ಗದಗ: ಗದಗ ಜಿಲ್ಲೆಯ ಶೆಟ್ಟಿಕೆರೆಯಲ್ಲಿ ಅಪರೂಪದ ಪ್ರಾಣಿ ಪ್ರತ್ಯಕ್ಷವಾಗಿದೆ. ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದೆ. ಕಪ್ಪತಗುಡ್ಡ ವನ್ಯಜೀವಿಧಾಮ ಪ್ರದೇಶದ ಅಂಚಿನಲ್ಲಿರುವ ಶೆಟ್ಟಿಕೆರೆಯಲ್ಲಿ ನಕ್ಷತ್ರಾಕಾರದ ಕೂರ್ಮ ಪತ್ತೆಯಾಗಿದೆ.


COMMERCIAL BREAK
SCROLL TO CONTINUE READING

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೆರೆಯಲ್ಲಿ ಟೆಸ್ಟುಡಿನಿಡೆ ಕುಟುಂಬಕ್ಕೆ ಸೇರಿದ ನಕ್ಷತ್ರ ಆಮೆ ಪತ್ತೆಯಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗೆ ವಿಶೇಷ ತಳಿಯ ಆಮೆ ಕಣ್ಣಿಗೆ ಬಿದ್ದಿದೆ.


ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಇಂದು ಕೂಡ ಮಳೆ ಸಾಧ್ಯತೆ: ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಮನವಿ


ಈ ನಕ್ಷತ್ರ ಆಮೆಯ ವೈಜ್ಞಾನಿಕ ಹೆಸರು ಜಿಯೋಚಲೋನ್ ಎಲಗನ್ಸ್ ಅಂತಾ. ಅವಾಸ ಸ್ಥಾನ ನಾಶ ಮತ್ತು ಕಳ್ಳಬೇಟೆಯಿಂದಾಗಿ ಈ ಆಮೆ ಅಳಿವಿನಂಚಿನಲ್ಲಿದೆ. ಸುಮಾರು 10 ಇಂಚು ಉದ್ದದಷ್ಟು ಬೆಳೆಯುವ ನಕ್ಷತ್ರ ಆಮೆ. ದೇಹದ ಮೇಲೆ ನಕ್ಷತ್ರ ಆಕಾರದ ಗಾಢವಾದ ಬಣ್ಣದ ವಿನ್ಯಾಸ ಹೊಂದಿದೆ.


ಇವುಗಳನ್ನು ಮನೆಯಲ್ಲಿ ಸಾಕಿದರೆ ಮನೆಯಲ್ಲಿ ಸಂಪತ್ತು ವೃದ್ಧಿ ಎಂಬ ನಂಬಿಕೆಯಿದೆ. ಆದರೆ ಮನೆಯಲ್ಲಿ ಸಾಕಿದರೆ ಇವು ಬಹಳಷ್ಟು ದಿನ ಬದಕೋದಿಲ್ಲ. ಕೆಲವರು ಚಿಪ್ಪು ಮತ್ತು ಅದರ ಮಾಂಸಕ್ಕಾಗಿ ಕಳ್ಳ ಬೇಟೆಯಾಡುತ್ತಾರೆ. ಹೀಗಾಗಿ ಈ ಪ್ರಾಣಿ ಅಳಿವಿನಂಚಿನಲ್ಲಿದೆ ಎಂದು ಅರಣ್ಯ ಇಲಾಖೆಯ ಮಾಹಿತಿ ನೀಡಿದೆ.


ಇದನ್ನೂ ಓದಿ: ಉಚಿತ ಕೊಡುಗೆಗಳ ವೆಚ್ಚದ ಪರಿಣಾಮವಾಗಿ ಕರ್ನಾಟಕ ಇನ್ನೊಂದು ವೆನೆಜುವೆಲಾ ಆಗದಿರಲಿ!


ಇಂದು ವಿಶ್ವ ಆಮೆ ದಿನವಾಗಿದೆ. ಹೀಗಾಗಿ ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರದು ಎಂಬ ಅಭಿಪ್ರಾಯ ಅರಣ್ಯ ಇಲಾಖೆಯದ್ದಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.