ನವದೆಹಲಿ: ಬಾಬಾ ಬುಡನ್ ಗಿರಿ ದತ್ತಪೀಠ ವಿವಾದಕ್ಕೆ ಕೊನೆಗೂ ಸುಪ್ರಿಂಕೋರ್ಟ್ ಅಂತ್ಯ ಹಾಡಿದೆ. 


COMMERCIAL BREAK
SCROLL TO CONTINUE READING

ಹಿಂದು ಮುಸ್ಲಿಂ ರ ಸೌಹಾರ್ದತೆ ಯನ್ನು ಕಾಪಾಡುವ ನಿಟ್ಟಿನಲ್ಲಿ ಸುಪ್ರಿಂಕೋರ್ಟ್ ಬಹುತೇಕವಾಗಿ  ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ನೀಡಿದ ವರದಿಗೆ ಅನುಗುಣವಾಗಿ ತನ್ನ ಅಂತಿಮ ತೀರ್ಪನ್ನು ನೀಡಿದೆ. ಇದರ ಅನ್ವಯ ಶ್ರೀ ಗುರು ದತ್ತಾತ್ರೇಯ ಪೀಠ ಮತ್ತು  ಬಾಬಾ ಬುಡನ್ ದರ್ಗಾದ ಆಡಳಿತವನ್ನು  ಶಾಖಾದ್ರಿಗೆ ನಿರ್ವಹಿಸಲು ಸೂಚಿಸಿದೆ. 


ಈ ಹಿಂದೆ 2015 ರಲ್ಲಿ ವಿವಾದವನ್ನು ಇತ್ಯರ್ಥ ಪಡಿಸಬೇಕೆಂದು ಸುಪ್ರಿಂ ಕೋರ್ಟ್ ಸೂಚಿಸಿತ್ತು, ಅದರಲ್ಲಿ ಪ್ರಮುಖವಾಗಿ ಎರಡು ಕೋಮುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿವಾಧವನ್ನು ಬಗೆ ಹರಿಸಿಸುವಂತೆ ರಾಜ್ಯ ಸರ್ಕಾರಕ್ಕೆ ಅದು ಸಲಹೆ ನೀಡಿತ್ತು, ಆದ್ದರಿಂದ ರಾಜ್ಯ ಸರ್ಕಾರವು ಸುಪ್ರಿಂ ಕೋರ್ಟ್ ನಿರ್ದೇಶನದ ಮೇರೆಗೆ  ನಿವೃತ್ತ ನ್ಯಾಯಮೂರ್ತಿ ನಾಗ ಮೋಹನ್ ದಾಸ್ ರವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು,ಈಗ ಈ ಸಮಿತಿ ನೀಡಿದ ವರದಿಗೆ ಸುಪ್ರಿಂ ಕೋರ್ಟ್ ಒಪ್ಪಿಗೆ ಸೂಚಿಸಿದೆ, ಆ ಮೂಲಕ ಬಹಳ ದಿನಗಳ ಕಾಲ ವಿವಾಧವಾಗಿ ಉಳಿದಿದ್ದ ಈ ವಿಷಯವನ್ನು ಸುಪ್ರಿಂಕೋರ್ಟ್ ಯಶಸ್ವಿಯಾಗಿ ಬಗೆ ಹರಿಸಿದೆ. 


ನಾಗಮೋಹನ್ ದಾಸ್ ಸಮಿತಿಯು ಸೂಚಿಸಿದ್ದ ವರದಿಯಲ್ಲಿ  ಪೂಜಾ ಕೈಂಕರ್ಯ, ನಮಾಜ್ ಸೇರಿದಂತೆ ಎಲ್ಲ ಕಾರ್ಯ ಚಟುವಟಿಕೆಗಳ ಹೊಣೆ ಶಾಖಾದ್ರಿ ನಿರ್ವಹಿಸಬೇಕೆಂದು ಪ್ರಸ್ತಾಪಿಸಿತ್ತು. ಅದರ ಅನ್ವಯ ಈಗ ಹಿಂದೂ ಮುಸ್ಲಿ ಎರಡೂ ಧರ್ಮಗಳ ಧಾರ್ಮಿಕ ಕೆಲಸಗಳನ್ನು  ಇನ್ನು ಮುಂದೆ ಸೌಹಾರ್ಧತೆಯ ಭಾಗವಾಗಿ ಶಾಖಾದ್ರಿಯು ನಿರ್ವಹಿಸಲಿದೆ ಎಂದು ಅದು ತೀರ್ಪು ನೀಡಿದೆ.