ಬೆಂಗಳೂರು: ರಾಜ್ಯ ಸರ್ಕಾರ 2022-23ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪ್ರಾಥಮಿಕ ಶಾಲಾ ವಿಭಾಗದಿಂದ 20 ಶಿಕ್ಷಕರು ಮತ್ತು ಪ್ರೌಢ ಶಾಲಾ ವಿಭಾಗದಿಂದ 11 ಶಿಕ್ಷಕರು ಆಯ್ಕೆಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಶಿಕ್ಷಕಿಯರಿಗೆ 'ಮಾತೆ ಸಾವಿತ್ರಿಬಾಯಿ ಫುಲೆ' ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸೆ.5ರಂದು ಶಿಕ್ಷಣ ಇಲಾಖೆಯು ನಡೆಸಲಿರುವ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.


ಇದನ್ನೂ ಓದಿ:  ಮುರುಘಾ ಶ್ರೀ ಲೈಂಗಿಕ ದೌರ್ಜನ್ಯ ಪ್ರಕರಣ : ಬಸವಶ್ರೀ ಪ್ರಶಸ್ತಿ ವಾಪಸ್ ಮಾಡಿದ ಪಿ. ಸಾಯಿನಾಥ್


ಇನ್ನು ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ, ಮುಖ್ಯ ಶಿಕ್ಷಕ ಹಾಗೂ ವಿಶೇಷ ಶಿಕ್ಷಕರಿಗೆ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ವತಿಯಿಂದ ತಲಾ 10 ಸಾವಿರ ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಎಚ್‌.ಎಸ್‌. ಶಿವಕುಮಾರ್‌ ತಿಳಿಸಿದ್ದಾರೆ.


ಪ್ರಾಥಮಿಕ ಶಾಲಾ ವಿಭಾಗದ ಶಿಕ್ಷಕರ ಹೆಸರು ಜಿಲ್ಲೆ
ಕೆ.ವಿ.ಸುದರ್ಶನ  ಬೆಂಗಳೂರು ಉತ್ತರ
 
ಹೆಚ್.ಎಲ್.ಚಂದ್ರಶೇಖರ ಚಿಕ್ಕಬಳ್ಳಾಪುರ
ಅಪ್ಪಸಾಹೇಬ ವಸಂತಪ್ಪ ಗಿರೆಣ್ಣವರ ಚಿಕ್ಕೋಡಿ
ಶಿವಾನಂಪ್ಪ ಬಿ. ಶಿವಮೊಗ್ಗ
ಹುಸೇನಸಾಬ್ ಕಲಬುರಗಿ
ಮಂಜುನಾಥ ಶಂಕರಪ್ಪ ಮುಂಗೂಣಿ ಧಾರವಾಡ
ಅಮಿತಾನಂದ ಹೆಗ್ಡೆ ದಕ್ಷಿಣ ಕನ್ನಡ
ಕವಿತಾ ಈ. ಚಿತ್ರದುರ್ಗ
ಈಶ್ವರಪ್ಪ ಅಂದಾನಪ್ಪ ರೇವಡಿ ಗದಗ
ಸುಧಾಕರ ಗಣಪತಿ  ಶಿರಸಿ
ಚಂದ್ರಶೇಖರ ರೆಡ್ಡಿ ಮಧುಗಿರಿ ಶೈಕ್ಷಣಿಕ ಜಿಲ್ಲೆ
ಗಂಗಾಧರಪ್ಪ ಬಿ.ಆರ್. ಚಿಕ್ಕಮಗಳೂರು
ಬಸವರಾಜ ಜಾಡರ ರಾಯಚೂರು
ವಿದ್ಯಾ ಕಂಪಾಪೂರ ಮಠ ಕೊಪ್ಪಳ
ಸುಶೀಲಬಾಯಿ ಬೆಳಗಾವಿ
ನಿರಂಜನ ಪಿ.ಜೆ ವಿಜಯನಗರ
ಚಂದ್ರಕಲಾ ಯಾದಗಿರಿ
ಫಿರೆಂಗಪ್ಪ ಸಿದ್ದಪ್ಪ ಕಟ್ಟಿಮನಿ ಬಾಗಲಕೋಟೆ
ಸಂಜೀವ ದೇವಾಡಿಗ ಉಡುಪಿ
ಕೊಟ್ರಪ್ಪ ವಿರೂಪಾಕ್ಷಪ್ಪ ಮೇಲ್ಮುರಿ  ಹಾವೇರಿ

 


ಪ್ರೌಢಶಾಲಾ ವಿಭಾಗದ ಶಿಕ್ಷಕರ ಹೆಸರು ಜಿಲ್ಲೆ
ಮಹೇಶ್.ಕೆ.ಎನ್ ಚಿತ್ರದುರ್ಗ
ಕೀರ್ತಿ ಬಸಪ್ಪ ಚಿಕ್ಕಬಳ್ಳಾಪುರ
ಇಬ್ರಾಹಿಂ ಕೊಡಗು
ಡಾ.ಚೇತನ್ ಬಣಕಾರ್ ವಿಜಯನಗರ
ಬಾಲಸುಬ್ರಹ್ಮಣ್ಯ ಮಂಡ್ಯ
ರಘು ಶಿವಮೊಗ್ಗ
ಸುನೀಲ ಪರೀಟ ಬೆಳಗಾವಿ
ಅರುಣಾ ಜೂಡಿ ಕೊಪ್ಪಳ
ನಾರಾಯಣ ಪರಮೇಶ್ವರ ಶಿರಸಿ
ರಾಧಾಕೃಷ್ಣ ದಕ್ಷಿಣ ಕನ್ನಡ
ಭೀಮಪ್ಪ ರಾಯಚೂರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.