ಬೆಂಗಳೂರು: ಆಪರೇಶನ್ ಆಡಿಯೋ ಮೇಲಿನ ಚರ್ಚೆ ಸಂದರ್ಭದಲ್ಲಿ "ಆಡಿಯೋ ಮೇಲಿನ ಚರ್ಚೆ ಅತ್ಯಾಚಾರಕ್ಕೊಳಗಾಗಿರುವ ಸಂತ್ರಸ್ತೆಯಂತಾಗಿದೆ ನನ್ನ ಕಥೆ" ಎಂಬ ಹೋಲಿಕೆಗೆ ಮಹಿಳಾ ಶಾಸಕಿಯರು ಸೇರಿ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಧಾನಸಭಾ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಬುಧವಾರ ಅಧಿವೇಶನದಲ್ಲಿ ಕ್ಷಮೆ ಯಾಚಿಸಿದ್ದಾರೆ.


COMMERCIAL BREAK
SCROLL TO CONTINUE READING

ಸ್ಪೀಕರ್ ಹೇಳಿಕೆಯಿಂದ ಮಹಿಳೆಯರ ಭಾವನೆಗ ಧಕ್ಕೆಯಾಗಿದೆ ಎಂದು ಶಾಸಕಿಯರಾದ ಅನಿತಾ ಕುಮಾರಸ್ವಾಮಿ, ಅಂಜಲಿ ನಿಂಬಾಳ್ಕರ್, ಲಕ್ಷ್ಮೀ ಹೆಬ್ಬಾಳ್ಕರ್, ರೂಪಕಲಾ, ಖನ್ನಿಸಾ, ಫಾತೀಮಾ, ಸೌಮ್ಯಾ ರೆಡ್ಡಿ, ವಿನಿಶೋ ನಿರೋ ಅವರು ರಮೇಶ್ ಕುಮಾರ್ ಕಚೇರಿಗೆ ತೆರಳಿ ಮನವಿ ಪತ್ರ ನೀಡಿದ್ದರು.


ಬುಧವಾರ ಮಧ್ಯಾಹ್ನ ಭೋಜನಾ ನಂತರದ ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ರಮೇಶ್‌ ಕುಮಾರ್‌, ಯಾವ ಹೆಣ್ಣು ಮಗುವಿಗೂ ನೋವುಂಟು ಮಾಡುವ ಉದ್ದೇಶದಿಂದ ನಾನು ಈ ಹೇಳಿಕೆ ನೀಡಿರಲಿಲ್ಲ. ಹೆಣ್ಣು ಮಕ್ಕಳಿಗೆ ಅಪಮಾನ ಮಾಡುವ ಉದ್ದೇಶ ನನ್ನದಾಗಿರಲಿಲ್ಲ. ಒಂದೊಮ್ಮೆ ಯಾರಾದರೂ ಬೇಸರಿಸಿಕೊಂಡರೆ ನಾನು ಕ್ಷಮೆ ಕೋರುತ್ತೇನೆ. ನಾನು ಸದನದಲ್ಲಿರುವ ಹೆಣ್ಣು ಮಕ್ಕಳನ್ನು ಅಕ್ಕ, ತಂಗಿಯರಂತೆ ಕಾಣುತ್ತಿದ್ದೇನೆ ಎಂದು ಹೇಳಿ ಸ್ಪೀಕರ್‌ ವಿವಾದಕ್ಕೆ ತೆರೆ ಎಳೆದರು.