ಬೆಂಗಳೂರು: ಮಂಡ್ಯದ ನನ್ನ ಬಂಧುಗಳೇ ಯಾರಿಗೂ ಯಾವುದೇ ತರದ ಗೊಂದಲಗಳು ಬೇಡ. ನಾನು ಎಲ್ಲಾ ರೀತಿಯ ಆಗು ಹೋಗುಗಳನ್ನು ನಿರೀಕ್ಷೆ ಮಾಡಿಯೇ ಚುನಾವಣಾ ಕಣಕ್ಕೆ ಇಳಿದಿದ್ದೇನೆ. ಈ ಚುನಾವಣೆ ನನಗಾಗಿ ಅಲ್ಲ. ನನ್ನ ಅಂಬರೀಶ್ ರನ್ನು ಹೃದಯದಿಂದ ಪ್ರೀತಿಸುತ್ತಿದ್ದ ಜನರಿಗಾಗಿ ಎಂದು ಸುಮಲತಾ ಅಂಬರೀಶ್ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಾಮಾಣಿಕತೆಗೆ ಮೊಸವೆಸಗುವ ರಾಜಕೀಯ ನನಗೆ ಬೇಕಾಗಿಲ್ಲ: 
ಅಂಬರೀಶ್ ರನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಮಂಡ್ಯದ ಪ್ರತಿಯೊಬ್ಬರೂ ಅಂಬರೀಶ್ ಬಂಧುಗಳು... ಏಕೆಂದರೆ ಅಂಬರೀಶ್ ರಲ್ಲಿ ಇರುವ ಗುಣವೇ ಮಂಡ್ಯದ ಜನರಲ್ಲಿ ಇದೇ. ಮಂಡ್ಯದ ಮಣ್ಣಿನ ಗುಣದಲ್ಲಿ ಕಪತವೆ ಇಲ್ಲ, ಸುಳ್ಳುಗಳಿಲ್ಲ. ಸಮಯ ಬಂದಾಗ ಸಮಯಕ್ಕೆ ತಕ್ಕ ಹಾಗೆ ಮಾತನಾಡುವ ಜಾಯಮಾನ ಮಂಡ್ಯದ ಮಣ್ಣಿನಲ್ಲಿ ಇಲ್ಲ ಎಂದು ಹೊಗಳಿರುವ ಸುಮಲತಾ, ಮಂಡ್ಯದ ಮಣ್ಣು ಬರಿ ಮುಗ್ಧತೆಯಿಂದ ಕೂಡಿಲ್ಲ. ಅದು ಪ್ರಾಮಾಣಿಕತೆಯಿಂದಲೂ ಕೂಡಿದೆ. ಆ ಪ್ರಾಮಾಣಿಕತೆಗೆ ಮೊಸವೆಸಗುವ ರಾಜಕೀಯ ನನಗೆ ಬೇಕಾಗಿಲ್ಲ. ನನ್ನದು ಪ್ರಾಮಾಣಿಕವಾದ ಅಂಬರೀಶ್ ಪಾಲಿಸುತ್ತಿದ್ದ ರಾಜಕೀಯ. ಮಂಡ್ಯದ ಜನರ ರಾಜಕೀಯ ಎಂದಿದ್ದಾರೆ.


ರೈತರ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಮೊದಲು ಬಿಡಬೇಕು:
ಇನ್ನು ಇದೇ ವೇಳೆ ಮತ್ತೊಂದು ಪೋಸ್ಟ್ ನಲ್ಲಿ ಪರೋಕ್ಷವಾಗಿ ಜೆಡಿಎಸ್ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸುಮಲತಾ ಅಂಬರೀಶ್, ರೈತರ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಮೊದಲು ಬಿಡಬೇಕು. ರೈತರ ಕಷ್ಟಗಳನ್ನೂ ಪ್ರಾಮಾಣಿಕವಾಗಿ ಅರ್ಥ ಮಾಡಿಕೊಳ್ಳುವ, ಆ ಕಷ್ಟಗಳಿಗೆ ಪರಿಹಾರವನ್ನು ಹುಡುಕುವ ಪ್ರಯತ್ನ ಆಗಬೇಕಾಗಿದೆ. ಬರೀ ಬಾಯಿ ಮಾತಿನಲ್ಲಿ ರೈತರ ಬಗ್ಗೆ ಮಾತನಾಡುತ್ತಾ ಹೋಗುವುದು ರೈತರಿಗೆ ಮಾಡುವ ಆನ್ಯಾಯ. ರೈತರಿಗೆ ಭರವಸೆ ಕೊಡುವ ರಾಜಕೀಯ ಮಾಡದೆ ಅವರ ಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ರಾಜಕೀಯ ಮಾಡೋಣ ಎಂದು ಕರೆ ನೀಡಿದ್ದಾರೆ.



ನನ್ನ ಜನರಿಗಾಗಿ ನನ್ನ ಹೆಜ್ಜೆ ಎಂದಿರುವ ಸುಮಲತಾ, ನಾವೇನಾದರೂ ಒಳ್ಳೆಯದನ್ನು ಬಯಸಿದಾಗ, ಆ ಒಳ್ಳೆಯತನಕ್ಕೆ ಅಡೆತಡೆಗಳು ಸಹಜವಾಗಿ ಬರುತ್ತದೆ. ಆದರೆ ಅಡೆತಡೆಗಳನ್ನೂ ಮೆಟ್ಟಿ ಮುಂದಕ್ಕೆ ಸಾಗುಅ ಶಕ್ತಿ ನನಗೆ ಮಂಡ್ಯದ ಜನ ಮತ್ತು ನನ್ನ ಅಂಬರೀಶ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ.