ಪೊಲೀಸ್ ಇಲಾಖೆಗೆ ಸರ್ಜರಿ: ಸಂದೀಪ್ ಪಾಟೀಲ್, ರಮನ್ ಗುಪ್ತ ಸೇರಿ 15 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು ನಗರ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ರನ್ನು ಕೆಎಸ್ಆರ್ ಪಿ ಐಜಿಪಿಯಾಗಿ ವರ್ಗಾವಣೆ ಮಾಡಿ ತೆರವಾದ ಹುದ್ದೆಗೆ ಬೆಳಗಾವಿ ಉತ್ತರ ವಲಯ ಐಜಿಯಾಗಿದ್ದ ಸತೀಶ್ ಕುಮಾರ್ ಅವರನ್ನು ನಿಯೋಜಿಸಲಾಗಿದೆ.
ಬೆಂಗಳೂರು: ಕಾಂಗ್ರೆಸ್ ಸರ್ಕಾರ ರಚನೆ ಬೆನ್ನಲ್ಲೇ ಪೊಲೀಸ್ ಇಲಾಖೆಗೆ ಭರ್ಜರಿ ಸರ್ಜರಿ ಮಾಡಲಾಗಿದ್ದು 15 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರು ನಗರ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ರನ್ನು ಕೆಎಸ್ಆರ್ ಪಿ ಐಜಿಪಿಯಾಗಿ ವರ್ಗಾವಣೆ ಮಾಡಿ ತೆರವಾದ ಹುದ್ದೆಗೆ ಬೆಳಗಾವಿ ಉತ್ತರ ವಲಯ ಐಜಿಯಾಗಿದ್ದ ಸತೀಶ್ ಕುಮಾರ್ ಅವರನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ - ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿರುವ ಸರ್ಕಾರಕ್ಕೆ ಧಿಕ್ಕಾರ
ಡಾ.ಕೆ.ರಾಮಚಂದ್ರ ರಾವ್ - ಎಡಿಜಿಪಿ,ಕರ್ನಾಟಕ ರಾಜ್ಯ ಪೊಲೀಸ್ ಅಭಿವೃದ್ಧಿ ನಿಗಮ ಬೆಂಗಳೂರು, ಮಾಲಿನಿ ಕೃಷ್ಣಮೂರ್ತಿ, ಎಡಿಜಿಪಿ, ರಾಜ್ಯ ಬಂಧೀಖಾನೆ ಇಲಾಖೆ, ಅರುಣ್ ಚಕ್ರವರ್ತಿ, ಎಡಿಜಿಪಿ ರಾಜ್ಯ ನಾಗರೀಕ ಹಕ್ಕುಗಳ ನಿರ್ದೇಶನಾಲಯ, ಮನೀಶ್ ಕರ್ಭೀಕರ್ ಎಡಿಜಿಪಿ ಆರ್ಥಿಕ ಅಪರಾಧ ವಿಭಾಗ ಸಿಐಡಿ, ಎಂ.ಚಂದ್ರಶೇಖರ್ ಎಡಿಜಿಪಿ ರಾಜ್ಯ ಆಂತರಿಕ ಭದ್ರತಾ ವಿಭಾಗ, ವಿಪುಲ್ ಕುಮಾರ್, ಐಜಿಪಿ ಹೆಚ್ಚುವರಿ ಪೊಲೀಸ್ ಆಯುಕ್ತ ಬೆಂಗಳೂರು ನಗರ ಪೂರ್ವ, ಪ್ರವೀಣ್ ಮಧುಕರ್ ಪವಾರ್ ಐಜಿಪಿ ಸಿಐಡಿ, ವಿಕಾಸ್ ಕುಮಾರ್ ವಿಕಾಸ್, ಐಜಿಪಿ ರಾಜ್ಯ ಆಂತರಿಕ ಭದ್ರತಾ ವಿಭಾಗ, ರಮಣ್ ಗುಪ್ತಾ, ಐಜಿಪಿ ಬೆಳಗಾವಿ ಉತ್ತರ ವಲಯ, ಎಸ್.ಎನ್.ಸಿದ್ದರಾಮಪ್ಪ, ಐಜಿಪಿ ಪೊಲೀಸ್ ಪ್ರಧಾನ ಕಚೇರಿ ಬೆಂಗಳೂರು, ಎಂ.ಬಿ.ಬೋರಲಿಂಗಯ್ಯ, ಡಿಐಜಿ ದಕ್ಷಿಣ ವಲಯ ಬೆಂಗಳೂರು, ಸಿ.ವಂಸಿಕೃಷ್ಣ ಡಿಐಜಿ ಆರ್ಥಿಕ ಅಪರಾಧ ವಿಭಾಗ ಸಿಐಡಿ ಹಾಗೂ ಸಿ.ಬಿ.ರಿಷ್ಯಂತ್ ಅವರನ್ನು ಮಂಗಳೂರು ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ- ಬ್ರಾಹ್ಮಣ ಸಮಾಜದ ಜತೆ ನನ್ನ ಸಂಬಂಧ ಮಧುರವಾಗಿದೆ: ಎಂ ಬಿ ಪಾಟೀಲ್
ಇಂದು ಸಂಜೆಯೊಳಗೆ ಎಸ್ ಪಿಗಳ ಮಟ್ಟದಲ್ಲೂ ಸಹ ಅಧಿಕಾರಿಗಳು ವರ್ಗಾವಣೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ