ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಶ್ರೀ ಶಿವಕುಮಾರ ಸ್ವಾಮೀಜಿ ದಾಖಲು
ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿ ಶಿವ ಪೂಜೆಗಾಗಿ ಪ್ರತ್ಯೇಕ ಕೊಠಡಿ ವ್ಯವಸ್ಥೆ.
ಬೆಂಗಳೂರು: ಶೀತ, ಜಾಂಡಿಸ್ ಜ್ವರ ಮತ್ತು ಅಜೀರ್ಣದಿಂದ ಬಳಲುತ್ತಿರುವ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಡಾ. ರವೀಂದ್ರ ಮತ್ತು ತಂಡದಿಂದ ಚಿಕಿತ್ಸೆ ನಡೆಯುತ್ತಿದೆ. ಇಂದು ಬೆಳಿಗ್ಗೆ ಪೂಜೆ ಮಾಡದೇ ಇರುವ ಕಾರಣ ಆಸ್ಪತ್ರೆಯಲ್ಲೇ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ.
ಜಾಂಡೀಸ್ ಜ್ವರ, ಶೀತ ಮತ್ತು ಅಜೀರ್ಣ ಸಮಸ್ಯೆಯಿಂದ ಅನಾರೋಗ್ಯಕ್ಕೀಡಾಗಿರುವ ಶ್ರೀ ಶಿವಕುಮಾರ ಸ್ವಾಮಿಜಿ ಅವರನ್ನು ಇಂದು ಬೆಳಿಗ್ಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿ ಡಾ. ರವೀಂದ್ರ ನೇತೃತ್ವದ 8 ಜನರ ವೈದ್ಯರ ತಂಡ ಶ್ರೀ ಗಳಿಗೆ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡುತ್ತಿದೆ.
ಶ್ರೀಗಳು ಇಂದು ಬೆಳಿಗ್ಗೆ ಪೂಜೆ ಮಾಡದೆ ಇರುವ ಕಾರಣ ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲೇ ಶಿವ ಪೂಜೆಗಾಗಿ ಪ್ರತ್ಯೇಕ ಕೊಠಡಿಯನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀಗಳ ಶಿಷ್ಯರು ಮಾಹಿತಿ ನೀಡಿದ್ದಾರೆ.
ಶ್ರೀ ಗಳಿಗೆ ಶ್ವಾಸಕೋಶದಲ್ಲಿ ಇನ್ಫೆಕ್ಷನ್ ಆಗಿರುವ ಕಾರಣ, 24 ಗಂಟೆಗಳ ಕಾಲ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುವುದು. ಪಿತ್ತಕೋಶದಲ್ಲಿ ಕಲ್ಲಿದ್ದು, ಈಗಾಗಲೇ ಇರುವ ಸ್ಟಂಟ್ನಿಂದ ಇನ್ಫೆಕ್ಷನ್ ಆಗಿರುವುದರಿಂದ ಅದನ್ನು ತೆಗೆದು ಬೇರೆ ಸ್ಟಂಟ್ ಹಾಕಬೇಕು ಎಂದು ಡಾ. ರವೀಂದ್ರ ತಿಳಿಸಿದ್ದಾರೆ.