ಅಧಿಕಾರಿಗಳ ಬಳಿ ವರದಿ ಕೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಕಾಮಗಾರಿ ವಿನ್ಯಾಸ ಬಗ್ಗೆ ವಿವರಿಸಿದ ಸಚಿವ ಗಡ್ಕರಿ, "ಸಹಜವಾಗಿ 5 ವರ್ಷಗಳ ಮಳೆಯ ಪ್ರಮಾಣದಲ್ಲಿ ಸಾರಾಸರಿ ಆಧಾರದ ಮೇಲೆ ಚರಂಡಿಯ ವಿನ್ಯಾಸ ಮಾಡಲಾಗುವುದು ಆದರೆ ಈ ಭಾರಿ 75 ವರ್ಷಗಳ ಮಳೆಯ ಧಾಖಲೆ ಆಗಿದೆ. ಈ ಕಾರಣದಿಂದ ಸಮಸ್ಯೆ ಆಗಿದೆ, ಇದನ್ನ ಹೊರೆತುಪಡಿಸಿ ಕಾಮಗಾರಿ ಬಹುತೇಕ ಮುಗಿದಿದೆ. ಪ್ರಧಾನಿ ಮೋದಿ ಜೊತೆ ಚರ್ಚೆ ಮಾಡಿ ಶೀಘ್ರವೇ ಉದ್ಘಾಟನೆ ಮಾಡಲಿದ್ದೇವೆ" ಎಂದರು.
ಇದನ್ನೂ ಓದಿ : MP Sumalatha : ಎಂಎಲ್ಎಗಳ ವಿರುದ್ದ ಮತ್ತೆ ಕಿಡಿಕಾರಿದ ಸಂಸದೆ ಸುಮಲತಾ!
ಶಿರಾಢಿ ಘಾಟಿಗೂ ಚತುಷ್ಪತ ರಸ್ತೆ; ಟನಲ್ ನಿರ್ಮಾಣ:
ಇನ್ನು ಹಾಸನ-ಮಂಗಳೂರು ಹೆದ್ದಾರಿಯಲ್ಲಿ ಇರುವ ಶಿರಾಢಿ ಘಾಟಿ ಮಳೆಗಾಲದಲ್ಲಿ ಸಂಚಾರಿಸಲು ಯೋಗ್ಯವಾಗುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಗಡ್ಕರಿ , "ಈ ಕಾರಣಕ್ಕೆ ಆದಷ್ಟು ವೇಗವಾಗಿ ನಾಲ್ಕು ಪಥ ಗುಣಮಟ್ಟದ ರಸ್ತೆ ನಿರ್ಮಾನವಾಗಲಿದೆ, ನಂತರ ಘಾಟಿಯಲ್ಲಿ ಸಂಯೋಜನೆ ಕಡಿಮೆ ಮಾಡಲು ಟನಲ್ (ಗುಹೆ) ನಿರ್ಮಾಣ ಮಾಡುವ ಪ್ರಸ್ತಾಪನೆ ಇದೆ", ಎಂದರು.
"ವೆಚ್ಚ ಕಡಿಮೆ ಮಾಡಲು ರೈಲ್ ಇಲಾಖೆ ಸಹವಾಹಗಿತ್ವದಲ್ಲಿ ಟನಲ್ ನಿರ್ಮಾಣ ಮಾಡಲಾಗುವುದು" ಎಂದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.