ಮೈಸೂರು: ಭಾರತದಲ್ಲಿ ರಸ್ತೆಗುಂಡಿಗಳ ಕಾರಣಕ್ಕೆ ಅಪಘಾತ(Accident)ಗಳಾಗುವುದು ಸಾಮಾನ್ಯ ಸಂಗತಿ. ಕೆಲವು ರಸ್ತೆಗಳ ತುಂಬಾ ಗುಂಡಿಗಳೇ ತುಂಬಿರುತ್ತವೆ. ರಸ್ತೆಯಲ್ಲಿ ಗುಂಡಿ ಇದೆಯೋ ಅಥವಾ ಗುಂಡಿಗಳಲ್ಲಿಯೇ ರಸ್ತೆ ಇದೆಯೋ ಎಂಬುವಷ್ಟರ ಮಟ್ಟಿಗೆ ನಮ್ಮ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿರುತ್ತದೆ. ರಸ್ತೆಗುಂಡಿಗಳ ಕಾರಣಕ್ಕೆ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಲೆಕ್ಕಕ್ಕಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮಾಡಬೇಕಾದ ಕೆಲಸವನ್ನು ಪೊಲೀಸ್ ಅಧಿಕಾರಿಯೊಬ್ಬರು ಮಾಡುವ ಮೂಲಕ ಮಾದರಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಎಚ್.ಡಿ.ಕೋಟೆ(HD Kote) ತಾಲೂಕು ಮತ್ತು ಚಿಕ್ಕದೇವಮ್ಮ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಮಾದಾಪುರ ಮತ್ತು ಕೆ.ಬೆಳತ್ತೂರು ಮುಖ್ಯರಸ್ತೆ ಹದಗೆಟ್ಟಿತ್ತು. ರಸ್ತೆ ತುಂಬಾ ಗುಂಡಿಗಳೇ ತುಂಬಿಕೊಂಡಿದ್ದರಿಂದ ಸಂಚರಿಸಲು ವಾಹನ ಸವಾರರು ಪರದಾಡುವಂತಾಗಿತ್ತು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಅಪಘಾತಗಳಾಗುತ್ತಿದ್ದವು. ಹೀಗಾಗಿ ಸ್ಥಳೀಯರು ಈ ಸಮಸ್ಯೆ ಬಗೆಹರಿಸುವಂತೆ ಎಚ್.ಡಿ.ಕೋಟೆ ಠಾಣೆ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಸ್. ದೊರೆಸ್ವಾಮಿಯವರಿಗೆ ಮನವಿ ಮಾಡಿಕೊಂಡಿದ್ದರು.


ಇದನ್ನೂ ಓದಿ: Caste Atrocities: 28 ವರ್ಷಗಳ ಹಿಂದೆ ಅಂತರ್ಜಾತಿ ವಿವಾಹವಾಗಿದ್ದ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ, ದೌರ್ಜನ್ಯ


ಜನಸ್ನೇಹಿ ಪೊಲೀಸ್ ಅಧಿಕಾರಿ(Police Officer)ಯಾಗಿರುವ ದೊರೆಸ್ವಾಮಿ ಮತ್ತವರ ಪತ್ನಿಚಂದ್ರಿಕಾ ಜನರ ಸಮಸ್ಯೆಗೆ ಸ್ಪಂದಿಸಿ ರಕ್ಷಣಾ ಸೇವಾ ಟ್ರಸ್ಟ್ ಮೂಲಕ 3 ಲಕ್ಷ ರೂ. ತಮ್ಮ ಸ್ವಂತ ಹಣ ಖರ್ಚು ಮಾಡಿ ರಸ್ತೆಗುಂಡಿಗಳನ್ನು ಮುಚ್ಚಿಸಿದ್ದಾರೆ. ಕೇವಲ ಸ್ವಂತ ಹಣ ಖರ್ಚು ಮಾಡಿದ್ದಲ್ಲದೆ ಗುಂಡಿ ಮುಚ್ಚುತ್ತಿದ್ದ ಕಾರ್ಮಿಕರರೊಂದಿಗೆ ದೊರೆಯಸ್ವಾಮಿಯವರು ಕೈಜೋಡಿಸಿದ್ದಾರೆ. ಸಲಿಕೆ ಹಿಡಿದು ಗುಂಡಿ ಮುಚ್ಚುವ ಕೆಲಸ ಮಾಡುವ ಮೂಲಕ ಇತರೆ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ.


‘ಸುಮಾರು 30 ಹಳ್ಳಿಗಳ ಜನರು ಈ ರಸ್ತೆಯನ್ನು ಉಪಯೋಗಿಸುತ್ತಿದ್ದಾರೆ. ರಸ್ತೆಯಲ್ಲಿ ಗುಂಡಿಗಳಿದ್ದಿದ್ದರಿಂದ ಅಪಘಾತಗಳಾಗಿ, ಅನೇಕ ಜನರು ಗಾಯಗೊಂಡಿದ್ದರು. ಕೆಲ ಆಂಬುಲೆನ್ಸ್(Ambulance) ಡ್ರೈವರ್ ಗಳು ಕೂಡ ಈ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ತಂದಿದ್ದರು. ಸಾವಿರಾರು ಜನರಿಗೆ ಉಪಯೋಗವಾಗುವ ರಸ್ತೆಯನ್ನು ಸರಿಪಡಿಸಲು ನನ್ನ ಕೈಲಾದ ಸಹಾಯ ಮಾಡಿದ್ದೇನೆ’ ಎಂದು ದೊರೆಸ್ವಾಮಿ ಹೇಳಿದ್ದಾರೆ.


ಇದನ್ನೂ ಓದಿ: COVID-19 Effect: ಕೆಲಸವಿಲ್ಲದೆ ಕನ್ನಡ ಚಿತ್ರರಂಗದ ಕಾರ್ಮಿಕರ ಪರದಾಟ


ಈ ಹಿಂದೆಯೂ ಎಚ್.ಡಿ.ಕೋಟೆ ತಾಲೂಕಿನ ಮತ್ತೊಂದು ರಸ್ತೆಯಲ್ಲಿನ ಗುಂಡಿ(Pothole)ಗಳನ್ನು ಮುಚ್ಚಿಸಲು ದೊರೆಸ್ವಾಮಿ ಸಹಾಯಹಸ್ತ ಚಾಚಿದ್ದರು. ಇದಲ್ಲದೆ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದ ಇಬ್ಬರು ಹೆಣ್ಣುಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ತಮ್ಮ ಸ್ವಂತ ಹಣದಿಂದ ದೊರೆಸ್ವಾಮಿಯವರು ಮಾಡುವ ಮೂಲಕ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ. ‘ಜನರಿಗೆ ಉಪಯೋಗವಾಗುತ್ತದೆ ಎಂದರೆ ಸ್ವಂತ ಹಣ ಬಳಸಲು ತಾವು ಹಿಂದೆಮುಂದೆ ನೋಡುವುದಿಲ್ಲ’ವೆಂದು ಹೇಳುವ ದೊರೆಸ್ವಾಮಿಯವರು ನಿಜಕ್ಕೂ ಸೂಪರ್ ಕಾಪ್(Super Cop) ಎನಿಸಿಕೊಂಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.