ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚೀಟಿಯಲ್ಲಿ ಬರೆದುಕೊಟ್ಟದ್ದನ್ನು  ಓದೋರು.. ಹುಷಾರಾಗಿ ಮಾತನಾಡಲಿ. ನನ್ನ ತಾಳ್ಮೆಗೂ ಮಿತಿ ಇದೆ, ಸ್ವೇಚ್ಚಾಚಾರವಾಗಿ ಮಾತನಾಡಿದರೆ ಸಹಿಸಲ್ಲ ಎಂದು ಹೇಳುವ ಮೂಲಕ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ರಾಹುಲ್ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ನಗರದ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಲ್ಲಿ ಚುನಾವಣಾ ಪ್ರಚಾರ ಮಾಡ್ತಾ ಇದಾರೆ, ಹಾಸನದಲ್ಲಿ ಜಿಡಿಎಸ್ ಅನ್ನು 'ಬಿ' ಟೀಂ ಎಂದಿದ್ದಾರೆ. ನಿನ್ನೆ ಮಳವಳ್ಳಿಯಲ್ಲಿ ಜನತಾದಳ ಸಂಘ ಪರಿವಾರ ಎಂದಿದ್ದಾರೆ. ನನ್ನ ತಾಳ್ಮೆಗೂ ಮಿತಿ ಇದೆ, ಸ್ವೇಚ್ಚಾಚಾರವಾಗಿ ಮಾತನಾಡಿದರೆ ಸಹಿಸಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.


ಬಿಜೆಪಿಯನ್ನು ಯಾಕೆ ಬೆಂಬಲಿಸುತ್ತಿದ್ದೀರಿ ಎಂಬ ರಾಹುಲ್ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೆಚ್ದಿಡಿ, ಇನ್ನೂ ಬೆಳೆಯಬೇಕಾದ ಯುವ ನಾಯಕ ರಾಹುಲ್, ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ಇರೋದು ಯಾವ ಕಾಂಗ್ರೆಸ್ ಎಂದು ಅವರು ತಿಳಿದುಕೊಳ್ಳಬೇಕು. ಇಂದಿರಾಗಾಂಧಿ ಕಾಂಗ್ರೆಸ್,  ಸೋನಿಯಾ ಗಾಂಧಿ ಕಾಂಗ್ರೆಸ್ ಅಥವಾ ಸಿದ್ದರಾಮಯ್ಯ ಕಾಂಗ್ರೆಸ್ ಅನ್ನೋದು ತಿಳಿಯಬೇಕು. ರಾಹುಲ್ ಅವರಿಗೆ ಪ್ರಬುದ್ಧತೆ ಇದ್ದರೆ ಇದನ್ನು ಅರಿಯಬೇಕು. ನಾವು ರಾಹುಲ್ ಗಾಂಧಿ ಅಥವಾ ಮೋದಿಯವರ ಆದೇಶ ಪಾಲನೆ ಮಾಡಬೇಕಾಗಿಲ್ಲ ಇವರ ಮನೆ ಬಾಗಿಲಿಗೆ ನಾವು ಹೋಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.


ನಾನು ಬಿಜೆಪಿ ಪಕ್ಕ ನಿಂತು ಕೆಮ್ಮಿದ್ರೆ ಕಾಂಗ್ರೆಸ್ ಧೂಳಿಪಟ ವಾಗುತ್ತೆ ಎಂಬ ಹೇಳಿಕೆಗೆ ದೇವೇಗೌಡರ ಸ್ಪಷ್ಟನೆ...
ನಾವೂ ಯಾರ ಜೊತೆ ಹೊಗುವ ಪ್ರಶ್ನೆಯೆ ಇಲ್ಲ. ನಮ್ಮ ಸ್ವಂತ ಬಲದ ಮೇಲೆ ಹೋರಾಟ ಮಾಡ್ತೀವಿ. ಬಹುಮತ ಬರದಿದ್ರೆ ವಿರೋಧ ಪಕ್ಷ ಸ್ಥಾನದಲ್ಲಿ ಕೂರ್ತಿವಿ ಎಂದ ದೇವೇಗೌಡರು, ನಾನು ಬಿಜೆಪಿ ಪಕ್ಕ ನಿಂತು ಕೆಮ್ಮಿದ್ರೆ ಕಾಂಗ್ರೆಸ್ ಧೂಳಿಪಟ ವಾಗುತ್ತೆ ಎಂಬ ಹೇಳಿಕೆಯನ್ನು ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.