ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಭಾರತೀಯ ಜನತಾ ಪಕ್ಷ ಫೆ.26ರಿಂದ 'ಕಮಲ ಜ್ಯೋತಿ' ಅಭಿಯಾನವನ್ನು ಪ್ರಾರಂಭಿಸಿದೆ. ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಿವಾಸದ ಮುಂಭಾಗ ರಂಗೋಲಿಯಲ್ಲಿ ಬಿಡಿಸಲಾಗಿದ್ದ ಕಮಲ ಚಿತ್ರದಲ್ಲಿ ದೀಪ ಬೆಳಗಿಸುವ ಮೂಲಕ 'ಕಮಲ ಜ್ಯೋತಿ' ಅಭಿಯಾನಕ್ಕೆ ಚಾಲನೆ ಬಿಎಸ್ ವೈ ಚಾಲನೆ ನೀಡಿದರು.


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿ ಕೇಂದ್ರ ಸರಕಾರದ ಯೋಜನೆಗಳ ಫಲಾನುಗಳ ಮನೆಗಳಿಗೆ ಪಕ್ಷದ ಮುಖಂಡರೊಂದಿಗೆ ಭೇಟಿ ನೀಡಿ ದೀಪ ಹಚ್ಚಿದರು. ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳ ಬಗ್ಗೆ ಜನರಲ್ಲಿ  ತಿಳಿವಳಿಕೆ ಮೂಡಿಸುವ ಮೂಲಕ ಕಮಲ ದೀಪ ಹಚ್ಚೋಣ, ಮತ್ತೊಮ್ಮೆ ಮೋದಿ ಸರಕಾರ ಅಧಿಕಾರಕ್ಕೆ ತರುವ ಸಂಕಲ್ಪ ಮಾಡೋಣ ಎಂದು ಬಿಎಸ್ ವೈ ಇದೇ ವೇಳೆ ತಿಳಿಸಿದರು.



ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿರುವ ಜನಪರ ಕಾರ್ಯಕರ್ಮಗಳ ಬಗ್ಗೆ ಜನರಿಗೆ ತಿಳಿಸಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.


ದೇಶದಲ್ಲಿ ಮತ್ತೊಮ್ಮೆ ಕಮಲ ಜ್ಯೋತಿ ಬೆಳಗಲಿದೆ! 
ಬೆಂಗಳೂರಿನ ರಾಧಾಕೃಷ್ಣ ದೇವಸ್ಥಾನ ಸಂಜಯ್ ನಗರ, ಹೆಬ್ಬಾಳ ಬಳಿ ಮಹಿಳಾ ಕಾರ್ಯಕರ್ತರಿಂದ 'ಕಮಲ ಜ್ಯೋತಿ' ರಂಗೋಲಿ ಚಿತ್ತಾರದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಭಾಗಿಯಾದರು.