ಬಳ್ಳಾರಿ:  ಶ್ರೀಶೈಲ ಮಹಾಕ್ಷೇತ್ರದಲ್ಲಿ ಮಾ.01 ರಿಂದ 11 ರ ವರೆಗೆ ಮಹಾಶಿವರಾತ್ರಿ ಬ್ರಹೋತ್ಸವ ಅಂಗವಾಗಿ ಸ್ವಾಮಿಯ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಉಪಕಲೆಕ್ಟರ್ ಡಿ.ಪೆದ್ದಿರಾಜು ಅವರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಬ್ರಹೋತ್ಸವದಲ್ಲಿ ಭಕ್ತರ ದಟ್ಟಣೆಯಿಂದ ಮಾ.01 ರಿಂದ 11 ರ ವರೆಗೆ ಶ್ರೀ ಸ್ವಾಮಿಯವರ ಅಲಂಕಾರ ದರ್ಶನ ಮಾತ್ರ ಕಲ್ಪಿಸಲಾಗುತ್ತದೆ. ಭಕ್ತರಿಗಾಗಿ ಉಚಿತ ದರ್ಶನವಲ್ಲದೆ ಶೀಘ್ರ ದರ್ಶನ ಮತ್ತು ಅತಿ ಶೀಘ್ರ ದರ್ಶನಗಳಿಗೆ ಕೂಡ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.


ಇದನ್ನೂ ಓದಿ: ವಿದ್ಯಾರ್ಥಿ ವೇತನಕ್ಕೆ ಆದಾಯ ಪ್ರಮಾಣ ಪತ್ರ ಸಲ್ಲಿಸಲು ಫೆ.29 ರವರೆಗೆ ಅವಕಾಶ


ಶೀಘ್ರ ದರ್ಶನಕ್ಕಾಗಿ ರೂ.200 ಮತ್ತು ಅತಿ ಶೀಘ್ರ ದರ್ಶನಕ್ಕಾಗಿ ರೂ.500 ಗಳನ್ನು ಪಾವತಿಸಬೇಕು.ಈ ಟಿಕೆಟ್‍ಗಳನ್ನು ಆನ್‍ಲೈನ್ ವಿಧಾನದಲ್ಲಿ ದೇವಸ್ಥಾನದ ವೆಬ್‍ಸೈಟ್ www.srisailadevasthanam.org ಮೂಲಕ ಮುಂಚಿತವಾಗಿ ಹೊಂದಬಹುದು. ಅಲ್ಲದೆ ಈ ಟಿಕೆಟ್‍ಗಳನ್ನು ದೇವಸ್ಥಾನದ ಕರೆಂಟ್ ಬುಕಿಂಗ್ ಮೂಲಕ ಕೂಡ ಕಾಲಕಾಲಕ್ಕೆ, ತಕ್ಷಣವೇ ಹೊಂದುವ ಅವಕಾಶ ಇದೆ.


ಬ್ರಹೋತ್ಸವಗಳ ಪ್ರಾರಂಭದಲ್ಲಿ ಐದು ದಿವಸಗಳು ಮಾ.01 ರಿಂದ 05 ರ ವರೆಗೆ ಜ್ಯೋತಿರ್ಮುಡಿ (ಇರುಮುಡಿ) ಇರುವ ಶಿವದೀಕ್ಷಾ ಭಕ್ತರಿಗೆ ಹಂತ ಹಂತವಾಗಿ ನಿರ್ದಿಷ್ಟ ಸಮಯಗಳಲ್ಲಿ ಮಾತ್ರವೇ ಸ್ವಾಮಿಯವರ ಉಚಿತ ಸ್ಪರ್ಶ ದರ್ಶನ ಕಲ್ಪಿಸಲಾಗುತ್ತದೆ.


ಇದನ್ನೂ ಓದಿ: ಮುನಿರಾಬಾದ್ ರೈಲು ನಿಲ್ದಾಣದ ಪುನರಾಭಿವೃದ್ಧಿ, ಹುಲಿಗಿ ಮೇಲ್ಸೇತುವೆ ನಿರ್ಮಾಣಕ್ಕೆ ಪ್ರಧಾನಮಂತ್ರಿಗಳಿಂದ ಶಂಕುಸ್ಥಾಪನೆ


ಮಾ.05 ರಂದು ರಾತ್ರಿ 7:30 ರಿಂದ 11.03.2024 ರಾತ್ರಿಯವರೆಗೆ ಭಕ್ತರೆಲ್ಲರಿಗೂ ಶ್ರೀ ಸ್ವಾಮಿಯವರ ಅಲಂಕಾರ ದರ್ಶನಕ್ಕೆ ಮಾತ್ರವೇ ಅವಕಾಶ ನೀಡಲಾಗಿದೆ ಮತ್ತು ಮಾ.01 ರಿಂದ 11 ರ ವರೆಗೆ ಎಲ್ಲಾ ಅರ್ಜಿತ (ಸಂಚಿತ) ಸೇವೆಗಳು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ