ಬೆಂಗಳೂರು: COVID-19 ಕರಿ‌ ನೆರಳಿನಲ್ಲಿ ಇಂದಿನಿಂದ ಮಹತ್ವದ ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ಆರಂಭವಾಗುತ್ತಿದೆ. ಸಂಪುಟ ಪುನರ್ರಚನೆಯೂ ಸೇರಿದಂತೆ ಹಲವು ಸಮಸ್ಯೆ ಎದುರಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ನೇತೃತ್ವದ ರಾಜ್ಯ ಸರ್ಕಾರ ತನ್ನು ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಲಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಅಣಿಯಾಗಿದ್ದಾರೆ. 


COMMERCIAL BREAK
SCROLL TO CONTINUE READING

ಹೇಗಾದರು ಮಾಡಿ COVID-19 ಸಂದರ್ಭದಲ್ಲಿ ತಂದಿರುವ ಸುಗ್ರೀವಾಜ್ಞೆಗಳಿಗೆ ಶಾಸನಸಭೆಯ ಅನುಮೋದನೆ ಪಡೆದು ಹಾಗೂ ಕೆಲ ಮಸೂದೆಗಳನ್ನು ಪಾಸ್ ಮಾಡಿಕೊಂಡು ಅಧಿವೇಶನವನ್ನು ಮುಗಿಸಿಬಿಡಬೇಕೆಂದು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಅದಕ್ಕೆ ಕೊರೋನಾ ನೆಪವನ್ನು ಮುಂದಿಡುತ್ತಿದೆ. ಆದರೆ ಪ್ರತಿಪಕ್ಷ ಕಾಂಗ್ರೆಸ್ ದನಿ ಗೂಡಿಸುತ್ತಿಲ್ಲ. ಆದುದರಿಂದ ಈ ಬಾರಿಯ ಅಧಿವೇಶನ ಯಾವ ರೀತಿ ನಡೆಯುತ್ತದೆ ಎಂಬ ಕುತೂಹಲ ಮೂಡಿದೆ.


'ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ನನಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೂರವಾಣಿ ಕರೆ ಮಾಡಿದ್ದರು. ಕೊರೊನಾ ಆರ್ಭಟ ಹಿನ್ನೆಲೆಯಲ್ಲಿ ಸದನದವನ್ನು 3 ದಿನಕ್ಕೆ ಮೊಟಕು ಮಾಡುತ್ತಿದ್ದೇವೆ, ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು. ಆದರೆ ನಾವು ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಅಧಿವೇಶನವನ್ನು ಮೊಟಕುಗೊಳಿಸಲು ಬಿಡುವುದಿಲ್ಲ' ಎಂದು ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದ್ದಾರೆ‌‌.


ವಿಧಾನಸಭೆಯ ಅಧಿವೇಶನದಲ್ಲಿ ಪಾಲ್ಗೊಳ್ಳಲಿರುವ ಸಚಿವರು, ಶಾಸಕರು, ಅಧಿಕಾರಿಗಳು, ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹಾಗೂ ಮಾಧ್ಯಮದವರು COVID-19 ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಹೀಗೆ ಪರೀಕ್ಷೆ ಮಾಡಿಸಿಕೊಂಡ 1800 ಜನರಲ್ಲಿ 70 ಜನರಿಗೆ ಪಾಸಿಟಿವ್ ಬಂದಿದೆ.


ಅಧಿವೇಶನದ ಮುನ್ನವೇ ಸಂಪುಟ ವಿಸ್ತರಣೆ ಮಾಡಲು ಬಯಸಿದ್ದೇನೆ, ಹೈಕಮಾಂಡ್ ಏನು ಹೇಳುತ್ತೆ ನೋಡೋಣ: ಬಿಎಸ್‌ವೈ


ಈ ಪೈಕಿ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆಹಾರ ಸಚಿವ ಕೆ. ಗೋಪಾಲಯ್ಯ, ಕಾಂಗ್ರೆಸ್ ಶಾಸಕ ಪ್ರಿಯಾಂಕಾ ಖರ್ಗೆ ಸೇರಿದಂತೆ ಐವರು ಶಾಸಕರಿಗೂ COVID-19 ಪಾಸಿಟಿವ್ ಬಂದಿದೆ. ಆದುದರಿಂದ ಅಧಿವೇಶನವನ್ನು ಮೊಟಕುಗೊಳಿಸೋಣ ಎನ್ನುವುದು ಬಿಜೆಪಿ ನೀಡುತ್ತಿರುವ ನೆಪ. ಚರ್ಚೆ ಮಾಡಬೇಕಿರುವ ಹಲವು ಪ್ರಮುಖ‌ ಸಂಗತಿಗಳಿವೆ. ಆದುದರಿಂದ ಅಧಿವೇಶನವನ್ನು ಮೂರೇ ದಿನಕ್ಕೆ ಮುಕ್ತಾಯ ಮಾಡುವುದು ಬೇಡ ಎನ್ನುವುದು ಪ್ರತಿಪಕ್ಷ ಕಾಂಗ್ರೆಸ್ ನಿಲುವು.


ರಾಜ್ಯದ ಅಭಿವೃದ್ಧಿ ಕುರಿತು ಚರ್ಚಿಸಲು ಪ್ರಧಾನಿ, ಕೇಂದ್ರ ಸಚಿವರ ಭೇಟಿ : ಬಿಎಸ್ವೈ


ಭೂ ಸುಧಾರಣೆ ತಿದ್ದುಪಡಿ ಕಾಯ್ದೆ (Land Reform Amendment Act), ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ಹೇಗಾದರೂ ಒಪ್ಪಿಗೆ ಪಡೆದುಕೊಳ್ಳಬೇಕೆಂದು ಆ ಬಗ್ಗೆಯೇ ಗಮನ ಹರಿಸಿದೆ. ಕಾಂಗ್ರೆಸ್, ಜೆಡಿಎಸ್ ವಿಧೇಯಕಗಳನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲದಿರುವುದರಿಂದ ಅಧಿವೇಶನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಟಾಪಟಿ ಆಗುವುದು ನಿಶ್ಚಿತವಾಗಿದೆ.


ಸಿಎಜಿ ವರದಿ ಮಂಡನೆ, ಬಿಬಿಎಂಪಿ (BBMP) ವಿಧೇಯಕ ಕುರಿತು ಜಂಟಿ ಪರಿಶೀಲನಾ ಸಮಿತಿ ವರದಿ ಮಂಡನೆ, 10 ಸದನ ಸಮಿತಿಗಳಿಗೆ ಸದಸ್ಯರನ್ನು ನೇಮಿಸುವ ಪ್ರಸ್ತಾವ ಮಂಡನೆ, 9 ವಿಧೇಯಕಗಳ ಮಂಡನೆ, 4 ವಿಧೇಯಕಗಳ ಪರ್ಯಾಲೋಚನೆ ಪ್ರಕ್ರಿಯೆ ನಡೆಸುವ ಪ್ರಸ್ತಾಪ ಮಂಡನೆ ಇಂದಿನ ಕಲಾಪದ ಅಜೆಂಡವಾಗಿದೆ.