ಕಲಬುರಗಿ: ಕೆಪಿಎಸ್‍ಸಿ ಪರೀಕ್ಷೆ ಬರೆಯಲು ತೆರಳಿದ್ದ ಪರೀಕ್ಷಾರ್ಥಿಗಳಿಂದ ತಾಳಿ, ಕಿವಿ ಓಲೆ ಮತ್ತು ಕಾಲುಂಗುರ ತೆಗೆಸಿ ಸಿಬ್ಬಂದಿ ಯಡವಟ್ಟು ಮಾಡಿದ್ದಾರೆ. ಕೆಪಿಎಸ್‍ಸಿ ಗ್ರೂಪ್ ‘ಸಿ’ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಜಿಲ್ಲಾಡಳಿತ ಯಡವಟ್ಟು ಮಾಡಿದೆ. ಪರೀಕ್ಷಾರ್ಥಿಗಳ ಮಾಂಗಲ್ಯ ತೆಗೆಸಿ ಸಿಬ್ಬಂದಿ ಪರೀಕ್ಷೆ ಬರೆಸಿದ್ದಾರೆ.


COMMERCIAL BREAK
SCROLL TO CONTINUE READING

ಅಕ್ರಮ ತಡೆಯುವ ಉದ್ದೇಶದಿಂದ ಮಹಿಳೆಯರ ಕೊರಳಲ್ಲಿದ್ದ ತಾಳಿ,  ಕಾಲುಂಗುರ, ಕಿವಿ ಓಲೆ ಸೇರಿದಂತೆ ಎಲ್ಲಾ ತರಹದ ಆಭರಣಗಳನ್ನು ಪರೀಕ್ಷಾ ಸಿಬ್ಬಂದಿಗಳು ತೆಗೆಸಿದ್ದಾರೆ. ಕೊರಳಿನಲ್ಲಿದ್ದ ತಾಳಿ ತೆಗೆಸಿರುವುಕ್ಕೆ ಪರೀಕ್ಷೆ ಬರೆದ ಮಹಿಳೆಯರು ಮತ್ತು ಪಾಲಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಬುರಗಿ ನಗರದ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. 


ಇದನ್ನೂ ಓದಿ: ಪಟ್ಟಕ್ಕಾಗಿ ನಾನು ಪ್ರಯತ್ನ ಮಾಡಿದ್ದೇ, ಆದ್ರೆ ಆಗಲಿಲ್ಲ : ಶ್ರೀರಾಮುಲು


ಕತ್ತಿನಲ್ಲಿದ್ದ ತಾಳಿ ತೆಗೆಯಲು ಹಿಂದೇಟು ಹಾಕಿದ ಮಹಿಳೆಯರಿಗೆ ಪರೀಕ್ಷೆ ಬರೆಯಲು ಸಿಬ್ಬಂದಿ ಅವಕಾಶ ನೀಡಿಲ್ಲ. ಈ ಬಗ್ಗೆ ಸಾಕಷ್ಟು ವಾಗ್ವಾದ ನಡೆದ ಬಳಿಕ ಪರೀಕ್ಷೆಗಾಗಿ ಕತ್ತಲ್ಲಿದ್ದ ತಾಳಿಯನ್ನು ತೆಗೆಯಬೇಕಾದ ಅನಿವಾರ್ಯತೆ ಮಹಿಳೆಯರಿಗೆ ಉಂಟಾಗಿತ್ತು. ಕಿವಿ ಒಲೆ ತೆಗೆಯಲು ಸಾಧ್ಯವಾಗದೆ ಕಿವಿಯಿಂದ ರಕ್ತ ಸೋರಿದರೂ ಸಹ ಪರೀಕ್ಷಾ ಸಿಬ್ಬಂದಿ ಕರುಣೆ ತೋರಿಲ್ಲ.


ಪರೀಕ್ಷಾ ಕೇಂದ್ರದ ಹೊರಗಡೆ ನಿಂತಿದ್ದ ಸಂಬಂಧಿಕರ ಕೈಗೆ ತಾಳಿ ಕೊಟ್ಟು ಅಭ್ಯರ್ಥಿಗಳು ಎಕ್ಸಾಮ್ ಅಟೆಂಡ್ ಮಾಡಿದ್ದಾರೆ. ಬಂಗಾರದ ಕಿವಿಯೋಲೆ ತೆಗೆಯಲು ಆಗದಿದ್ದಾಗ ಕತ್ತರಿ ಕೊಟ್ಟು ಕಟ್ ಮಾಡುವಂತೆ ಸಿಬ್ಬಂದಿ ಹೇಳಿದ್ದಾರೆ. ಪರೀಕ್ಷಾ ಕೇಂದ್ರದಿಂದ ನಗರದ ಸರಫ್ ಬಜಾರ್‍ಗೆ ಹೋದ ಕೆಲವು ಅಭ್ಯರ್ಥಿಗಳು ಅಕ್ಕಸಾಲಿಗರಿಂದ ಕಿವಿಯೋಲೆ ತೆಗೆದು ಎಕ್ಸಾಮ್ ಅಟೆಂಡ್ ಮಾಡಿದ್ದಾರೆ.  


ಇದನ್ನೂ ಓದಿ: Bengaluru: ಕತ್ತು ಕೊಯ್ದು ಸರ್ಕಾರಿ ಮಹಿಳಾ ಅಧಿಕಾರಿ ಭೀಕರ ಹತ್ಯೆ..!


ಹಿಂದೂ ಧರ್ಮದಲ್ಲಿ ಮಾಂಗಲ್ಯ ಸರಕ್ಕೆ ತನ್ನದೆ ಆದ ಮೌಲ್ಯವಿದೆ. ಪತಿ ತೀರಿಹೋದಾಗ ಮಾತ್ರ ಮಾಂಗಲ್ಯ ಸರ ಹಾಗೂ ಕಾಲುಂಗರ ತೆಗೆಯಲಾಗುತ್ತದೆ. ಪರೀಕ್ಷೆ ಬರೆಯಲು ಬಂದವರ ತಾಳಿ ಹಾಗೂ ಕಾಲುಂಗುರ ತೆಗೆಸಿ ಪರೀಕ್ಷಾ ಸಿಬ್ಬಂದಿ ಮಹಿಳೆರಿಗೆ ಅಪಮಾನ ಮಾಡಿದ್ದಾರೆ. ಈ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡದೆ ಏಕಾಏಕಿ ಈ ರೀತಿ ಕ್ರಮಕೈಗೊಂಡಿದ್ದಕ್ಕೆ ಪರೀಕ್ಷಾರ್ಥಿಗಳು ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.