ಬೆಂಗಳೂರು: ಮೊದಲು ಸರಕಾರದ ವಿರುದ್ಧ, ನನ್ನ ವಿರುದ್ಧ ಟೀಕೆ ಮಾಡುವುದನ್ನು ನಿಲ್ಲಿಸಿ, ಸ್ವಲ್ಪ ಕಾಲಾವಕಾಶ ನೀಡಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾಧ್ಯಮದವರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿ ಕರ್ನಾಟಕ ವಿಕಲಚೇತನ ಸೇವಾ ಸಂಸ್ಥೆ ಒಕ್ಕೂಟ ಆಯೋಜಿಸಿದ್ದ ಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 


'ಮಾಧ್ಯಮಗಳು ವಿಷಯ ಏನೂ ಇಲ್ಲದಿದ್ದರೂ ಸುದ್ದಿ ಮಾಡುತ್ತಿದ್ದೀರಿ. ನಾನು ಜನಸಾಮಾನ್ಯರ ಪರವಾಗಿರುವ ಮುಖ್ಯಮಂತ್ರಿ. ನಾನೇನು ವಿದ್ಯುತ್‌ ತೆರಿಗೆಯನ್ನು 10 ರೂಪಾಯಿ ಮಾತ್ರ ಏರಿಕೆ ಮಾಡಿದ್ದೇನೆ. ಬಡವರೂ ಕೂಡ 20 ರೂಪಾಯಿ ಕೊಟ್ಟು ಮಿನರಲ್‌ ವಾಟರ್‌ ಖರೀದಿಸುತ್ತಾರೆ' ಎಂದು ತನ್ನ ಸರ್ಕಾರ ತೆರಿಗೆ ಹೆಚ್ಚಳದ ಕ್ರಮವನ್ನು ಸಮರ್ಥಿಸಿಕೊಂಡರಲ್ಲದೆ, ಅನಾವಶ್ಯಕವಾಗಿ ಮಾಧ್ಯಮಗಳು ಜನರ ನಡುವೆ ಕಂದಕ ಸೃಷ್ಟಿಸುತ್ತಿವೆ, ಅನುಮಾನ ಮೂಡಿಸುತ್ತಿವೆ ಎಂದು ಕಿಡಿ ಕಾರಿದರು.


'ನಾನು ಇನ್ನೂ ಮುಖ್ಯಮಂತ್ರಿಯಾಗಿ 2 ತಿಂಗಳುಗಳಷ್ಟೇ ಕಳೆದಿದೆ. ಅಷ್ಟಕ್ಕೂ ನಾನೇನು ಅನ್ಯಾಯ ಮಾಡಿದ್ದೇನೆ? ನನ್ನ ಮೇಲೆ ನಿಮಗೇಕೆ ಇಷ್ಟು ಕೋಪ? ನನಗೆ ಕಾಲಾವಕಾಶ ನೀಡಿ. ಜನಪರ ಯೋಜನೆಗಳನ್ನು ಕೈಗೊಳ್ಳಲು ಅವಕಾಶ ನೀಡಿ. ಅದನ್ನು ಬಿಟ್ಟು ಇಲ್ಲಸಲ್ಲದ ಪ್ರಚಾರ ಮಾಡುವುದನ್ನು ನಿಲ್ಲಿಸಿ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.