ಬೆಂಗಳೂರು: ಕೋರ್ಟ್ ಗೆ ಹೋಗೋದು ಅಪರಾಧಾನಾ? ಅಂದು ನಾವು ಆರು ಜನ ಕೋರ್ಟ್ ಗೆ ಅರ್ಜಿ ಹಾಕಿದ್ವಿ, ಉಳಿದವ್ರು ಬೇರೆ ದಿನ ಅರ್ಜಿ ಹಾಕ್ತಾರೆ ಅಂತ ಇತ್ತು, ಆದ್ರೆ ಮಾಧ್ಯಮಗಳಲ್ಲಿ ಬಂತಲ್ಲ ಅದಕ್ಕೆ ಸುಮ್ನಾಗಿರಬಹುದು. ನಮ್ಮನ್ನು ಡ್ಯಾಮೇಜ್ ಮಾಡ್ಬೇಕು, ಸಚಿವ ಸ್ಥಾನದಿಂದ ರಾಜೀನಾಮೆ ಕೊಡಿಸ್ಬೇಕು ಅಂತ ಸಂಚು ನಡೆದಿದೆ ಎಂದು ಎಸ್ ಟಿ ಸೋಮಶೇಖರ್ ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ನಾವು ಕೋರ್ಟ್ ಗೆ ಹೋಗಿದ್ದು ನಮ್ಮ ವಿರುದ್ಧ ತೇಜೋವಧೆ ಮಾಡ್ತಾರೆ ಅಂತ. ಕಾಂಗ್ರೆಸ್(Congress) ಪಕ್ಷದವರಿಗೆ ನೈತಿಕತೆ ಇಲ್ಲ, ನಮಗೆ ಏನ್ ಕೇಳೋದು ಅವ್ರು? ಕಾಂಗ್ರೆಸ್ ಪಕ್ಷದವರ ತಟ್ಟೆಯಲ್ಲಿ ಹೆಗ್ಗಣ ಇದೆ, ನಮ್ಮ ತಟ್ಟೆಯಲ್ಲೇನು ನೋಡೋದು ಅವ್ರು? ನಾವು ಕೋರ್ಟ್ ಗೆ ಹೋದ್ರೆ ಅಪರಾಧಿಗಳಾಗಿಬಿಟ್ವಾ? ಎಂದು ಪ್ರಶ್ನಿಸಿದ್ದಾರೆ.


Sindagi By Poll: ದಳಪತಿಗಳಿಗೆ ಬಿಗ್ ಶಾಕ್: JDS‌ ಅಭ್ಯರ್ಥಿಯಾಗಬೇಕದ್ದ ನಾಯಕ ಕಾಂಗ್ರೆಸ್ ಸೇರ್ಪಡೆ!


ಸಿಡಿ ಮಾಡಿಸಿದ್ದು ಕಾಂಗ್ರೆಸ್ ಪಕ್ಷದವರೇ, 100% ಸಿಡಿ(CD) ಮಾಡಿದ್ದೇ ಕಾಂಗ್ರೆಸ್ ಪಕ್ಷದವರು, ಇನ್ಯಾರು ಮಾಡಿರ್ತಾರೆ? ಇಂಥ ಮನೆಹಾಳ ತೇಜೋವಧೆ ಕೆಲಸ ಅವ್ರೇ ಮಾಡೋದು ಅವರೇ. ನಾನು 20 ವರ್ಷ ಕಾಂಗ್ರೆಸ್ ಪಕ್ಷದಲ್ಲೇ ಇದ್ದೆ, ಅವ್ರು ಏನೇನು ಮಾಡ್ತಾರೆ ಅಂತ ನನಗೆ ಗೊತ್ತಿದೆ ಎಂದರು.


HD Revanna: ಮತ್ತೊಂದು CD ಸ್ಫೋಟ: ಸದನದಲ್ಲಿ CD ತೋರಿಸಿದ ಎಚ್.ಡಿ.ರೇವಣ್ಣ!


ಸಿಡಿ ಪ್ರಕರಣವನ್ನು ಸಿಬಿಐಗೆ ಕೊಡಲಿ ಅನ್ನೋದು ನಮ್ಮ ಒತ್ತಾಯ, ಸಿಬಿಐ(CBI)‌ ತನಿಖೆಯಿಂದ ಎಲ್ಲ ಆಚೆ ಬರುತ್ತೆ, ರಾಜಕೀಯವಾಗಿ ಸವಾಲು ಹಾಕಲಿ ಎದುರಿಸ್ತೇವೆ, ತಾಕತ್ತಿದ್ರೆ ನನ್ ವಿರುದ್ಧ, ರಮೇಶ್ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಲಿ, ಅದನ್ನು ಬಿಟ್ಟು ಸಿಡಿ ರಾಜಕಾರಣ ಮಾಡೋದು ಸರಿಯಲ್ಲ ಎಂದು ಕಿಡಿ ಕಾರಿದರು.


BJP: ಆಪರೇಷನ್ ಕಮಲ ಸಕ್ಸಸ್: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಾಜಿ ಸಂಸದ!


ದಿನೇಶ್ ಕಲ್ಲಳ್ಳಿ ದೂರು ವಾಪಸ್ ತೆಗೆದುಕೊಂಡ ವಿಚಾರವಾಗಿ ಮಾತನಾಡಿದ, ಸೋಮಶೇಖರ್(ST Somashekar), ರಮೇಶ್ ಜಾರಕಿಹೊಳಿಗೆ, ಅವ್ರ ಕುಟುಂಬಕ್ಕೆ ಆದ‌ ನೋವು ವಾಪಸಾಗುತ್ತಾ? ರಾಜಕೀಯ ಮಾನ ಮರ್ಯಾದೆ ಹೋಯ್ತು, ಅದು ವಾಪಸ್ ಬರಲ್ಲ, ನಾವು ಮೈತ್ರಿ ಸರ್ಕಾರ ತೆಗೆದಿದೀವಿ ಅಂತ ನಮ್ಮನ್ನು ಟಾರ್ಗೆಟ್ ಮಾಡಿದ್ದಾರೆ ಎಂದಿದ್ದಾರೆ.


Karnataka State: 'ಸರ್ಕಾರಿ ಮಹಿಳಾ ಉದ್ಯೋಗಿ'ಗಳಿಗೆ ರಾಜ್ಯ ಸರ್ಕಾರದಿಂದ ಗುಡ್‌ ನ್ಯೂಸ್‌!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.