SSLC Exam Time Table: 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ. ಈ ವರ್ಷ ಎಸ್‌ಎಸ್‌ಎಲ್‌ಸಿವಾರ್ಷಿಕ ಪರೀಕ್ಷೆಗಳನ್ನು 2023ರ ಮಾರ್ಚ್ 31ರಿಂದ ಎಪ್ರಿಲ್ 15ರವರೆಗೂ ನಡೆಸಲು ತೀರ್ಮಾನಿಸಲಾಗಿದೆ. 


COMMERCIAL BREAK
SCROLL TO CONTINUE READING

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫೈನಲ್ ಎಕ್ಸಾಂ ಟೈಮ್ ಟೇಬಲ್ 2023 pdf ಡೌನ್‌ಲೋಡ್ ಅಧಿಕೃತ ವೆಬ್‌ಸೈಟ್, sslc.karnataka.gov.in ನಲ್ಲಿ ಲಭ್ಯವಿದೆ. KSEEB ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯು ಪರೀಕ್ಷೆಯ ದಿನಾಂಕ, ಸಮಯ ಮತ್ತು ಪರೀಕ್ಷೆಗಳಿಗೆ ಸೂಚನೆಗಳಂತಹ ವಿವರಗಳನ್ನು ಒಳಗೊಂಡಿದೆ.


ಇದನ್ನೂ ಓದಿ- CM Bommai on Controversial graffiti: CFI ಸೇರುವಂತೆ ಪೋಸ್ಟರ್ ಹಾಕಿದವರ ವಿರುದ್ಧ ಸೂಕ್ತ ಕ್ರಮ: ಸಿಎಂ ಬೊಮ್ಮಾಯಿ


ಮಾರ್ಚ್/ಎಪ್ರಿಲ್- 2023 ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆಯ ವೇಳಾಪಟ್ಟಿ ಈ ಕೆಳಕಂಡಂತಿದೆ:
ದಿನಾಂಕ ವಾರ ವಿಷಯ ಸಮಯ 
31.03.2023 ಮಂಗಳವಾರ

ಪ್ರಥಮ ಭಾಷೆ


ಕನ್ನಡ
ತೆಲುಗು
ಹಿಂದಿ
ಮರಾಠಿ
ತಮಿಳು ಉರ್ದು ಇಂಗ್ಲಿಷ್
ಇಂಗ್ಲಿಷ್ (NCERT)
ಸಂಸ್ಕೃತಿ 

ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 01:45
04.04.2023 ಮಂಗಳವಾರ ಗಣಿತ  ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 01:45
06.04.2023 ಗುರುವಾರ ದ್ವಿತೀಯ ಭಾಷೆ ಇಂಗ್ಲಿಷ್/ಕನ್ನಡ  ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 01:30
10.04.2023  ಸೋಮವಾರ ವಿಜ್ಞಾನ  ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 01:45
12.04.2023 ಬುಧವಾರ ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲಿಷ್ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 01:30
15.04.2023  ಶನಿವಾರ ಸಮಾಜವಿಜ್ಞಾನ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 01:45

 


ಇದನ್ನೂ ಓದಿ- ಸಿಎಂ ಬೊಮ್ಮಾಯಿಗೆ ಧಮ್ಮು, ತಾಕತ್ತಿದ್ರೆ ಗಡಿ, ಜಲದ ಸಮಸ್ಯೆಗಳನ್ನು ಬಗೆಹರಿಸಲಿ


ಕರ್ನಾಟಕ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-2023ರ ವೇಳಾಪಟ್ಟಿ  ಅನ್ನು ಡೌನ್‌ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:
ಕರ್ನಾಟಕ ಬೋರ್ಡ್ ಎಸ್‌ಎಸ್‌ಎಲ್‌ಸಿ ಟೈಮ್ ಟೇಬಲ್ 2023 pdf ಅನ್ನು ಡೌನ್‌ಲೋಡ್ ಮಾಡಲು ವಿದ್ಯಾರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಬಹುದು.
* ಮೊದಲಿಗೆ ಅಧಿಕೃತ ವೆಬ್‌ಸೈಟ್‌  sslc.karnataka.gov.in. ಗೆ ಭೇಟಿ ನೀಡಿ 
* ಬಳಿಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವಿಭಾಗದ ಅಡಿಯಲ್ಲಿ ನೀಡಲಾದ 'ಎಸ್‌ಎಸ್‌ಎಲ್‌ಸಿ ಟೈಮ್ ಟೇಬಲ್ 2023 ಕರ್ನಾಟಕ' ಲಿಂಕ್ ಅನ್ನು ಕ್ಲಿಕ್ ಮಾಡಿ.
* ಮುಂದಿನ ಪುಟದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಟೈಮ್ ಟೇಬಲ್ 2023 ಲಿಂಕ್ ಕಾಣಿಸುತ್ತದೆ.
* ಹೊಸ ಪುಟದಲ್ಲಿ ಕಾಣುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಟೈಮ್ ಟೇಬಲ್ 2023 ಲಿಂಕ್ ಅನ್ನು ಕ್ಲಿಕ್ ಮಾಡಿ.
* ಇದರಲ್ಲಿ 2022- 2023ನೇ ಸಾಲಿನ 10ನೇ ತರಗತಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಒಳಗೊಂಡಿರುವ ಪಿಡಿಎಫ್ ಫೈಲ್ ಕಾಣಿಸುತ್ತದೆ.
* ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಟೈಮ್ ಟೇಬಲ್ ಅನ್ನು ಡೌನ್ಲೋಡ್ ಮಾಡಬಹುದು.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.