ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೂಡ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲು ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಸಿ.ಬಿ.ಐ ರಾಜ್ಯದಲ್ಲಿ ಮುಕ್ತ ಅವಕಾಶವಿದ್ದುದನ್ನು ಹಿಂಪಡೆಯಲಾಗಿದೆ.


COMMERCIAL BREAK
SCROLL TO CONTINUE READING

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ  ಎಚ್.ಕೆ. ಪಾಟೀಲ, ಸಿ.ಬಿ.ಐ ಗೆ ಸಹಜವಾದ ಪೂರ್ವಾಗ್ರಹ ಇದೆ ಎಂಬುದು ಇತ್ತೀಚಿನ ದಿನಗಳಲ್ಲಿ ದೃಢಪಡುತ್ತಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಸಿ.ಬಿ.ಐ ಗೆ ಯಾವುದೇ ಮುಕ್ತ ಅವಕಾಶವಿರಬಾರದೆಂದು ರಾಜ್ಯ ಸರ್ಕಾರ ತೀರ್ಮಾನಿಸಿದೆ.


ಸಿ.ಬಿ.ಐ ಸಂಸ್ಥೆಯನ್ನು ಕೇಂದ್ರ ಸರ್ಕಾರ ರಾಜಕೀಯ ಉದ್ದೇಶಗಳಿಗಾಗಿ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಇನ್ನು ಮುಂದೆ ಯಾವುದಾದರೂ ಪ್ರಕರಣದಲ್ಲಿ ಸಿ.ಬಿ.ಐ ಮೂಲಕ ತನಿಖೆ ನಡೆಯಬೇಕಾದರೆ ರಾಜ್ಯ ಸರ್ಕಾರದ ಒಪ್ಪಿಗೆ ಮುಖ್ಯವಾದದ್ದು ಮತ್ತು ರಾಜ್ಯದಲ್ಲಿನ ಪ್ರಕರಣಗಳನ್ನು ಪ್ರಕರಣವಾರು ಆಧಾರದ ಮೇಲೆ ತನಿಖೆ ನಡೆಸಲು ಸಿ.ಬಿ.ಐ ತನಿಖಾ ಸಂಸ್ಥೆಗೆ ಅನುಮತಿ ನೀಡಲು ಪರಿಶೀಲಿಸಲಾಗುವುದು ಎಂದು ಸಚಿವರು ತಿಳಿಸಿದರು.


ಇದನ್ನೂ ಓದಿIND vs BAN: ಕಾನ್ಪುರ ಟೆಸ್ಟ್‌ನೊಂದಿಗೆ ʼಈʼ ಲೆಜೆಂಡರಿ ಆಟಗಾರರ ವೃತ್ತಿಜೀವನ ಅಂತ್ಯ... ಮತ್ತೇ ಟೀಂ ಇಂಡಿಯಾಗೆ ಮರಳುವುದಿಲ್ಲವೇ?!  


ಈಗ ರಾಜ್ಯ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ಪಕ್ಷವು ಸರಣಿ ಟ್ವೀಟ್ ಮೂಲಕ ಕಿಡಿ ಕಾರಿದೆ. “ಊಸರವಳ್ಳಿ ಕಾಂಗ್ರೆಸ್ ಸರ್ಕಾರ”ದ ಭ್ರಷ್ಟಾಚಾರ ಮುಚ್ಚಿಕೊಳ್ಳುವ “ಕಳ್ಳಾಟ” ಶುರುವಾಗಿದೆ. ನಾನು ತಪ್ಪೇ ಮಾಡಿಲ್ಲ, ಯಾರಿಗೂ ಹೆದರಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುವ ನಿಮಗೆ "ಸಿಬಿಐ" ಭಯವೇಕೆ..? ಕಾಂಗ್ರೆಸ್ಸಿಗರೇ..., ಬಾಯಿ ಬಿಟ್ಟರೇ ಸಂವಿಧಾನ ಉಳಿಸುತ್ತೇವೆ, ರಕ್ಷಿಸುತ್ತೇವೆ ಎನ್ನುವುದು ಬರೀ ಬೊಗಳೆಯೇ..? ಭ್ರಷ್ಟಾಚಾರಿ @siddaramaiah ನಿಮ್ಮ ಭ್ರಷ್ಟಾಚಾರಗಳನ್ನು ಮುಚ್ಚಿಕೊಳ್ಳಲು ಹಿಂದೆ ಲೋಕಾಯುಕ್ತ ಸಂಸ್ಥೆಯ ಅಧಿಕಾರವನ್ನೇ ಕಿತ್ತುಕೊಂಡಿರಿ.. ಮುಡಾ ಪ್ರಕರಣದಲ್ಲಿ, ಮುಕ್ಕಿ ತಿಂದಿರುವ "ವೈಟ್ನರ್"ರಾಮಯ್ಯ ಹಾಗೂ ಕುಟುಂಬದ ವಿರುದ್ಧ ಸಿಬಿಐ ವಿಚಾರಣೆ ನಡೆದರೆ, ಎಲ್ಲಿ ತಮ್ಮ "ಮುಡಾ" ನಿಗೂಢ "ರಹಸ್ಯ" ಬಯಲಾಗುತ್ತೋ ಎಂಬ ಆತಂಕ ಕಾಡುತ್ತಿದೆ. ಸಿಬಿಐ ಅನ್ನು ಕಟ್ಟಿಹಾಕಲು ಹೊರಟಿರುವ @INCKarnataka ಸರ್ಕಾರದ ನಿಜಬಣ್ಣ ಬಯಲಾಗುತ್ತಿದೆ' ಎಂದು ಆಕ್ರೋಶ ವಕ್ತಪಡಿಸಿದೆ.


ಇದನ್ನೂ ಓದಿ: MUDA Scam: ಹೈಕೋರ್ಟ್ ಆದೇಶದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ