ಬೆಂಗಳೂರು: ರಾಯಚೂರಿನಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ವೈಟಿಪಿಎಸ್ ಸಿಬ್ಬಂದಿಗಳ ವಿರುದ್ಧ ಕಿಡಿ ಕಾರಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ವರ್ತನೆಯನ್ನು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ತೀವ್ರವಾಗಿ ಖಂಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, "ಜನ ನಿಮಗೆ ಮತ ಹಾಕಿಲ್ಲ, ಮೋದಿಗೆ ಹಾಕಿದ್ದಾರೆ ಅನ್ನುವ ಸತ್ಯ ಒಪ್ಪಿಕೊಂಡಿದ್ದಕ್ಕೆ ಅಭಿನಂದನೆಗಳು.  ಒಲ್ಲದ ಮುತ್ತೈದೆಯಂತೆ ಖುರ್ಚಿ ಮೇಲೆ ಕೂತು ಸಮಸ್ಯೆಗೆ ಪರಿಹಾರ ಕೇಳಿದರೆ ಲಾಠಿ ಚಾರ್ಜ್ ಮಾಡಿಸಬೇಕಾ ಅಂತ ಕೇಳುವ ನೀವೇ ಈ ರಾಜ್ಯದ ದೊಡ್ಡ ಸಮಸ್ಯೆ. ರಾಜೀನಾಮೆ ಕೊಟ್ಟು ಮನೆಗೆ ಹೋಗಿ, ರಾಜ್ಯದ ಜನತೆಯ ಆಶೀರ್ವಾದ ಬಿಜೆಪಿಗಿದೆ" ಎಂದು ಟ್ವೀಟ್ ಮಾಡಿದ್ದಾರೆ.


[[{"fid":"178260","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕರೇಗುಡ್ಡಕ್ಕೆ ಬುಧವಾರ ಗ್ರಾಮವಾಸ್ತವ್ಯಕ್ಕಾಗಿ ಸಿಎಂ ತೆರಳುತ್ತಿದ್ದ ಸಾರಿಗೆ ಬಸ್ಸನ್ನು ಯರಮರಸ್ ಬಳಿ ಮುತ್ತಿಗೆ ಹಾಕಿದ ವೈಟಿಪಿಎಸ್‌ ಕಾರ್ಮಿಕರು, ಬಾಕಿ ವೇತನ ಪಾವತಿ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕೋಪಗೊಂಡ ಸಿಎಂ, ಮೋದಿಗೆ ವೋಟ್ ಹಾಕ್ತೀರ. ಕೆಲ್ಸಕ್ಕೆ ನಾನ್ ಬೇಕಾ? ಇದು ಕೇಳುವ ರೀತಿಯೇ? ನಿಮ್ಮ ಮೇಲೆ ಲಾಠಿ ಚಾರ್ಜ್ ಮಾಡಬೇಕಾ? ಎಂದು ಕಿಡಿ ಕಾರಿದ್ದರು. ಸಿಎಂ ಕುಮಾರಸ್ವಾಮಿ ಅವರ ಈ ಹೇಳಿಕೆ ರಾಜ್ಯಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.