ಬೆಂಗಳೂರು : ಜಂಟಿ ಅಧಿವೇಶನದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಚಿರತೆ ಹಾವಳಿ ಬಗ್ಗೆ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡ ಶಾಸಕ ರವೀಂದ್ರ ಶ್ರೀಕಂಠಯ್ಯ, ಮಂಡ್ಯ ಜಿಲ್ಲೆಗೆ ಉಸ್ತುವಾರಿ ಮಂತ್ರಿ ಇಲ್ಲ, ಎಂದು ಆಕ್ರೋಶ ವ್ಯಕ್ತಪಡಿಸಿದಾಗ, ಸ್ಪೀಕರ್ ಕಾಗೇರಿ ಉಸ್ತುವಾರಿ ನೇಮಕ ಮಾಡಿದರೆ ಚಿರತೆ ಹಿಡೀತಾರ,ಎಂದು ಪ್ರಶ್ನಿಸಿದರು.


COMMERCIAL BREAK
SCROLL TO CONTINUE READING

ಸರ್ಕಾರ ಚಿರತೆ ಹಾವಳಿ ಕಂಟ್ರೋಲ್ ಮಾಡೋದಾಗಿ ಹೇಳಿದ್ದಾರೆ.ಆದ್ರೆ ಮಂಡ್ಯ ಜಿಲ್ಲೆಯೊಂದರಲ್ಲೇ 410 ಪ್ರಕರಣ ದಾಖಲಾಗಿದೆ.ಹಳ್ಳಿಯಲ್ಲಿ ಟೈಮಿಂಗ್ಸ್ ಪ್ರಕಾರ ವಿದ್ಯುತ್ ಕೊಡ್ತಾರೆ.ರೈತರು ಮೋಟರ್ ಆನ್ ಮಾಡಲು ರಾತ್ರಿ ಹೋದಾಗ ಚಿರತೆ ದಾಳಿ ಮಾಡ್ತಿವೆ. ಜಾನುವಾರುಗಳಿಗೆ ಅನಾಹುತ ಮಾಡ್ತಿವೆ.410 ಪ್ರಕರಣ ದಾಖಲಾದ್ರೂ ಕ್ರಮಗಳು ಕೈಗೊಳ್ಳುತ್ತಿಲ್ಲ, ಹಳ್ಳಿಗಳಲ್ಲಿ ಚಿರತೆ ಕಾಣ್ತು ಅಂತ ರೈತರು ದೂರು ಕೊಡ್ತಿದ್ದಾರೆ.ಅಭಯಾರಣ್ಯ ಮಾಡಿ, ಚಿರತೆಗಳನ್ನ ಸಂರಕ್ಷಿಸಬೇಕು.ಮಕ್ಕಳನ್ನ ರಸ್ತೆಗೆ ಬಿಡದ ಪರಿಸ್ಥಿತಿ ಇದೆ, ಎಂದು ಸದನದಲ್ಲಿ ಪ್ರಸ್ತಾಪಿಸಿದರು.


ಇದನ್ನೂ ಓದಿ: ವಿದ್ಯುತ್, ಹಣ, ಅಕ್ಕಿ ಬಳಿಕ ʼಟಿವಿ ಬಹುಮಾನʼ ಘೋಷಿಸಿದ ಡಿ‌‌.ಕೆ.ಶಿವಕುಮಾರ್..!


ಇದಕ್ಕೆ ಸಚಿವ ಮಾಧುಸ್ವಾಮಿ ಉತ್ತರ, ನೀಡಿ ಚಿರತೆ ವೇಗವಾಗಿ ಓಡುವ ಪ್ರಾಣಿ.ಅವರಿಗಿಂತ ನಮ್ಮ ತುಮಕೂರು ಜಿಲ್ಲೆಯಲ್ಲಿ ಹಾವಳಿ ಜಾಸ್ತಿ.ಮರಿ ಹಾಕಿದ್ರೆ ಅಟಾಕ್ ಮಾಡುತ್ತೆ.ಚಿರತೆಗೆ ಟಚ್ ಮಾಡಲು ಹೋದ್ರೆ ಅಟಾಕ್ ಮಾಡ್ತಿದೆ.ಸಾಮಾನ್ಯವಾಗಿ ಹಳ್ಳಿಗಳ ಪಕ್ಕದಲ್ಲೇ ಚಿರತೆ ವಾಸ ಮಾಡೋದು.ಅದಕ್ಕಾಗಿ ಈ ಬಾರಿಯ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದ್ದೇವೆ.63 ಜನರ ಟಾಸ್ಕ್ ಫೋರ್ಸ್ ಮಾಡಿದ್ದೇವೆ.ದಾಳಿಯಾದವರಿಗೆ ಡಬಲ್ ಪರಿಹಾರ ನೀಡಲಾಗ್ತಿದೆ.ಅದನ್ನ ಸಾಯಿಸಲು ಸಾಧ್ಯವಿಲ್ಲ, ಕಾನೂನಿನ ಕೆಳಗೆ ಶೂಟ್ ಮಾಡೋಕೆ ಸಾಧ್ಯವಿಲ್ಲ.ಹಿಡಿದು ಅಭಯಾರಣ್ಯ ಮಾಡಿ ಅಲ್ಲಿಗೆ ಬಿಡ್ತೀವಿ ಎಂದ ಸಚಿವ ಮಾಧುಸ್ವಾಮಿ, ಎಂದರು.


ನಂತರ ರವೀಂದ್ರ ಶ್ರೀಕಂಠಯ್ಯಉಪಪ್ರಶ್ನೆ ಮಾಡಿ ಉಪಪ್ರಶ್ನೆ ಮಾಡಿ ವಾಹನಗಳಿಗೆ ಸಿಕ್ಕಿ ಚಿರತೆ ಸಾಯುತ್ತಿವೆ, ಬೈಕಿಗೆ ಚಿರತೆ ಹೊಡೆದು ಸತ್ತಿದೆ ಅಂತ ಹೇಳೋಕು ಹೆದರುವಂತಾಗಿದೆ.ಮಂಡ್ಯ ಉಸ್ತುವಾರಿ ಸಚಿವರೂ ಇಲ್ಲ.ನಾವ್ಯಾರಿಗೆ ಹೇಳಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಲ್ರಿ ಉಸ್ತುವಾರಿ ಸಚಿವರನ್ನ ಹಾಕಿದ್ರೆ, ಚಿರತೆ ಹಿಡಿಯೋಕೆ ಹೋಗ್ತಾರಾ ಎಂದರು. ನಂತರ ರವೀಂದ್ರ ಶ್ರೀಕಂಠಯ್ಯ ಮಾತಾನ್ನಾಡಿ, ದಯಮಾಡಿ ಬೆಳಗಿನ ಜಾವ ವಿದ್ಯುತ್ ನೀಡಿ, ಎಂದು ಮನವಿ ಮಾಡಿದರು, ಇದಕ್ಕೆ ಸ್ಪೀಕರ್ ಬೆಳಗಿನ ಜಾವ ವಿದ್ಯುತ್ ಪೂರೈಸಿ ಎಂದು ಸ್ಪೀಕರ್ ಸಚಿವ ಸುನಿಲ್ ಕುಮಾರ್‌ಗೆ ಸೂಚಿಸಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.