Who is Strategist Sunil Kanugolu, Karnataka Election 2023: ಕರ್ನಾಟಕದಲ್ಲಿ ಮತದಾನ, ಮತ ಎಣಿಕೆ ಮುಗಿದು ಇದೀಗ ಹೊಸ ಸರ್ಕಾರದ ಹೊಸ ಪರ್ವ ಶುರುವಾಗಲಿದೆ. ಸದ್ಯ ಇವೆಲ್ಲದರ ಮಧ್ಯೆ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬೆಲ್ಲಾ ಗೊಂದಲಗಳು ಕಾಂಗ್ರೆಸ್ ಪಕ್ಷದಲ್ಲಿದ್ದು, ಕರುನಾಡಿನಲ್ಲಿ ಭಾರೀ ಕುತೂಹಲ ಮೂಡಿಸಿದೆ.


COMMERCIAL BREAK
SCROLL TO CONTINUE READING

ಕರ್ನಾಟಕದಲ್ಲಿ ಶನಿವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ 136 ಸ್ಥಾನಗಳೊಂದಿಗೆ ಗೆಲುವು ಸಾಧಿಸಿದೆ. ಆದರೆ ಈ ಬಾರಿ ಕಾಂಗ್ರೆಸ್ ಗೆಲುವಿನ ಹಿಂದೆ 41 ವರ್ಷದ ಸುನೀಲ್ ಕನುಗೋಲು ಎಂಬವರ ಶಕ್ತಿ ಅಡಗಿತ್ತು ಅಂತಾ ಯಾರಿಗಾದರೂ ತಿಳಿದಿತ್ತೇ? ಹೌದು ಕಾಂಗ್ರೆಸ್ ಸದಸ್ಯ ಕಾನುಗೋಲು ಪ್ರಚಾರದ ರೂಪುರೇಷೆ ಸಿದ್ಧಪಡಿಸಿ ಕೊನೆವರೆಗೂ ಪಕ್ಷಕ್ಕಾಗಿ ಹೋರಾಡಿದ್ದಾರೆ.


ಮೂಲತಃ ತೆಲುಗಿನವರಾದ ಸುನೀಲ್ ಕನುಗೋಲು ಅವರು ಬೆಳದಿದ್ದು ಕರ್ನಾಟಕದಲ್ಲಿ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ, ವ್ಯಾಪಾರಿ ಕುಟುಂಬದಿಂದ ಬಂದ ಅವರು ಈ ಹಿಂದೆ ಬಿಜೆಪಿ, ಡಿಎಂಕೆ, ಎಐಎಡಿಎಂಕೆ ಪಕ್ಷಗಳಲ್ಲಿ ಕೆಲಸ ಮಾಡಿದ್ದರು. ಕಳೆದ ವರ್ಷ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿ ಕಾಂಗ್ರೆಸ್ ಸೇರಿದ್ದರು.


ಕಾನುಗೋಲು ಅವರ ಆಪ್ತ ಮೂಲಗಳ ಪ್ರಕಾರ, ಪಕ್ಷದ ಪ್ರಮುಖ ನಾಯಕರೊಂದಿಗೆ ಸಂವಾದ ನಡೆಸಿ, ಪಕ್ಷಕ್ಕೆ ತಕ್ಕಂತೆ ತಮ್ಮ ಕೆಲಸಗಳನ್ನು ಸಂಯೋಜಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.


ಇದನ್ನೂ ಓದಿ: Karnataka Elections 2023: ಸಿದ್ದು vs ಡಿಕೆಶಿ, ಯಾರಿಗೆ ಒಲಿಯಲಿದೆ ಸಿಎಂ ಪಟ್ಟ?


ಯಾವಾಗಲೂ ಕ್ಷೇತ್ರ ಸಮೀಕ್ಷೆಗಳ ಡೇಟಾದೊಂದಿಗೆ ಶಸ್ತ್ರಸಜ್ಜಿತರಾಗಿರುವ ಸುನೀಲ್ ಕನುಗೋಲು ಅವರ ವ್ಯಕ್ತಿತ್ವ ಶಾಂತವಾಗಿದ್ದರೂ ದೃಢವಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳುತ್ತವೆ.


ಕಾನುಗೋಲು ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸುರ್ಜೆವಾಲಾ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್, ಕೆಸಿ ವೇಣುಗೋಪಾಲ್ ಸೇರಿದಂತೆ ಇತರ ಪ್ರಮುಖ ಪ್ರಚಾರ ನಾಯಕರೊಂದಿಗೆ ಬಲವಾದ ಕಾರ್ಯ ಸಂಬಂಧವನ್ನು ಹೊಂದಿದ್ದಾರೆ.


ಕೆಲವು ಚುನಾವಣಾ ಸಂದರ್ಭಗಳಲ್ಲಿ ಪಕ್ಷದ ನಾಯಕರು ತಂತ್ರಜ್ಞರು ಮತ್ತು ಅವರ ತಂಡದ ಸದಸ್ಯರೊಂದಿಗೆ ಸಿಟ್ಟು ಮಾಡಿಕೊಂಡಿರುವುದನ್ನು ನಾವು ನೋಡಿರುತ್ತೇವೆ. ಆದರೆ ಸುನೀಲ್ ಕನುಗೋಲು ವಿಚಾರದಲ್ಲಿ ಇದುವರೆಗೆ ಅಂತಹ ಸನ್ನಿವೇಶ ಎದುರಾಗಿಲ್ಲ ಎಂಬುದು ವಿಶೇಷ.


ವಿಷಯ ವಿಶ್ಲೇಷಣೆಯನ್ನು ಸರಿಯಾಗಿ ಮತ್ತು ಪಕ್ಷದ ಪರವಾಗಿ ಇಟ್ಟುಕೊಳ್ಳುವುದು ಸುನೀಲ್ ಕನುಗೋಲು ಅವರ ದೊಡ್ಡ ಶಕ್ತಿಯಾಗಿದೆ. ಮಾರ್ಕೆಟ್ ರಿಸರ್ಚ್ ಹಿನ್ನೆಲೆಯೊಂದಿಗೆ, ಅವರ ತಂಡವು ಸಾಕಷ್ಟು ಕ್ಷೇತ್ರ ಸಮೀಕ್ಷೆಗಳು, ಅತ್ಯಾಧುನಿಕ ವಿಶ್ಲೇಷಣೆ ಮತ್ತು ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂಬುದರ ನಿಖರವಾದ ವಿಶ್ಲೇಷಣೆಯನ್ನು ಹೊಂದಿರುತ್ತದೆ. ಇದರ ಮೇರೆಗೆ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿದುಬಂದಿದೆ.  


'PayCM' ಅಭಿಯಾನ:


ಕರ್ನಾಟಕದಲ್ಲಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ‘ಪೇಸಿಎಂ’ ಅಭಿಯಾನ ಆರಂಭಿಸಿದ್ದೇ ಸುನೀಲ್ ಕನುಗೋಲು. ಈ ಅಭಿಯಾನವು ನಮ್ಮ ಪಕ್ಷಕ್ಕೆ ಸರ್ಕಾರದ ಮೇಲೆ ದಾಳಿ ಮಾಡಲು ಮತ್ತು ಜನರೊಂದಿಗೆ ಸಂಪರ್ಕ ಸಾಧಿಸಲು ಸಾಕಷ್ಟು ಸಹಾಯ ಮಾಡಿತು ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು.


ಇದನ್ನೂ ಓದಿ: Photo: ನೂತನ ವಿಧಾನಸಭಾ ಸದಸ್ಯರನ್ನೊಳಗೊಂಡ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಜಲಕ್


ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಪಕ್ಷದ ಪ್ರಚಾರವನ್ನು ನಿಭಾಯಿಸುವುದು ಅವರ ತಕ್ಷಣದ ಕೆಲಸವಾಗಿದ್ದರೂ ಮುಂಬರುವ ಚುನಾವಣೆಗಳಲ್ಲಿ ಮತ್ತು 2024 ರ ಲೋಕಸಭೆ ಚುನಾವಣೆಯಲ್ಲಿ ಕಾನುಗೋಲು ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ