ಬೆಂಗಳೂರು : ಗಾರ್ಡನ್ ಸಿಟಿಗೆ ಉಗ್ರರ ಕರಿ ನೆರಳು ಬಿದ್ದಿದೆ. ಐವರು ಶಂಕಿತ ಉಗ್ರರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಶಂಕಿತರು ಸದ್ದಿಲ್ಲದೆ ಉಗ್ರರ ಜೊತೆಗೆ ಕೈ ಜೋಡಿಸಿದ್ದರು ಎನ್ನಲಾಗಿದೆ. ಶಂಕಿತ ಉಗ್ರರ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಯಿಂದ ದೊರೆತ ಮಾಹಿತಿ ಆಧಾರದ ಮೇಲೆ ಸಿಸಿಬಿ ಪೊಲೀಸರು ಇವರನ್ನು ಬಂಧಿಸಿದ್ದಾರೆ. 


COMMERCIAL BREAK
SCROLL TO CONTINUE READING

ಐವರು ಶಂಕಿತರ  ಹೆಡೆಮುರಿ ಕಟ್ಟಿದ ಸಿಸಿಬಿ :
ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಉಗ್ರ ಚಟುವಟಿಕೆಗೆ ಶಂಕಿತರು ಯೋಜನೆ ರೂಪಿಸಿರುವುದು ಬೆಳಕಿಗೆ ಬಂದಿದೆ. ಆದರೆ ಸಿಸಿಬಿ, ಕೇಂದ್ರ ಗುಪ್ತಚರ ಕಾರ್ಯಾಚರಣೆಯಿಂದ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಬೆಂಗಳೂರಿನಲ್ಲಿ ಕಾರ್ಯ ನಿರತರಾಗಿದ್ದ ಐವರು ಶಂಕಿತರನ್ನು ಸಿಸಿಬಿ ಬಂಧಿಸಿದೆ. ಬಂಧಿತ ಶಂಕಿತ ಉಗ್ರರಲ್ಲಿ ಬಹುತೇಕರು ರೌಡಿ ಶೀಟರ್ ಗಳು ಎನ್ನಲಾಗಿದೆ. ಉಮರ್, ಸುಹೈಲ್, ತಬ್ರೇಜ್,ಮುದಾಸಿರ್, ಫೈಜಲ್ ರಬ್ಬಾನಿ ಬಂಧಿತರು.  


ಇದನ್ನೂ ಓದಿ : ಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಚಿಪ್ಪು ಗ್ಯಾರಂಟಿ: ಸಚಿವ ಶಿವರಾಜ್ ತಂಗಡಗಿ


ಬಂಧಿತರು ಬೆಂಗಳೂರು ಮೂಲದವರು : 
ಶಂಕಿತ ಉಗ್ರರೆಲ್ಲರೂ ಬೆಂಗಳೂರಿನ ನಿವಾಸಿಗಳಾಗಿದ್ದಾರೆ. ಈ ಬಂಧಿತರು ಯಾವ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದರು ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬಂಧಿತರು ಉಗ್ರರ ಜೊತೆ ಸಂಪರ್ಕ ಬೆಳೆಸಿದ್ದು, ವಿಧ್ವಂಸಕ ಕೃತ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದರು. ಹೇಗೆಲ್ಲಾ ಸ್ಫೋಟ ನಡೆಸಬೇಕು ಎನ್ನುವುದರ ಬಗ್ಗೆ ತರಬೇತಿ ಪಡೆದಿದ್ದರು. ಅಲ್ಲದೆ ಬೆಂಗಳೂರಿನಲ್ಲಿ ಎಲ್ಲೆಲ್ಲಿ ಬ್ಲಾಸ್ಟ್ ಮಾಡಬೇಕು ಎನ್ನುವುದರ ಬಗ್ಗೆ , ಬಂಧಿತರು ಉಗ್ರರಿಂದ ಮಾಹಿತಿ ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ. 


ಸ್ಪೋಟಕ್ಕೆ ತಯಾರಿ ನಡೆಸಿದ್ದ ಬಂಧಿತರು : 
ಅವರು ಪಡೆದ ತರಬೇತಿ ಮತ್ತು ರೂಪಿಸಿರುವ ಯೋಜನೆಗೆ ಅನುಗುಣವಾಗಿ ಬೆಂಗಳೂರಿನ ಎಲ್ಲಾ ಕಡೆಯೂ ಈ ಟೀಂ ಆ್ಯಕ್ಟೀವ್ ಆಗಿತ್ತು. ಸ್ಪೋಟ ನಡೆಸುವ ತಯಾರಿಸಿ ಮಾಡಿಕೊಂಡು ಯೋಜನೆ ಕಾರ್ಯರೂಪಕ್ಕೆ  ಕಾಯುತ್ತಿದ್ದರು. ಸದ್ಯ ಸಿಸಿಬಿ ವಶದಲ್ಲಿರುವ ಐವರು ಶಂಕಿತರ ವಿಚಾರಣೆ ಮುಂದುವರೆದಿದೆ. 


ಇದನ್ನೂ ಓದಿ :  ಬರಗಾಲ ಘೋಷಣೆ ಮಾಡಿ, ಪ್ರತಿ ಕ್ಷೇತ್ರಕ್ಕೂ 1 ಕೋಟಿ ಅನುದಾನ ನೀಡಿ: ಬಸವರಾಜ ಬೊಮ್ಮಾಯಿ


ಉಗ್ರ ಚಟುವಟಿಕೆಯಲ್ಲಿ ತೊಡಗಿದ ರೌಡಿಶೀಟರ್ ಗಳು :    
ಬಂಧಿತರು ಎಲ್ಲರೂ ಆರ್ ಟಿ ನಗರದ ರೌಡಿ ಶೀಟರ್ ಗಳು. ಕೊರೊನಾ  ಕಾಲದಲ್ಲಿ ಇವರು  ಓರ್ವನನ್ನ ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದರು. ಈ ವೇಳೆ ಜೈಲಿನಲ್ಲಿ ಐವರಿಗೂ ಶಂಕಿತ ಉಗ್ರರ ಪರಿಚಯ ಆಗಿತ್ತು. ಹೀಗೆ ಪರಿಚಯ ಮುಂದೆ ಇವರು ಕೂಡಾ ಭಯೋತ್ಪಾದನೆಯ ಹಾದಿ ತುಳಿಯುವಂತೆ ಮಾಡಿದೆ ಎನ್ನಲಾಗಿದೆ. 


ಜೈಲಿನಲ್ಲಿ ಯೋಜನೆಗೆ ಸಂಚು : 
ಜೈಲಿನಿಂದ ಹೊರ ಬಂದು ವಿಧ್ವಂಸಕ ಕೃತ್ಯಕ್ಕೆ ಯೋಜನೆ ರೂಪಿಸಿದ್ದರು.  
ಬಾಂಬ್ ಗೆ ಬೇಕಾದ ರಾ ಮೆಟೀರಿಯಲ್ ರೆಡಿ ಮಾಡಿದ್ದರು. ಇವರ ಜೊತೆ 
ಹಲವರು ಸೇರಿ ಕೃತ್ಯಕ್ಕೆ ಪ್ಲಾನ್ ನಡೆಸಿದ್ದರು ಎನ್ನಲಾಗಿದೆ. ಇದೀಗ  ಇವರನ್ನು ಬಂಧಿಸಿರುವ ಸಿಸಿಬಿ ಇವರಿಗೆ ಲಿಂಕ್ ಇರೋ ಮತ್ತಷ್ಟು ಜನರ ಹುಡುಕಾಟ ನಡೆಸಿದೆ. ಸುಮಾರು ಹತ್ತಕ್ಕೂ ಹೆಚ್ಚು ಜನರು ಸೇರಿ ದೊಡ್ಡ ಮಟ್ಟದ ಸ್ಫೋಟ ಮಾಡುವ ಪ್ಲಾನ್ ರೂಪಿಸಿದ್ದರು ಎನ್ನಲಾಗಿದೆ. 


ಶಂಕಿತ ಉಗ್ರರ ಬಳಿ ಪತ್ತೆಯಾದ ವಸ್ತುಗಳು  :
1) 4 ವಾಕಿಟಾಕಿ..
2) 7 ಕಂಟ್ರಿ ಮೇಡ್ ಪಿಸ್ತೂಲ್..
 3) 42 ಸಜೀವ ಗುಂಡುಗಳು..
 4) ಮದ್ದುಗುಂಡುಗಳು..
5 ) 2 ಡ್ರ್ಯಾಗರ್..
6 ) 2 ಸೆಟಲೈಟ್ ಫೋನ್ ಗಳು..
 7 ) 4 ಗ್ರೆನೈಡ್ ಗಳು ಪತ್ತೆ..


ಇದನ್ನೂ ಓದಿ :  ಮೂರು ಜ್ಯೋತಿಗಳಿಗೆ ಬಂಪರ್ ! ರಾಜ್ಯದ ಅರ್ಧ ಕೋಟಿ ಕುಟುಂಬಗಳಿಗೆ ನೇರ ಲಾಭ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.