ಬೆಂಗಳೂರು: ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಉದ್ಘಾಟನೆಗೊಂಡ ಎರಡೇ ತಿಂಗಳಲ್ಲಿ ಅಟಲ್ ಬಿಹಾರಿ ವಾಹಪೇಯಿ ಕ್ರೀಡಾಂಗಣದ ಗ್ಯಾಲರಿ ನೆಲಕ್ಕುರುಳಿದೆ. ನಾಲ್ಕು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಕ್ರೀಡಾಂಗಣವನ್ನು ಮಾರ್ಚ್ 1 ರಂದು ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದ್ದರು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಭ್ರಷ್ಟಾಚಾರ ಮತ್ತು ವಿಳಂಬ ಧೋರಣೆ ಸಹಿಸುವುದಿಲ್ಲ: ಡಿಸಿಗಳಿಗೆ ಸಿಎಂ ಖಡಕ್ ಸೂಚನೆ


ನಿನ್ನೆ ಸಂಜೆ ಬೀಸಿದ ಬಿರುಗಾಳಿ ಮಳೆಗೆ ಗ್ಯಾಲರಿ ಧರೆಗುರುಳಿದೆ. ಒಂದು ಗ್ಯಾಲರಿ ಮರಗಳಲ್ಲಿ ಸಿಲುಕ್ಕಿದ್ದರೇ ಮತ್ತೊಂದು ಗ್ಯಾಲರಿ ಸೀದಾ ಧರೆಗುರುಳಿದೆ. ಗ್ಯಾಲರಿ ಹಿಂಭಾಗದಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೂ ಕಬ್ಬಿಣದ ಸರಳುಗಳು ಬಿದ್ದಿವೆ. ಗ್ರಾನೈಟ್ ಸಮೇತ  ಸ್ಲ್ಯಾಬ್ ಗಳು ಕಿತ್ತುಹೋಗಿವೆ. ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಒಟ್ಟು 50 ಕೋಟಿರೂ ಗಳನ್ನ ಬಿಬಿಎಂಪಿ ಮೀಸಲಿಟ್ಟಿತ್ತು. 


ಘಟನಾ ಸ್ಥಳಕ್ಕೆ ಬಂದ ಸ್ಥಳೀಯ ಶಾಸಕ ಸತೀಶ್ ರೆಡ್ಡಿ, ನಿನ್ನೆ ಅತಿಯಾದ ಬಿರುಗಾಳಿ ಬೀಸಿದ್ರಿಂದ ಈ ಘಟನೆ ಆಗಿದೆ. ಗಾಳಿಯ ವೇಗ ಹೆಚ್ಚಿತ್ತು ಹಾಗಾಗಿ ಈ ಘಟನೆ ನಡೆದಿದೆ. ನಾಲ್ಕು ಗ್ಯಾಲರಿಯಲ್ಲಿ ಎರಡು ಗ್ಯಾಲರಿ ಮಾತ್ರ ಕುಸಿದಿದೆ. ನಾಲ್ಕು ಕೋಟಿ ವೆಚ್ಚದಲ್ಲಿ ಕಾಮಗಾರಿ ಮಾಡಲಾಗಿತ್ತು. ಈ ಗ್ಯಾಲರಿಗೆ 25 ಲಕ್ಷ ಖರ್ಚು ಮಾಡಲಾಗಿತ್ತು. ಇದನ್ನ ಮತ್ತೆ ಗುತ್ತಿಗೆದಾರರಿಂದಲೇ ನಿರ್ಮಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.


ಇದನ್ನೂ ಓದಿ: "ಪ್ರಮೋದ್ ಮುತಾಲಿಕ್‌ರಂಥವರನ್ನ ಮೊದಲು ಒದ್ದು ಒಳಗೆ ಹಾಕಬೇಕು"


ಯಾವುದೇ ರೀತಿ ಬಿಬಿಎಂಪಿಗೆ ಸರ್ಕಾರಕ್ಕೆ ಹೊರೆಯಾಗದ ರೀತಿ ನೋಡಿಕೊಳ್ತೇವೆ. ಇನ್ನೂ 15 ರಿಂದ 25 ದಿನದೊಳಗೆ ಎಲ್ಲಾ ಕಾಮಗಾರಿ ಮುಗಿಸುತ್ತೇವೆ. ಅಧಿಕಾರಿಗಳ ಜೊತೆ ಸಭೆ ಮಾಡಿ ಸೂಚನೆ ಕೂಡ ನೀಡಿದ್ದೇನೆ. ಕಳಪೆ ಕಾಮಗಾರಿ ಇಂದ ಆಗಿಲ್ಲ. ನಾವು ಯಾವುದೇ ರೀತಿ ಕ್ವಾಲಿಟಿಯಲ್ಲಿ ಕಾಂಪ್ರಮೈಸ್ ಆಗಿಲ್ಲ ,ಬಿರುಗಾಳಿ ಇದ್ದಿದ್ರಿಂದ ಈ ಘಟನೆ ನಡೆದಿದೆ ಅಷ್ಟೇ ಎಂದು ಹೇಳಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.