ಧಾರವಾಡ : ಹುಬ್ಬಳ್ಳಿ ಚೆನ್ನಮ್ಮ ಮೈದಾನದಲ್ಲಿ ಟಿಪ್ಪು ಜಯಂತಿ ಮಾಡಲು ಅವಕಾಶ ಕೊಟ್ಟಿದ್ದು ಅಕ್ಷಮ್ಯ ಅಪರಾಧ. ಬಿಜೆಪಿ ಆಡಳಿತದಲ್ಲಿ ಇರುವ‌ ಪಾಲಿಕೆ ದ್ರೋಹ ಮಾಡಿದೆ. ಅತ್ಯಂತ ನೀಚ ಕೆಲಸ ಮಾಡಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ನಗರದಲ್ಲಿ ಸುದ್ದಿಗಾರರ ಜೊತೆ ಪ್ರಮೋದ್ ಮುತಾಲಿಕ ಅವರು, ಇದೇ ಬಿಜೆಪಿಯವರು ಟಿಪ್ಪು ಜಯಂತಿ ಬ್ಯಾನ್ ಮಾಡಿದ್ರು, ಬ್ಯಾನ್ ಮಾಡಿದವರೇ ಅನುಮತಿ ಕೊಡ್ತಾರೆ ಎಂದರೆ ಇವರ ನಿಲುವು ಹೇಗಿದೆ? ಇವರಿಗೆ ತತ್ವ ಬೇಕಾಗಿಲ್ಲ, ಅಧಿಕಾರ ಬೇಕು, ಒಲೈಕೆ ಬೇಕು. ಇವರ ನಿಲುವು ಬಟಾಬಯಲಾಗಿದೆ, ಎಂಐಎಂ ದೇಶದ್ರೋಹಿ ಪಕ್ಷ. ಇಂತ ಪಕ್ಷಕ್ಕೆ ಮನ್ನಣೆ ಕೊಡ್ತಿರಿ ಎಂದರೆ ಯಾವ ಮಟ್ಟಕ್ಕೆ ಬಂದಿದ್ದರಿ, ಮತಾಂಧ, ದೇವಸ್ಥಾನ ದ್ವಂಸ ಮಾಡಿದ ಟಿಪ್ಪು ಸುಲ್ತಾನ್ ಕನ್ನಡ ದ್ರೋಹಿ. ಕ್ಷಮೆ ಮಾಡಲು ಸಾಧ್ಯವಿಲ್ಲ. ನೀವು ಅನುಮತಿ ಕೊಟ್ಟು ತಪ್ಪು ಮಾಡಿದ್ದಿರಿ, ಕನ್ನಡಿಗರು ತಮಗೆ ಎಂದು ಕ್ಷಮೆ ಮಾಡಲ್ಲ. ಹಿಂದೂಗಳಿಗೆ ದ್ರೋಹ ಮಾಡಿದ್ದಿರಿ, ಇದನ್ನ ರದ್ದು ಮಾಡಿ ವಾಪಸ್ ತಗೊಬೇಕು. ಇದು ಸರಿಯಲ್ಲ, ಇದನ್ನ ನಾನು ಖಂಡಿಸುತ್ತೆನೆ. ನಾಳೆ ಈ ಬಗ್ಗೆ ನಾವು ಪ್ರತಿಭಟನೆ ಮಾಡ್ತೆವೆ ಎಡನು ಹೇಳಿದ್ದಾರೆ. 


ಇದನ್ನೂ ಓದಿ : ವಿಧಾನಸಭೆಯಲ್ಲಿ ಹೊಡೆದಾಟ ಆಗತ್ತೆ, ಮಂತ್ರಿಗಳು, ಮುಖ್ಯಮಂತ್ರಿಗೂ ಹೊಡಿತಾರೆ: ವಾಟಾಳ್ ನಾಗರಾಜ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.