UPSC ಪೂರ್ವಭಾವಿ ಪರೀಕ್ಷೆ : ಭಾನುವಾರ ಬೆಳಗ್ಗೆ 6 ರಿಂದ ಮೆಟ್ರೋ ಸೇವೆ
ಮೇ 28 ರಂದು ಕೇಂದ್ರ ಲೋಕ ಸೇವಾ ಆಯೋಗದ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ನಡೆಯಲಿದ್ದು, ಅಂದು ನಮ್ಮ ಮೆಟ್ರೊ ರೈಲುಗಳ ಸಂಚಾರ ಬೆಳಿಗ್ಗೆ 6 ರಿಂದಲೇ ಆರಂಭವಾಗಲಿದೆ.
ಬೆಂಗಳೂರು : ಕೇಂದ್ರ ಲೋಕ ಸೇವಾ ಆಯೋಗದ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಮೇ 28 ರಂದು ನಡೆಯುಲಿದ್ದು ಅಭ್ಯರ್ಥಿಗಳ ಅನುಕೂಲಕ್ಕಾಗಿ ಅಂದು ನಮ್ಮ ಮೆಟ್ರೊ ರೈಲುಗಳ ಸಂಚಾರ ಬೆಳಿಗ್ಗೆ 6 ರಿಂದಲೇ ಆರಂಭವಾಗಲಿದೆ ಎಂದು ಬಿ.ಎಂ.ಆರ್.ಸಿ.ಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಮಾನ್ಯವಾಗಿ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ನಮ್ಮ ಮೆಟ್ರೋ ಸಂಚಾರ ಆರಂಭವಾಗುತ್ತಿತ್ತು ಆದರೆ ದೂರದ ಊರುಗಳಿಂದ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ಗಂಟೆ ಮುಂಚಿತವಾಗಿ ರೈಲುಗಳ ಸಂಚಾರ ಆರಂಭಿಸಲಾಗುತ್ತಿದೆ ಎಂದು ಹೇಳಿದೆ.
ಇದನ್ನೂ ಓದಿ: ನೂತನ ಸಂಸತ್ ಭವನದಲ್ಲಿ ಸ್ವರ್ಣ ಖಚಿತ ʼಸೆಂಗೋಲ್ʼ..! ʼರಾಜದಂಡ ರಹಸ್ಯ..ʼ ಇಲ್ಲಿದೆ
ನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗೇರಿ, ಬೈಯಪ್ಪನಹಳ್ಳಿ, ಕೆ.ಆರ್.ಪುರ ಮತ್ತು ವೈಟ್‌ಫೀಲ್ಡ್ ನಿಲ್ದಾಣಗಳಿಂದ ಮೊದಲ ರೈಲುಗಳು ಬೆಳಿಗ್ಗೆ 6 ಗಂಟೆಗೆ ಹೊರಡಲಿವೆ ಎಂದು ನಮ್ಮ ಮೆಟ್ರೋ ಸಂಸ್ಥೆ ಪತ್ರಿಕಾ ಪ್ರಟಣೆಯಲ್ಲಿ ಮಾಹಿತಿ ನೀಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ