ಬೆಂಗಳೂರು: ಹದಿನಾಲ್ಕು ವರ್ಷಗಳ ಜೈಲುವಾಸದ ನಂತರವೂ ಕೂಡ ವೈದ್ಯರಾಗಬೇಕೆಂಬ ತಮ್ಮ ಕನಸನ್ನು ಈಡೇರಿಸುವಲ್ಲಿ ಸುಭಾಷ್ ಪಾಟೀಲ್ ಯಶಸ್ವಿಯಾಗಿದ್ದಾರೆ.1997 ರಲ್ಲಿ ಎಂಬಿಬಿಎಸ್ ಮಾಡುವಾಗ ಕಲಬುರಗಿಯ ಅಫ್ಜಲ್‌ಪುರದ 40 ವರ್ಷದ ವ್ಯಕ್ತಿಯನ್ನು ಕೊಲೆ ಪ್ರಕರಣವೊಂದರಲ್ಲಿ ಬಂಧಿಸಲಾಯಿತು.


COMMERCIAL BREAK
SCROLL TO CONTINUE READING

"ನಾನು 1997ರಲ್ಲಿ ಎಂಬಿಬಿಎಸ್ಗೆ ಸೇರಿಕೊಂಡೆ.ಆದರೆ, ನಾನು 2002 ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದೆ. ಜೈಲಿನ ಒಪಿಡಿಯಲ್ಲಿ ಕೆಲಸ ಮಾಡಿದ್ದೇನೆ ಮತ್ತು ಉತ್ತಮ ನಡವಳಿಕೆಗಾಗಿ 2016 ರಲ್ಲಿ ಬಿಡುಗಡೆಯಾಗಿದ್ದೆ. 2019ರಲ್ಲಿ ನನ್ನ ಎಂಬಿಬಿಎಸ್ ಪೂರ್ಣಗೊಳಿಸಿದೆ" ಎಂದು ಪಾಟೀಲ್ ಹೇಳಿದರು.ಈ ತಿಂಗಳ ಆರಂಭದಲ್ಲಿ, ಪಾಟೀಲ್ ಎಂಬಿಬಿಎಸ್ ಕೋರ್ಸ್ ಪದವಿ ಪಡೆಯಲು ಒಂದು ವರ್ಷದ ಕಡ್ಡಾಯ ಇಂಟರ್ನ್‌ಶಿಪ್ ಪೂರೈಸಿದರು.



ಸುಭಾಷ್ ಪಾಟೀಲ್ ಎಂಬಿಬಿಎಸ್ ಕೋರ್ಸ್‌ನ ಮೂರನೇ ವರ್ಷದಲ್ಲಿದ್ದಾಗ ಕೊಲೆ ಪ್ರಕರಣವೊಂದರಲ್ಲಿ ಪೊಲೀಸರು 2002 ರಲ್ಲಿ ಅವರನ್ನು ಬಂಧಿಸಿದ್ದರು. ನ್ಯಾಯಾಲಯವು 2006 ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತು. ನಂತರ ಅವರನ್ನು ಜೈಲಿಗೆ ತಳ್ಳಲಾಯಿತು. ಆದರೆ ವೈದ್ಯನಾಗಬೇಕೆಂಬ ತನ್ನ ಬಾಲ್ಯದ ಕನಸನ್ನು ಅವರು ಬಿಡದೆ ಪೂರೈಸಿದ್ದಾರೆ.ಪಾಟೀಲ್ ಅವರ ಉತ್ತಮ ನಡವಳಿಕೆಗಾಗಿ 2016 ರಲ್ಲಿ ಪೊಲೀಸರು ಸ್ವಾತಂತ್ರ್ಯ ದಿನದಂದು ಅವರನ್ನು ಬಿಡುಗಡೆ ಮಾಡಲಾಯಿತು.