ಮಂಡ್ಯ : ಜಿಲ್ಲೆಯಲ್ಲಿ ಅವಧಿಗೂ ಮುನ್ನವೇ ಕಬ್ಬು ಅರೆಯುವ ಕಾರ್ಯವನ್ನು  ಸ್ಥಗಿತಗೊಳಿಸಲಾಗಿದೆ. ಕಳೆದ ವರ್ಷ ಸೆಪ್ಟಂಬರ್ ತಿಂಗಳಿಲ್ಲಿ ಆರಂಭವಾಗಿ ಫೆಬ್ರವರಿ-2023 ರವರೆಗೆ ಕಬ್ಬು ಅರೆಯಬೇಕಿದ್ದ ಕಾರ್ಖಾನೆಯಲ್ಲಿ ದಿಢಿರನೆ ಸ್ಥಗಿತಗೊಳಿಸಿದೆ.


COMMERCIAL BREAK
SCROLL TO CONTINUE READING

 ಅವಧಿಗೂ ಮುನ್ನವೇ ಕಬ್ಬು ಅರೆಯುವ ಕಾರ್ಯನಿಲ್ಲಿಸಿರುವುದರಿಂದ ರೈತರನ್ನು  ಆತಂಕ್ಕೆ ಈಡು ಮಾಡಿದೆ..ಮೈಷುಗರ್‌ ಪುನಶ್ಚೇತನ ವಿಚಾರವನ್ನು ಬಾಯಿಮಾತಿನಲ್ಲಷ್ಟೇ ಹೇಳುವ ಮುಖ್ಯಮಂತ್ರಿಗಳು ಹಾಗೂ ಸಚಿವರು ಕಾರ್ಖಾನೆಗೆ ಅಗತ್ಯವಿರುವ ಹಣಕಾಸಿನ ನೆರವು ನೀಡುವುದಕ್ಕೆ ಮೀನಮೇಷ ಎಣಿಸುವುದು ಸಾಮಾನ್ಯವಾಗಿದೆ.


ಇದನ್ನೂ ಓದಿ: ಬಿಳಿಗಿರಿರಂಗನ ಬೆಟ್ಟದಲ್ಲಿ ಹೊಸ ಕೀಟ ಪತ್ತೆ, ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಗೋಚರ


 ಪ್ರತಿನಿತ್ಯ ಕನಿಷ್ಠ 1 ಸಾವಿರ ಟನ್ ಕಬ್ಬು ಅರೆಯುವ ಗುರಿ ಇಟ್ಟುಕೊಂಡಿತ್ತು ಆದರೆ ಕಾರ್ಖಾನೆಯ ಬೇಡಿಕೆಗೆ ತಕ್ಕ ಹಾಗೆ  ಕಬ್ಬು ಸರಬರಾಜು ಆಗಿಲ್ಲ.ಇದರ ಜೊತೆಯಲ್ಲೆ  ಮುಂದಿನ ವರ್ಷದ ಸಿದ್ದತೆಗೆ ಅರೆಯುವಿಕೆ ಕಾರ್ಯ ನಿಂತಿದೆ . ಇದರಿಂದ ಈ ಭಾಗದ ರೈತರು ಸಂಕಷ್ಟಕ್ಕಿಡಾಗಿದ್ದಾರೆ.  ಈ ಮೊದಲೇ ಕೊರೊನಾದಿಂದ ಆರ್ಥಿಕವಾಗಿ ಜರ್ಝರಿತರಾಗಿರುವ ರೈತರಿಗೆ ತಾವು ಬೆಳೆದ ಕಬ್ಬು ಬೆಳೆ ಕಟಾವಾಗಿ, ಸಕಾಲದಲ್ಲಿ ಹಣ ಸಿಗದಿದ್ದರೆ ಆರ್ಥಿಕವಾಗಿ ಇನ್ನಷ್ಟು ದೊಡ್ಡ ಹೊಡೆತ ಅನುಭವಿಸಲಿದ್ದಾರೆ.


ಇದನ್ನೂ ಓದಿ:ದೇವರ ಮಾತು ಕೇಳಿ ವಿಚ್ಛೇದನಕ್ಕೆ ಮುಂದಾದ ಜೋಡಿ, ಮುಂದೆ...


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.