ಧಾರವಾಡ  : ಅವರು ಒಂದೇ ಗ್ರಾಮದಲ್ಲಿ ಮೂರು ದಶಕಗಳ‌ ಕಾಲ‌ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದವರು. ಇದೀಗ ಬೇರೆ ಕಡೆ ವರ್ಗಾವಣೆಯಾಗಿದೆ.ಈ ಶಿಕ್ಷಕಿಯ  ವರ್ಗಾವಣೆ ಮಕ್ಕಳ ಕಣ್ಣಲ್ಲಿ ಕಣ್ಣೀರು ತರಿಸಿದೆ. 


COMMERCIAL BREAK
SCROLL TO CONTINUE READING

ಶಿಕ್ಷಕಿಯನ್ನು ತಬ್ಬಿಕೊಂಡು ಕಣ್ಣೀರು ಹಾಕುತ್ತಿರುವ ವಿದ್ಯಾರ್ಥಿನಿಯರು,ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ಗೋಗರೆಯುತ್ತಿರುವ ದೃಶ್ಯ ಎಂಥವರ ಮನಸ್ಸನ್ನು ಕಲಕುವಂತೆ ಇತ್ತು. ಈ ದೃಶ್ಯ ಕಂಡುಬಂದಿದ್ದು ಧಾರವಾಡ ತಾಲೂಕಿನ ಮುಮ್ಮಿಗಟ್ಟಿಯಲ್ಲಿ.  ಹೀಗೆ ಮಕ್ಕಳ ಪ್ರೀತಿಗೆ ಪಾತ್ರವಾಗಿರುವ ಗೀತಾ ಬೆಟಗೇರಿ ಅಂತಾ.ಮುಮ್ಮಿಗಟ್ಟಿ ಗ್ರಾಮದ ಶಾಲೆಗೆ 1994ರಲ್ಲಿ ದೈಹಿಕ ಶಿಕ್ಷಕಿಯಾಗಿ ಬಂದಿದ್ದರು. ಸುದೀರ್ಘ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ‌.ಆದರೆ, ಈಗ  ಧಾರವಾಡದ ಗಾಂಧಿನಗರ ಬಡಾವಣೆಯ ಸರ್ಕಾರಿ ಶಾಲೆ ನಂ. 5 ಕ್ಕೆ ವರ್ಗಾವಣೆಯಾಗಿದೆ.ಹೀಗಾಗಿ ಶಾಲೆ ಆವರಣದಲ್ಲಿ ಬೀಳ್ಕೊಡುವ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭದುದ್ದಕ್ಕೂ ಗ್ರಾಮದ ಅನೇಕರು ಗೀತಾರವರ ಸೇವೆಯನ್ನು ಸ್ಮರಿಸಿ ಭಾವುಕಗೊಂಡಿದ್ದರು.ಕಾರ್ಯಕ್ರಮ ಮುಗಿಸಿ ಇನ್ನೆನ್ನು ಗೀತಾ ಅವರು ವೇದಿಕೆಯಿಂದ ನಿರ್ಗಮಿಸುವಷ್ಟರಲ್ಲಿ ಮಡುಗಟ್ಟಿದ ದುಃಖ ಒಮ್ಮೆಲೆ ಸ್ಟೋಟಗೊಂಡಂತೆ ಮಕ್ಕಳು ಕಣ್ಣೀರ ಧಾರೆ ಹರಿಸಿದ್ದಾರೆ.


ಇದನ್ನೂ ಓದಿ : ಪಶ್ಚಿಮ ಘಟ್ಟದಲ್ಲಿ ಭೂ ಪರಿವರ್ತನೆಗೆ ತಾತ್ಕಾಲಿಕ ತಡೆ: ಅರಣ್ಯ ಸಚಿವ ಈಶ್ವರ ಖಂಡ್ರೆ


ಗೀತಾ ಅವರು ದೈಹಿಕ ಶಿಕ್ಷಕಿಯಾಗಿದ್ದರೂ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣದ ಹೊರತಾಗಿ ಮಾರ್ಗದರ್ಶನ ಮಾಡುತ್ತ ಬಂದಿದ್ದರು.ಅಲ್ಲದೇ ಎಷ್ಟೋ ವಿದ್ಯಾರ್ಥಿನಿಯರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನೂ ಸಹ ಗೀತಾರ ಮುಂದೆ ಹೇಳಿಕೊಳ್ಳುತ್ತಿದ್ದರು. ಆ ರೀತಿ ಕೇವಲ ಶಿಕ್ಷಕಿಯಾಗಿಯಲ್ಲ. ಹೆಣ್ಣುಮಕ್ಕಳಿಗೆ ಓರ್ವ ತಾಯಿಯಾಗಿ, ಸ್ನೇಹಿತೆಯಾಗಿ,ಸಹೋದರಿಯಾಗಿ ನಿಂತಿದ್ದರು. ಇನ್ನು ಈ ಶಾಲೆಯಲ್ಲಿ 1 ರಿಂದ 10 ತರಗತಿವರೆಗೂ ಕ್ಲಾಸ್ ಗಳಿವೆ. ಶಿಕ್ಷಕಿ ಗೀತಾ ಅವರು ಸೇವೆಗೆ ಬಂದಾಗ ವಿದ್ಯಾರ್ಥಿಗಳಾಗಿದ್ದ ಅದೆಷ್ಟೂ ಹಳೇ ವಿದ್ಯಾರ್ಥಿಗಳಿಗೆ ಮದುವೆಯಾಗಿ ಅವರ ಮಕ್ಕಳೂ ಸಹ ಇವರಲ್ಲಿಯೇ ಕಲಿತಿದ್ದಾರೆ‌. ಹೀಗಾಗಿ ಇಡೀ ಗ್ರಾಮಕ್ಕೂ ಇವರು ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರು. 


ಆದ್ದರಿಂದ ಗ್ರಾಮದಲ್ಲಿ ಸಾರೋಟದ ಮೇಲೆ ಅದ್ಧೂರಿ ಮೆರವಣಿಗೆ ಮಾಡಿ ತಮ್ಮ ಗ್ರಾಮದಿಂದ ನೆಚ್ಚಿನ ಶಿಕ್ಷಕಿಯನ್ನು ಮುಂದಿನ ಸೇವೆಗೆ ಕಳುಹಿಸಿಕೊಟ್ಟಿದ್ದಾರೆ. ನಿತ್ಯ ಧಾರವಾಡದಿಂದ ಬಂದು ಹೋಗುತ್ತಿದ್ದ ಗೀತಾ ಅವರ ಸೇವಾವಧಿ ಇನ್ನು ಐದು ವರ್ಷ ಇದೆ.ಆದರೆ ಆರೋಗ್ಯದ ಸಮಸ್ಯೆಗಳ ಕಾರಣಕ್ಕೆ ಓಡಾಡೋದಕ್ಕೂ ಆಗುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ನಗರ ಪ್ರದೇಶಕ್ಕೆ ವರ್ಗಾವಣೆಯಾಗಿದ್ದಾರೆ. 


ಇದನ್ನೂ ಓದಿ : E-vehicle ಗೆ ಬೆಂಕಿ: 1.48 ಲಕ್ಷ ರೂ. ಪರಿಹಾರವನ್ನು ನೀಡುವಂತೆ ಗ್ರಾಹಕರ ನ್ಯಾಯಾಲಯ ಆದೇಶ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.