ರಾಜ್ಯ ಬಜೆಟ್ 2023-24: ಮೈಸೂರು ವಿಮಾನ ನಿಲ್ದಾಣ ಉನ್ನತಿಕಾರಣಕ್ಕೆ ₹320 ಕೋಟಿ ; ಇದೇ ಸಾಲಿನಲ್ಲಿ ಐದು ಹೊಸ ಏರ್ಪೋರ್ಟ್
ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿ, ಹೊಸ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಿ ಸ್ಪರ್ಧಾತ್ಮಕ ಬಿಡ್ ಪ್ರಕ್ರಿಯೆ ಮೂಲಕ PPP ಮಾದರಿಯಲ್ಲಿ ವಿಮಾನನಿಲ್ದಾಣ ಅಭಿವೃದ್ಧಿಪಡಿಸಿಲಾಗುವುದು.
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದು, ಐದು ಹೊಸ ವಿಮಾನ ನಿಲ್ದಾಣ ಈ ಸಾಲಿನಲ್ಲಿ ಪೂರ್ಣ ಆಗಲಿದೆ ಹಾಗೂ ಮೈಸೂರು ವಿಮಾನ ನಿಲ್ದಾಣ ಉನ್ನತಿಕಾರಣಕ್ಕೆ ₹320 ಕೋಟಿ ಹಂಚಿಕೆ ಮಾಡಲು ಘೋಷಣೆ ಮಾಡಿದರು.
ಸುಗಮ ಸಂಚಾರ ಮತ್ತು ಸಮಯದ ಉಳಿತಾಯದ ದೃಷ್ಟಿಯಿಂದ ಜನ ಸಾಮಾನ್ಯರು ವಿಮಾನ ಪ್ರಯಾಣಕ್ಕೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರವು ದಾಖಲೆ ಪ್ರಮಾಣದ 5 ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಕಾಮಗಾರಿಗಳನ್ನು ಶಿವಮೊಗ್ಗ. ವಿಜಯಪುರ, ಹಾಸನ, ರಾಯಚೂರು ಮತ್ತು ಕಾರವಾರ ಜಿಲ್ಲೆಗಳಲ್ಲಿ ಕೈಗೆತ್ತಿಕೊಂಡಿದೆ. ಶಿವಮೊಗ್ಗ ಮತ್ತು ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿಗಳನ್ನು ಈ ಸಾಲಿನಲ್ಲಿ ಪೂರ್ಣ ಆಗಲಿದೆ, ಎಂದರು.
ಇದನ್ನೂ ಓದಿ- ಮಹಿಳೆಯರಿಗಾಗಿ 'ಗೃಹಿಣಿ ಶಕ್ತಿ' ಯೋಜನೆ ಘೋಷಿಸಿದ ಸಿಎಂ ಬೊಮ್ಮಾಯಿ
ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿ, ಹೊಸ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಿ ಸ್ಪರ್ಧಾತ್ಮಕ ಬಿಡ್ ಪ್ರಕ್ರಿಯೆ ಮೂಲಕ PPP ಮಾದರಿಯಲ್ಲಿ ವಿಮಾನನಿಲ್ದಾಣ ಅಭಿವೃದ್ಧಿಪಡಿಸಿಲಾಗುವುದು. ಮೈಸೂರು ವಿಮಾನ ನಿಲ್ದಾಣ ಉನ್ನತಿಕಾರಣಕ್ಕೆ ಭೂ ಸ್ವಾಧೀನ ಕ್ರಮ ವಹಿಸಿ, ಇದಕ್ಕೆ ₹320 ಕೋಟಿ ಹಂಚಿಕೆ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದರು.
ಇದನ್ನೂ ಓದಿ- ಬೆಂಗಳೂರು : ರಾಜ್ಯ ಸರ್ಕಾರ ಇಂದು ಬಜೆಟ್ ಮಂಡನೆ, 9 ಹೊಸ ರೈಲು ಯೋಜನೆ ಅನುಷ್ಠಾನ
ಇದಲ್ಲದೆ, ದಾವಣಗೆರೆ ಮತ್ತು ಕೊಪ್ಪಳ ವಿಮಾನ ನಿಲ್ದಾಣ ಕಾರ್ಯಸಾಧ್ಯತಾ ವರದಿ ಸಿದ್ದಪಡಿಸಿದ್ದು, ಈ ಸಾಲಿನಲ್ಲಿ ಕಾಮಗಾರಿಯನ್ನು ಪ್ರಾರಂಭ ಆಗಲಿದೆ ಎಂದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.