ನವದೆಹಲಿ: ಹೌದು,ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ನಿಜಕ್ಕೂ ಆಶ್ಚರ್ಯವಾಗಿದೆ.  ಇಂದು ಎಲ್ಲ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೆ ನಿರಾಸೆ ಉಂಟಾಗಿದೆ.ಪಕ್ಷದ ಮೂಲಗಳು ಹೇಳುವಂತೆ  ಕೇವಲ 50 ರಿಂದ 60 ಅಭ್ಯರ್ಥಿಗಳ ಹೆಸರು ಮಾತ್ರ ಇಂದು ಪ್ರಕಟ ಮಾಡಲಾಗುತ್ತಿದೆ.


COMMERCIAL BREAK
SCROLL TO CONTINUE READING

ವಿಧಾನಸಭಾ ಟಿಕೆಟ್ ಹಂಚಿಕೆಯಲ್ಲಿ ರಾಜ್ಯ ಮತ್ತು ಹೈಕಮಾಂಡ್ ಪಟ್ಟಿಯಲ್ಲಿ ಸಾಮ್ಯತೆ ಮೂಡದ ಹಿನ್ನಲೆಯಲ್ಲಿ ಸೀಮಿತ ಅಭ್ಯರ್ಥಿಗಳ ಹೆಸರನ್ನು ಮಾತ್ರ ಹೈಕಮಾಂಡ್ ಘೋಷಣೆ ಮಾಡುತ್ತಿದೆ. ನಿನ್ನೆ ರಾತ್ರಿ  ಟಿಕೆಟ್ ಹಂಚಿಕೆ ವಿಚಾರವಾಗಿ ರಾತ್ರಿ ಮೂರು ಗಂಟೆಯ ವರೆಗೂ ಸಭೆ ನಡೆಸಿದ್ದ ಅಮಿತ್ ಷಾ, ರಾಜ್ಯ ನಾಯಕರ ಪಟ್ಟಿಗೆ ಕೆಲವು ಕಡೆ ಆಕ್ಷೇಪ ವ್ಯಕ್ತಪಡಿಸಿದ್ದರು, ಷಾ ರವರು ತಮ್ಮ ಸಮೀಕ್ಷೆಗೆ ಹೊಂದಾಣಿಕೆಯಾಗುವ ಅಭ್ಯರ್ಥಿಗಳ ಹೆಸರನ್ನು ಮಾತ್ರ ಚುನಾವಣಾ ಸಮಿತಿಗೆ ಶಿಫಾರಸ್ಸು ಮಾಡಲಿದ್ದಾರೆ ಎಂದು ತಿಳಿದುಬಂದಿದೆ.


ಇಂದು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಸಮಿತಿಯ ಸಭೆ ನಡೆಯಲಿದ್ದು,ಸಭೆಯ ನಂತರವೇ ಹೈಕಮಾಂಡ್ ಹೆಸರುಗಳನ್ನು ಪ್ರಕಟಿಸಲಿದೆ ಎನ್ನಲಾಗಿದೆ.