ಕಲಬುರಗಿ : ಮಠಾಧೀಶರು ಧರ್ಮ ಪ್ರಚಾರ ಮಾಡಬೇಕೆ ಹೊರೆತು ಹಲಾಲ್ ಕುರಿತು ಮಾತನಾಡಬಾರದು ಎಂದು ಶ್ರೀರಾಮಸೇನೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದೆ. 


COMMERCIAL BREAK
SCROLL TO CONTINUE READING

ನಗರದಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ(HD Kumaraswamy) ಮಾತನಾಡಿ, ಕುಮಾರಸ್ವಾಮಿಯವರೇ ನಿಮ್ಮಿಂದ ಮಠಾಧೀಶರು, ಸ್ವಾಮೀಜಿಗಳು ಬುದ್ದಿ ಹೇಳಿಸಿಕೊಳ್ಳುವ ಅವಶ್ಯಕತೆಯಿಲ್ಲ. ಮಠಾಧೀಶರು ಮಾಡುತ್ತಿರುವ ಕಾರ್ಯ ಹಿಂದೂ ಧರ್ಮದ ಒಂದು ಭಾಗವಾಗಿದೆ. ಮುಸಲ್ಮಾನರಿಂದ ಹಿಂದೂ ಧರ್ಮಕ್ಕೆ ಮತ್ತು ಸಂವಿಧಾನಕ್ಕೆ ಅಪಚಾರವಾಗುತ್ತಿದೆ. ಹಲಾಲ್ ಸರ್ಟಿಫಿಕೇಟ್ ಹಣದಿಂದ ಇಡೀ ಹಿಂದೂ ಧರ್ಮಕ್ಕೆ ಗಂಡಾತರ ಕಾದಿದೆ. ಹೀಗಿದ್ದಾಗ ನಾವು ಕಣ್ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ದಲಿತರನ್ನ ಸವರ್ಣಿಯರ ಮೇಲೆ ಎತ್ತಿಕಟ್ಟುವ ನೀವು-ಮೌಲ್ವಿಗಳ ಬಗ್ಗೆ ಯಾಕೆ ಮಾತನಾಡಲ್ಲ? ಹಿಜಾಬ್ ಹೈಕೋರ್ಟ್‌ನ ತೀರ್ಪಿನ ವಿರುದ್ಧ ವಿದ್ಯಾರ್ಥಿಗಳು ಹೋರಾಟ ಮಾಡುತ್ತಿದ್ದಾರೆ. ಕಾನೂನನ್ನ ಗೌರವಿಸಬೇಕೆಂದು ನೀವು ಮೌಲ್ವಿಗಳಿಗೆ-ಧರ್ಮ ಗುರುಗಳಿಗೆ ಬುದ್ದಿವಾದ ಹೇಳಬಹುದಲ್ವೆ? ಎಂದು ಕುಮಾರಸ್ವಾಮಿಯನ್ನು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ : ಹರ್ಷ ಕೊಲೆ ಪ್ರಕರಣ ; ಸಚಿವ ಈಶ್ವರಪ್ಪ ಹೇಳಿಕೆ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲದಲ್ಲಿ ದೂರು ದಾಖಲು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಹಾಗೂ YouTube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.