ಕೊಪ್ಪಳ : ಆಧುನೀಕತೆಗೆ ಹತ್ತಿರವಾಗುತ್ತಿದ್ದಂತೆಯೇ ಮನುಷ್ಯ ಮಾನವೀಯ ಮೌಲಯಗಳನ್ನು ಕಳೆದು ಕೊಳ್ಳುತ್ತಿದ್ದಾನೆ. ಇದಕ್ಕೆ ಅನೇಕ ಉದಾಹರಣೆಗಳು ನಮ್ಮ ಮುಂದೆಯೇ ಇದೆ. ಜಗತ್ತೇ ಅಂಗೈಯಲ್ಲಿದೆ ಎಂದು ನಾವು ಹೇಳಿಕೊಳ್ಳುತ್ತೇವೆ. ಆದರೆ ವಾಸ್ತವವಾಗಿ ನಮ್ಮ ಜಗತ್ತನೇ ನಾವು ಮರೆಯುತ್ತಿದ್ದೇವೆ.  ಸಂಬಂಧಗಳಿಂದ ಬಹು ದೂರ ಹೋಗುತ್ತಿದ್ದೇವೆ. ಅದಕ್ಕೆ ತಾಜಾ  ಉದಾಹರಣೆ ಕೊಪ್ಪಳದಲ್ಲಿ ನಡೆದಿರುವ ಘಟನೆ. 


COMMERCIAL BREAK
SCROLL TO CONTINUE READING

ಇಲ್ಲಿ ಪುತ್ರನೊಬ್ಬ ತನ್ನ ತಾಯಿಯನ್ನು ಅನಾಥವಾಗಿ ಬಿಟ್ಟು ಹೋಗಿದ್ದಾನೆ. ದೇವಸ್ಥಾನಕ್ಕೆಂದು ಕರೆದುಕೊಂಡು ಬಂದಿರುವ ಪುತ್ರ ಆ ತಾಯಿಯನ್ನು ದೇವಸ್ಥಾನದ ಆವರಣದಲ್ಲಿಯೇ ಬಿಟ್ಟು ಹೋಗಿದ್ದಾನೆ. 80 ವರ್ಷದ  ವೃದ್ದೆ  ತನ್ನನ್ನು ಖಾಸೀಂಬಿ ಎಂದು ಹೇಳಿಕೊಳ್ಳುತ್ತಿದ್ದಾರೆ.  


ಇದನ್ನೂ ಓದಿ : Today Vegetable Price : ಹೇಗಿದೆ ಗೊತ್ತಾ ಇಂದಿನ ತರಕಾರಿ ಬೆಲೆ?


ಇವರು ಎರಡು ದಿನಗಳ ಹಿಂದೆ ತನ್ನ ಪುತ್ರನೊಂದಿಗೆ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನಕ್ಕೆ ಬಂದಿದ್ದರು. ಆದರೆ ಜೊತೆಯಲ್ಲಿ ಕರೆದುಕೊಂಡು ಬಂದಿರುವ ಮಗ ನಂತರ ತಾಯಿಯನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ. ಹೀಗೆ ಬಿಟ್ಟು ಹೋಗುವಾಗ ತಾಯಿಯ ಕೈ ಯಲ್ಲಿ ಒಂದು ಮೊಬೈಲ್ ಕೊಟ್ಟು ಹೋಗಿದ್ದಾನೆ. ಆದರೆ ಯಾರಿಗಾದರೂ ಕರೆ ಮಾಡೋಣ ಎಂದರೆ ಆ ಮೊಬೈಲ್ ನಲ್ಲಿ ಸಿಮ್ ಕಾರ್ಡ್ ಇಲ್ಲ.


ಮಗ ದೇವಸ್ಥಾನದ ಆವರಣದಲ್ಲಿ ಬಿಟ್ಟು ಹೋದಾಗಿನಿಂದ ಅಂದರೆ ಕಳೆದ ಎರಡು ದಿನಗಳಿಂದ ಆ ಹಿರಿ ಜೀವ ಮಾರ್ಗದ ಬದಿಯಲ್ಲಿಯೇ ಕಾಲ ಕಳೆದಿದೆ. ಮಗ ಈಗ ಬರುತ್ತಾನೆ , ಬಂದೇ ಬರುತ್ತಾನೆ ಎಂದು ಎದುರು ನೋಡುತ್ತಿದೆ. ಇದೀಗ ಆ ವೃದ್ದೆಗೆ ಹಿರಿಯ ನಾಗರೀಕರ ಇಲಾಖೆ ಅಧಿಕಾರಿಗಳು ರಕ್ಷಣೆ ನೀಡಿದ್ದಾರೆ. 


ಇದನ್ನೂ ಓದಿ : ಅರಗ ಮನೆ ಮುತ್ತಿಗೆಯಿಂದ ಎಚ್ಚೆತ್ತ ಪೊಲೀಸರು , ಅಮಿತ್ ಷಾ ಗೆ ಬೆಂಗಳೂರಿನಲ್ಲಿ ಭಾರೀ ಭದ್ರತೆ


 ಹೊತ್ತು ಹೆತ್ತು ಆಡಿಸಿ ಬೆಳೆಸಿದ ಮಗನಿಗೆ ಇಳಿ  ವಯಸ್ಸಿನಲ್ಲಿ ತಾಯಿಗೆ ಎರಡು ಹೊತ್ತು ಊಟ ಹಾಕುವುದು ಕಷ್ಟವಾದರೆ ಹೇಗೆ? ಈ  ದೃಶ್ಯವನ್ನು ನೋಡಿದಾಗ ಎತ್ತ ಸಾಗುತ್ತಿದೆ ನಮ್ಮ ಸಮಾಜ ಎಂದು ನಮ್ಮನ್ನೇ ನಾವು ಪ್ರಶ್ನೆ ಹಾಕಿಕೊಳ್ಳಬೇಕಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.