ಗಣಿ ಜಿಲ್ಲೆಗೆ ದೊರೆಯುವುದೇ ವಿಶೇಷ ಉಡುಗೊರೆ..ರಾಜ್ಯ ಬಜೆಟ್ ಮೇಲೆ ಹೆಚ್ಚಿದ ಜಿಲ್ಲೆಯ ಜನರ ನಿರೀಕ್ಷೆ!
State Budget : ಗಣಿನಾಡು ಬಳ್ಳಾರಿ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಸಕ್ತ ವರ್ಷದ ಬಜೆಟ್ನಲ್ಲಿ ವಿಶೇಷ ಉಡುಗೊರೆ ನೀಡುವ ನಿರೀಕ್ಷೆ ಹೆಚ್ಚಿದ್ದು, ಇದಕ್ಕಾಗಿ ಜನರು ಕಾದು ಕುಳಿತಿದ್ದಾರೆ. ಈಗಾಗಲೇ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದು, ಅವುಗಳಿಗೆ ಆಡಳಿತಾತ್ಮಕ ಅನುಮೋದನೆ ದೊರಕಿದೆ.
CM Siddaramaiah : ಇನ್ನು ಜಿಲ್ಲೆಗೂ ಹೆಚ್ಚಿನ ಅನುದಾನ ನೀಡುತ್ತಾರಾ ಇಲ್ಲವೆ ಜನರ ನಿರೀಕ್ಷೆ ಹುಸಿಗೊಳಿಸುತ್ತಾರಾ ಎನ್ನುವುದು ಜಿಲ್ಲೆಯ ಜನರ ಕುತೂಹಲ ಕೆರಳಿಸಿದೆ. ಪ್ರಚಾರ ವೇಳೆಯಲ್ಲಿ ಬಳ್ಳಾರಿ ಜಿಲ್ಲೆಯ ಜೀನ್ಸ್ ಉದ್ಯಮವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ರಾಹುಲ್‌ಗಾಂಧಿ ಭರವಸೆ ನೀಡಿದ್ದರು. ಜೀನ್ಸ್ ಉದ್ಯಮಕ್ಕೆ ಅಧುನಿಕ ಸ್ಪರ್ಶ ನೀಡುವ ಜತೆಗೆ ಜೀನ್ಸ್ ಪಾರ್ಕ್ ನಿರ್ಮಾಣ ಮಾಡುವರೇ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಇದನ್ನೂ ಓದಿ-OMG: ಇರಲಾರದವರು 'ಇರುವೆ' ಬಿಟ್ಟುಕೊಂಡವರನ್ನು ನೋಡಿದ್ದೀರಿ, 'ಆನೆ' ಬಿಟ್ಟುಕೊಂಡವರನ್ನೂ ನೋಡಿ!
ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯನ್ನು ಹಂಚಲು ಬಂದಿದ್ದೇನೆ ಎನ್ನುವ ಮೂಲಕ ಬಳ್ಳಾರಿ ಜನರ ಮನಸನ್ನು ಗೆದ್ದ ರಾಹುಲ್‌ಗಾಂಧಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೊದಲ ಬಜೆಟ್‌ನಲ್ಲೇ ಜೀನ್ಸ್ ಉದ್ಯಮ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ಮೀಸಲಿಡಲಾಗುವುದಾಗಿ ಭರವಸೆ ನೀಡಿದ್ದರು.
ಅಲ್ಲದೆ ಬಳ್ಳಾರಿಯ ಜೀನ್ಸ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ಆಗಿ ರೂಪುಗೊಳ್ಳಲು ಜೀನ್ಸ್‌ನ ರಾಜಧಾನಿಯನ್ನಾಗಿ ಮಾಡಲಾಗುವುದಾಗಿ ಹೇಳಿಕೆ ನೀಡಿದ್ದರು. ಅದರಂತೆ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಮತದಾರರು ಕಾಂಗ್ರೆಸ್‌ಗೆ ಕೈ ಹಿಡಿದಿದ್ದು, ಈ ಬಾರಿ ಮೊದಲ ಬಜೆಟ್ ನಲ್ಲೇ ಜೀನ್ಸ್ ಉದ್ಯಮಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಜಿಲ್ಲೆಯ ಜನರ ಕೂಗಾಗಿದೆ!
ಇದನ್ನೂ ಓದಿ-ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಸಾಧ್ಯತೆ : ಬಸವರಾಜ ಬೊಮ್ಮಾಯಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=38l6m8543Vk
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.